ತೇಜಸ್ವಿ ಯಾದವ್
ದೇಶ
ನಿತೀಶ್ ಕುಮಾರ್ ನನ್ನ ರಾಜಕೀಯ ಗುರು: ತೇಜಸ್ವಿ ಯಾದವ್
ಲಾಲು ಪ್ರಸಾದ್ ಯಾದವ್ ಪುತ್ರ ತೇಜಸ್ವಿ ಯಾದವ್ ಅವರು ಹಿರಿಯ ಜೆಡಿಯು ನಾಯಕ, ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ತಮ್ಮ 'ರಾಜಕೀಯ ಗುರು'..
ಪಾಟ್ನಾ: ಬಿಹಾರದ ಉಪಮುಖ್ಯಮಂತ್ರಿ ಹಾಗೂ ಜೆಡಿಯು ಅಧ್ಯಕ್ಷ ಲಾಲು ಪ್ರಸಾದ್ ಯಾದವ್ ಪುತ್ರ ತೇಜಸ್ವಿ ಯಾದವ್ ಅವರು ಹಿರಿಯ ಜೆಡಿಯು ನಾಯಕ, ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ತಮ್ಮ 'ರಾಜಕೀಯ ಗುರು' ಎಂದು ಹೇಳಿದ್ದಾರೆ.
ಬಿಹಾರ್ ವಿಧಾನಸಭೆಯ 95ನೇ ಸ್ಥಾಪನಾ ದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದ ಅವರು, 'ನಾನು ನಿತೀಶ ಅವರನ್ನು ರಾಜಕೀಯ ಗುರುವಾಗಿ ನೋಡುತ್ತೇನೆ' ಅವರಿಂದ ತಾವು ಉತ್ತಮ ಆಡಳಿತದ ಪಾಠವನ್ನು ಕಲಿಯುತ್ತಿದ್ದೇನೆ ಎಂದು ಹೇಳಿದ್ದಾರೆ..
'ಅವರು ಜಾತ್ಯತೀತ ಸಮ್ಮಿಶ್ರ ಸರ್ಕಾರದ ಮಖ್ಯಸ್ಥರಾಗಿದ್ದು, ಅವರದೇ ಶೈಲಿಯಲ್ಲಿ ಆಡಳಿತ ನಡೆಸುತ್ತಾರೆ. ಅವರ ಕಾರ್ಯವೈಖರಿಯನ್ನು ನಾನು ಮತ್ತು ಉಳಿದ ಯುವ ನಾಯಕರು ಕಲಿತುಕೊಳ್ಳುತ್ತಿದ್ದೇವೆ', ಎಂದು ಅವರು ತಿಳಿಸಿದ್ದಾರೆ.
ತಾವೊಬ್ಬ ಉತ್ತಮ ವಿದ್ಯಾರ್ಥಿ ಎಂದು ಹೇಳಿದ ತೇಜಸ್ವಿ ಯಾದವ್ ವಿಧಾನಸಭೆಯ ಹಿರಿಯ ಸದಸ್ಯರು ನಮ್ಮಂತಹ ಯುವಕರಿಗೆ ಪೋಷಕರಿದ್ದ ಹಾಗೆ ಎಂದಿದ್ದಾರೆ
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ