ಮುಲಾಯಂಗಾಗಿ ಅಯೋಧ್ಯೆಯಲ್ಲಿ ನಡೆದ 77 ದಿನಗಳ ಯಜ್ಞ ಅಂತ್ಯ

ಸಮಾಜವಾದಿ ಪಕ್ಷದ ಹಿರಿಯ ಮುಖಂಡ ಮುಲಾಯಂ ಸಿಂಗ್ ಯಾದವ್ ಹುಟ್ಟುಹಬ್ಬದ ಪ್ರಯುಕ್ತ ಅಯೋಧ್ಯೆಯಲ್ಲಿ ನಡೆದ 77 ದಿನಗಳ ಯಜ್ಞ ಶನಿವಾರ ಅಂತ್ಯಗೊಂಡಿದೆ...
ಸಮಾಜವಾದಿ ಪಕ್ಷದ ಹಿರಿಯ ಮುಖಂಡ ಮುಲಾಯಂ ಸಿಂಗ್ ಯಾದವ್(ಸಂಗ್ರಹ ಚಿತ್ರ)
ಸಮಾಜವಾದಿ ಪಕ್ಷದ ಹಿರಿಯ ಮುಖಂಡ ಮುಲಾಯಂ ಸಿಂಗ್ ಯಾದವ್(ಸಂಗ್ರಹ ಚಿತ್ರ)

ಅಯೋಧ್ಯೆ: ಸಮಾಜವಾದಿ ಪಕ್ಷದ ಹಿರಿಯ ಮುಖಂಡ ಮುಲಾಯಂ ಸಿಂಗ್ ಯಾದವ್ ಅವರ ಹುಟ್ಟುಹಬ್ಬದ ಪ್ರಯುಕ್ತ ಅಯೋಧ್ಯೆಯಲ್ಲಿ ನಡೆದ 77 ದಿನಗಳ ಯಜ್ಞ ಶನಿವಾರ ಅಂತ್ಯಗೊಂಡಿದೆ.

76ನೇ ವರ್ಷದ ಹುಟ್ಟುಹಬ್ಬಕ್ಕಾಗಿ ಮುಲಾಯಂ ಸಿಂಗ್ ಅವರಿಗಾಗಿ ಅಯೋಧ್ಯೆಯ ಶ್ರೀಕೃಷ್ಣ ಗೋಶಾಲೆಯಲ್ಲಿ ಯಜ್ಞವೊಂದನ್ನು ಆಯೋಜಿಸಲಾಗಿತ್ತು. ಈ ಯಜ್ಞ ಕಳೆದ ವರ್ಷ ನವೆಂಬರ್ 22ಕ್ಕೆ ಆರಂಭವಾಗಿತ್ತು. 77 ದಿನಗಳ ಕಾಲ ನಡೆದ ಈ ಯಜ್ಞ ಇಂದು ಅಂತ್ಯಗೊಂಡಿದೆ.

ಈ ಕುರಿತಂತೆ ಮಾತನಾಡಿರುವ ಸಮಾಜವಾದಿ ಪಕ್ಷದ ಅಧ್ಯಕ್ಷ ಜಯಶಂಕರ್ ಪಾಂಡೆ ಅವರು, ಮುಲಾಯಂ ಅವರ ಆರೋಗ್ಯ ಹಾಗೂ ಆಯಸ್ಸಿನ ವೃದ್ಧಿಗಾಗಿ ಈ ಯಜ್ಞವನ್ನು ಆಯೋಜಿಸಲಾಗಿತ್ತು ಎಂದು ಹೇಳಿದ್ದಾರೆ. ಮುಲಾಯಂ ಸಿಂಗ್ ಗಾಗಿ ಆಯೋಜಿಸಿದ್ದ ಈ ಯಜ್ಞಕ್ಕೆ ವಿಶ್ವ ಹಿಂದೂ ಪರಿಷತ್ ಸಂಘಟನೆ ಈ ಹಿಂದೆ ವಿರೋಧ ವ್ಯಕ್ತಪಡಿಸಿತ್ತು. ಯಜ್ಞವನ್ನು ರದ್ದು ಮಾಡುವಂತೆ ಆಗ್ರಹಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com