ಎನ್ ಡಿ ಆರ್ ಎಫ್ ನಿಂದ 162 ನಾಯಿಗಳಿಗೆ ತರಬೇತಿ: ರಕ್ಷಣಾ ಕಾರ್ಯಾಚರಣೆಗಳಲ್ಲಿ ಬಳಕೆ

ನೈಸರ್ಗಿಕ ವಿಪತ್ತು ಸಂಭವಿಸಿದ ವೇಳೆ ರಕ್ಷಣಾ ಕಾರ್ಯಾಚರಣೆಗೆ ನಾಯಿಗಳನ್ನು ಬಳಸಿಕೊಳ್ಳಲು ಭಾರತದಲ್ಲಿ ಮೊದಲ ಯತ್ನ ನಡೆದಿದೆ.
ಎನ್ ಡಿ ಆರ್ ಎಫ್ ನಿಂದ 162 ನಾಯಿಗಳಿಗೆ ತರಬೇತಿ (ಸಾಂಕೇತಿಕ ಚಿತ್ರ)
ಎನ್ ಡಿ ಆರ್ ಎಫ್ ನಿಂದ 162 ನಾಯಿಗಳಿಗೆ ತರಬೇತಿ (ಸಾಂಕೇತಿಕ ಚಿತ್ರ)

ನವದೆಹಲಿ: ನೈಸರ್ಗಿಕ ವಿಪತ್ತು ಸಂಭವಿಸಿದ ವೇಳೆ ರಕ್ಷಣಾ ಕಾರ್ಯಾಚರಣೆಗೆ ನಾಯಿಗಳನ್ನು ಬಳಸಿಕೊಳ್ಳಲು ಭಾರತದಲ್ಲಿ ಮೊದಲ ಯತ್ನ ನಡೆದಿದೆ. ರಕ್ಷಣಾ ಕಾರ್ಯಾಚರಣೆಯಲ್ಲಿ ಉಪಯೋಗವಾಗುವಂತೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳ ( ಎನ್ ಡಿ ಆರ್ ಎಫ್)  ತಂಡ ಸುಮಾರು 162 ನಾಯಿಗಳಿಗೆ ತರಬೇತಿ ನೀಡುತ್ತಿದೆ.
ಎನ್ ಡಿ ಆರ್ ಎಫ್ ತಂಡ ಉತ್ತರಾಖಂಡ್, ಜಮ್ಮು-ಕಾಶ್ಮೀರ, ಚೆನ್ನೈ, ನೇಪಾಳದಲ್ಲಿ ನೈಸರ್ಗಿಕ ವಿಪತ್ತು ಸಂಭವಿಸಿದ ವೇಳೆ ಸಮರ್ಥವಾಗಿ ರಕ್ಷಣಾ ಕಾರ್ಯಾಚರಣೆ ನಡೆಸಿತ್ತು ಅರ್ಬನ್ ಸರ್ಚ್ ಆಂಡ್ ರೆಸ್ಕ್ಯೂ ಕಾರ್ಯಾಚರಣೆಗಳಿಗೆ ಸಹಾಯವಾಗುವಂತೆ 162 ನಾಯಿಗಳಿಗೆ ತರಬೇತಿ ನೀಡಲಾಗುತ್ತಿದೆ.
ಅವಶೆಷಗಳಡಿ ಸಿಲುಕಿರುವ ಜೀವಗಳನ್ನು ಗುರುತಿಸಲು ನಾಯಿಗಳಿಗೆ ನೀಡಲಾಗುವ ತರಬೇತಿ ಸಹಾಯಕಾರಿಯಾಗಲಿದೆ ಎಂಬುದು ಎನ್ ಡಿ ಆರ್ ಎಫ್ ನ ಪ್ರಧಾನ ನಿರ್ದೇಶಕ ಒಪಿ ಸಿಂಗ್ ಅವರ ಅಭಿಪ್ರಾಯವಾಗಿದೆ.  
ಅವಶೆಷಗಳಡಿ ಇರುವವರನ್ನು ಪತ್ತೆ ಮಾಡುವುದರಲ್ಲಿ ಮನುಷ್ಯರಿಗಿಂತ ನಾಯಿಗಳಿಗೆ ಹೆಚ್ಚು ಸೂಕ್ಷ್ಮತೆ ಇದೆ ಎಂಬುದು ಈ ಹಿಂದೆ ಕೈಗೊಂಡ ಹಲವು ಕಾರ್ಯಾಚರಣೆಗಳಲ್ಲಿ ಸಾಬೀತಾಗಿದೆ. ನಾಯಿಗಳ ವಿಶೇಷತೆಯನ್ನು ಸಕಾರಾತ್ಮಕವಾಗಿ ಬಳಸಿಕೊಳ್ಳಲು ಎನ್ ಡಿ ಆರ್ ಎಫ್ ಮುಂದಾಗಿದ್ದು ಭಾರತದಲ್ಲಿ ಮೊದಲ ಬಾರಿಗೆ ರಕ್ಷಣಾ ಕಾರ್ಯಾಚರಣೆಗಳಿಗೆ ಉಪಯೋಗವಾಗುವಂತೆ 162 ನಾಯಿಗಳ ತಂಡವೊಂದಕ್ಕೆ ತರಬೇತಿ ನೀಡಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com