ಉಗ್ರ  ಡೇವಿಡ್ ಹೆಡ್ಲಿ
ಉಗ್ರ ಡೇವಿಡ್ ಹೆಡ್ಲಿ

ಮುಂಬೈ ದಾಳಿ ಸಂಚಿಗೆ ಐಎಸ್ಐ, ಪಾಕಿಸ್ತಾನ ಸರ್ಕಾರದ ಬೆಂಬಲ ಇತ್ತು : ಉಗ್ರ ಹೆಡ್ಲಿ

26 /11 ರ ಮುಂಬೈ ದಾಳಿಗೆ ಪಾಕಿಸ್ತಾನದ ಉಗ್ರ ಸಂಘಟನೆ ಲಷ್ಕರ್-ಎ- ತೊಯ್ಬಾ ರುವಾರಿಯಾಗಿದ್ದು ಇದಕ್ಕೆ ಪಾಕ್ ನ ಗುಪ್ತಚರ ಇಲಾಖೆ ಐಎಸ್ಐ ಬೆಂಬಲವೂ ಇತ್ತು

ನವದೆಹಲಿ: 26 /11 ರ ಮುಂಬೈ ದಾಳಿಗೆ ಪಾಕಿಸ್ತಾನದ ಉಗ್ರ ಸಂಘಟನೆ ಲಷ್ಕರ್-ಎ- ತೊಯ್ಬಾ ರುವಾರಿಯಾಗಿದ್ದು ಇದಕ್ಕೆ ಪಾಕ್ ನ ಗುಪ್ತಚರ ಇಲಾಖೆ ಐಎಸ್ಐ ಬೆಂಬಲವೂ ಇತ್ತು ಎಂದು ಪಾಕಿಸ್ತಾನಿ ಅಮೆರಿಕನ್ ಉಗ್ರ ಡೇವಿಡ್ ಹೆಡ್ಲಿ ತಪ್ಪೊಪ್ಪಿಕೊಂಡಿದ್ದಾನೆ.
ಸಿಎನ್ಎನ್-ಐಬಿಎನ್ ನಲ್ಲಿ ಪ್ರಕಟವಾಗಿರುವ ವರದಿ ಪ್ರಕಾರ ಎನ್ಐಎ ತನಿಖೆ ವೇಳೆ ತನ್ನನ್ನು ಪಾಕಿಸ್ತಾನದ ಐಎಸ್ಐ ನ ಮೇಜರ್ ಇಕ್ಬಾಲ್ ಹಾಗೂ ಸಮೀರ್ ಅಲಿ ನಿಯಂತ್ರಿಸುತ್ತಿತ್ತು ಇದರೊಂದಿಗೆ ಮುಂಬೈ ದಾಳಿಯ ಮತ್ತೋರ್ವ ರುವಾರಿಯಾದ ಲಷ್ಕರ್-ಎ- ತೊಯ್ಬಾ ಸಂಘಟನೆಯ ಉಗ್ರ ಲಖ್ವಿಯನ್ನು ಐಎಸ್ಐ ನ ಬ್ರಿಗೇಡಿಯರ್ ರಿವಾಜ್  ನಿಯಂತ್ರಿಸುತ್ತಿದ್ದ ಎಂದು ಹೆಡ್ಲಿ ಹೇಳಿದ್ದಾನೆ. 
ಮುಂಬೈ ದಾಳಿಯ ಬಗ್ಗೆ ಮತ್ತೊಂದು ಆಘಾತಕಾರಿ ಅಂಶವನ್ನು ಬಹಿರಂಗಪಡಿಸಿರುವ ಡೇವಿಡ್ ಹೆಡ್ಲಿ, 2008 ರ ದಾಳಿ ಪ್ರಕರಣದಲ್ಲಿ ಲಖ್ವಿ ಬಂಧನದ ನಂತರ ಐಎಸ್ಐ ಮುಖ್ಯಸ್ಥ  ಸುಜಾಪಾಶಾ ಲಖ್ವಿಯನ್ನು ಭೇಟಿ ಮಾಡಿದ್ದರು, ಮುಂಬೈ ದಾಳಿ ವೇಳೆ ಗೌಪ್ಯ ಮಾಹಿತಿಗಳನ್ನು ರವಾನೆ ಮಾಡಲು ಐಎಸ್ಐ ತನಗೆ ಹಣ ನೀಡಿತ್ತು. 2008 ರ ದಾಳಿಗೂ ಮುನ್ನ ಭಾರತದ ಉಪರಾಷ್ಟ್ರಪತಿ ನಿವಾಸ, ಇಂಡಿಯಾ ಗೇಟ್, ನವದೆಹಲಿಯಲ್ಲಿರುವ ಸಿಬಿಐ ಕಚೇರಿಯ ಕುರಿತಂತೆ ಮಹತ್ವದ ಮಾಹಿತಿಗಳನ್ನು ರನಾವೆ ಮಾಡಿದ್ದಾಗಿ ಹೆಡ್ಲಿ ತನಿಖೆ ವೇಳೆ ಹೇಳಿದ್ದಾನೆ. 26 /11 ರ ಮುಂಬೈ ದಾಳಿಗೆ ಪಾಕಿಸ್ತಾನ ಸರ್ಕಾರದ ಸಂಪೂರ್ಣ ಬೆಂಬಲ ಇತ್ತು ಎಂದು ಡೇವಿಡ್ ಹೆಡ್ಲಿ ಹೇಳಿಕೆ ನೀಡಿದ್ದಾನೆ.

Related Stories

No stories found.

Advertisement

X
Kannada Prabha
www.kannadaprabha.com