ಅನಾಥ ಮಗುವಿಗೆ ಥಳಿಸಿ ಬಲವಂತದಿಂದ ಭಿಕ್ಷೆಗೆ ಕಳುಹಿಸುತ್ತಿದ್ದ ಅಜ್ಜಿ

ತಂದೆ-ತಾಯಿಯನ್ನು ಕಳೆದುಕೊಂಡು ಪ್ರತೀದಿನ ತನ್ನ ಅಜ್ಜಿಯಿಂದಲೇ ಹಿಂಸೆ ಅನುಭವಿಸುತ್ತಿದ್ದ ಹೆಣ್ಣು ಮಗುವೊಂದನ್ನು ಪಶ್ಚಿಮ ಬಂಗಾಳ ಮಕ್ಕಳ ಕಲ್ಯಾಣ ಇಲಾಖಾಧಿಕಾರಿಗಳು ರಕ್ಷಿಸಿದ್ದಾರೆ...
(ಸಾಂದರ್ಭಿಕ  ಚಿತ್ರ)
(ಸಾಂದರ್ಭಿಕ ಚಿತ್ರ)

ಕೋಲ್ಕತಾ: ತಂದೆ-ತಾಯಿಯನ್ನು ಕಳೆದುಕೊಂಡು ಪ್ರತೀದಿನ ತನ್ನ ಅಜ್ಜಿಯಿಂದಲೇ ಹಿಂಸೆ ಅನುಭವಿಸುತ್ತಿದ್ದ ಹೆಣ್ಣು ಮಗುವೊಂದನ್ನು ಪಶ್ಚಿಮ ಬಂಗಾಳ ಮಕ್ಕಳ ಕಲ್ಯಾಣ ಇಲಾಖಾಧಿಕಾರಿಗಳು ರಕ್ಷಿಸಿದ್ದಾರೆ.

ತುಂಪಾ (10)  (ಹೆಸರು ಬದಲಿಸಲಾಗಿದೆ) ಹಿಂದೆ ಅನುಭವಿಸುತ್ತಿದ್ದ ಹೆಣ್ಣು ಮಗುವಾಗಿದ್ದು, ಕೆಲವು ವರ್ಷಗಳ ಹಿಂದೆ ತಂದೆ-ತಾಯಿಯನ್ನು ಕಳೆದುಕೊಂಡಿದ್ದಳು. ಪಶ್ಚಿಮ ಬಂಗಾಳದ ಬಂಕುರ ಜಿಲ್ಲೆಯ ಬಿಷ್ಣುಪುರದಲ್ಲಿ ಶಾಲೆಯೊಂದರಲ್ಲಿ ಹೋಗುತ್ತಿದ್ದಳು. ಆದರೆ, ಬಾಲಕಿ ಶಾಲೆಗೆ ಹೋಗುವುದನ್ನು ಇಷ್ಟ ಪಡದ ಆಕೆಯ ಅಜ್ಜಿ ಪ್ರತೀ ನಿತ್ಯ ಭಿಕ್ಷೆ ಬೇಡಿ ಹಣ ತರುವಂತೆ ಹಿಂಸೆ ನೀಡಿದ್ದಾಳೆ.

ಶಾಲೆಯ ಮಧ್ಯಾಹ್ನ ಊಟದ ಸಮಯದ ವೇಳೆಗೆ ಮನೆಗೆ ಹೋಗುತ್ತಿದ್ದಾಗ ನನ್ನ ಅಜ್ಜಿ ಶಾಲೆಗೆ ಹೋಗದಂತೆ ಥಳಿಸುತ್ತಿದ್ದರು. ಮನೆಯಲ್ಲಿದ್ದವರೆಲ್ಲರೂ ನನಗೆ ಹೊಡೆದು ಹಿಂಸೆ ನೀಡಿದ್ದುತ್ತಿದ್ದರು. ಭಿಕ್ಷಾ ಪಾತ್ರೆಕೊಟ್ಟು ಭಿಕ್ಷೆ ಬೇಡಿ ಹಣವನ್ನು ತರುವಂತೆ ಹೇಳುತ್ತಿದ್ದರು. ಒಂದು ದಿನ ಹಣ ತರದಿದ್ದರೆ. ಆ ದಿನವಿಡೀ ಹೊಡೆಯುತ್ತಿದ್ದರು. ನಾನು ಮತ್ತೆ ಮನೆಗೆ ಹೋಗುವುದಿಲ್ಲ ಎಂದು ಬಾಲಕಿ ಅಧಿಕಾರಿಗಳ ಬಳಿ ಹೇಳಿಕೊಂಡಿದ್ದಾರೆ.

ಘಟನೆ ಬಗ್ಗೆ ಮಾತನಾಡಿರುವ ಅಧಿಕಾರಿಗಳು, ಈಗಾಗಲೇ ಬಾಲಕಿಯನ್ನು ರಕ್ಷಣೆ ಮಾಡಲಾಗಿದ್ದು. ಸಂಬಂಧಿಕರ ಮನೆಯಲ್ಲಿ ಇರಲು ಬಾಲಕಿ ಇಚ್ಛಿಸುತ್ತಿಲ್ಲ. ಹೀಗಾಗಿ ಮಗುವನ್ನು ಬಂಕುನ ಟೌನ್ ನಲ್ಲಿರುವ ಮಕ್ಕಳ ರಕ್ಷಣಾ ಮನೆಗೆ ಕಳುಹಿಸಲಾಗಿದೆ. ಮಗುವಿನ ವಿದ್ಯಾಭ್ಯಾಸಕ್ಕೆ ಸಹಾಯ ಮಾಡಲಾಗುತ್ತಿದ್ದು, ಬಾಲಕಿಯನ್ನು ಮತ್ತೊಂದು ಶಾಲೆಗೆ ಸೇರಿಸಲಾಗುತ್ತದೆ ಎಂದು ಹೇಳಿದ್ದಾರೆ.

ಘಟನೆ ಬೆಳಕಿಗೆ ಬರುತ್ತಿದ್ದಂತೆ ಬಾಲಕಿಯ ಅಜ್ಜಿಯ ವಿರುದ್ಧ ಎಫ್ಐಆರ್ ದಾಖಲಿಸಿಕೊಳ್ಳಲಾಗಿದ್ದು, ಎನ್ ಜಿಒಗಳ ಸಹಾಯದ ಮೂಲಕ ಪ್ರಕರಣದ ತನಿಖೆಯನ್ನು ನಡೆಸಲಾಗುತ್ತಿದೆ. ಪ್ರಕರಣ ಸಂಬಂಧ ಅಜ್ಜಿ ಇದೀಗ ತಲೆಮರೆಸಿಕೊಂಡಿದ್ದು, ಅಜ್ಜಿಯ ಬಳಿ ಯಾವುದೇ ಮೊಬೈಲ್ ಫೋನ್ ಇಲ್ಲ. ಆದರೂ ಅಕೆಯನ್ನು ಹುಡುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿ ನೀಲ್ ಕಾಂತ್ ಸುಧೀರ್ ಕುಮಾರ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com