ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ, ಖ್ಯಾತ ವ್ಯಂಗ್ಯಚಿತ್ರಕಾರ ತೈಲಾಂಗ್ ನಿಧನ

ಖ್ಯಾತ ವ್ಯಂಗ್ಯಚಿತ್ರಕಾರ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಸುಧೀರ್ ತೈಲಾಂಗ್ ಶನಿವಾರ ನಿಧನ...
ಸುಧೀರ್ ತೈಲಾಂಗ್
ಸುಧೀರ್ ತೈಲಾಂಗ್
Updated on
ನವದೆಹಲಿ: ಖ್ಯಾತ ವ್ಯಂಗ್ಯಚಿತ್ರಕಾರ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಸುಧೀರ್ ತೈಲಾಂಗ್ ಶನಿವಾರ ನಿಧನರಾಗಿದ್ದಾರೆ.
ಭಾರತದ ರಾಜಕೀಯ ವಿಡಂಬನೆ ಬಣ್ಣಿಸಿದ ವ್ಯಂಗ್ಯಚಿತ್ರಕಾರ ಸುಧೀರ್ ತೈಲಾಂಗ್(56) ಅವರು ಕಳೆದು ಎರಡು ವರ್ಷಗಳಿಂದ ಮೆದುಳು ಕ್ಯಾನ್ಸರ್ ನಿಂದ ಬಳಲುತ್ತಿದ್ದರು. 
ಗುರ್ ಗಾಂವ್ ವೇದಾಂತ ಮೆಡಿಸಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಆರೋಗ್ಯದಲ್ಲಿ ಸುಧಾರಣೆ ಕಂಡು ಬರುವುದಿಲ್ಲ ಎಂದು ವೈದ್ಯರು ಖಚಿತ ಪಡಿಸಿದ ನಂತರ ಅವರನ್ನು ಮನೆಗೆ ಕರೆತರಲಾಗಿತ್ತು. 
ನಿನ್ನೆ ಸುಧೀರ್ ತೈಲಾಂಗ್ ನಿಧನರಾಗಿದ್ದು, ಪತ್ನಿ ಮತ್ತು ಓರ್ವ ಪುತ್ರಿಯನ್ನು ಅಗಲಿದ್ದಾರೆ. ಇಂದು ಮಧ್ಯಾಹ್ನ ಎರಡು ಘಂಟೆಗೆ ಲೋಧಿ ರಸ್ತೆಯಲ್ಲಿರುವ ಸ್ಮಶಾನದಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ. 
ತೈಲಾಂಗ್ ಅವರು ಇಂಡಿಯನ್ ಎಕ್ಸ್ ಪ್ರೆಸ್ ಸೇರಿದಂತೆ ಅನೇಕ ಇಂಗ್ಲಿಷ್ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com