ಸಿಎಂ ಫಡ್ನವೀಸ್ ಪತ್ನಿಗೆ ಕಂಟಕವಾಯ್ತು ಪವಾಡ ರೂಪದಲ್ಲಿ ಬಂದ ಚಿನ್ನ

ಪವಾಡದ ರೂಪದಲ್ಲಿ ಸ್ವಾಮಿಯೊಬ್ಬರು ನೀಡಿದ ಚಿನ್ನದ ಸರವೊಂದನ್ನು ಸ್ವೀಕರಿಸುವ ಮೂಲಕ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಪತ್ನಿ ಇದೀಗ ಸಂಕಟವೊಂದಕ್ಕೆ ಸಿಲುಕಿದ್ದಾರೆ...
ಸಿಎಂ ಫಡ್ನವೀಸ್ ಪತ್ನಿಗೆ ಕಂಟಕವಾಯ್ತು ಪವಾಡ ರೂಪದಲ್ಲಿ ಬಂದ ಚಿನ್ನ
ಸಿಎಂ ಫಡ್ನವೀಸ್ ಪತ್ನಿಗೆ ಕಂಟಕವಾಯ್ತು ಪವಾಡ ರೂಪದಲ್ಲಿ ಬಂದ ಚಿನ್ನ

ಮುಂಬೈ: ಪವಾಡದ ರೂಪದಲ್ಲಿ ಸ್ವಾಮಿಯೊಬ್ಬರು ನೀಡಿದ ಚಿನ್ನದ ಸರವೊಂದನ್ನು ಸ್ವೀಕರಿಸುವ ಮೂಲಕ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಪತ್ನಿ ಇದೀಗ ಸಂಕಟವೊಂದಕ್ಕೆ ಸಿಲುಕಿದ್ದಾರೆ.

ಪುಣೆ ಮೂಲದ ಶೈಕ್ಷಣಿಕ ಸಂಸ್ಥೆಯೊಂದು ಪ್ರಶಸ್ತಿ ಪ್ರದಾನ ಸಮಾರಂಭವೊಂದನ್ನು ಆಯೋಜಿಸಿತ್ತು. ಸಮಾರಂಭಕ್ಕೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಪತ್ನಿ ಹಾಗೂ ದೇವಮಾನವ ಗುರುವಾನಂದ ಸ್ವಾಮಿ ಅವರು ಬಂದಿದ್ದರು. ಕಾರ್ಯಕ್ರಮವನ್ನು ಮರಾಠಿ ವಾಹಿನಿಯೊಂದು ಪ್ರಸಾರ ಮಾಡುತ್ತಿತ್ತು. ಕಾರ್ಯಕ್ರಮ ನಡೆಯುವ ವೇಳೆ ಗುರುವಾನಂದ ಸ್ವಾಮಿ ಅವರು ಗಾಯಿಯಲ್ಲಿ ಕೈಯಾಡಿಸಿ ಶೂನ್ಯದಿಂದ ಚಿನ್ನದ ಸರವೊಂದನ್ನು ಸೃಷ್ಟಿಸಿ ಅದನ್ನು ಫಡ್ನವೀಸ್ ಅವರ ಪತ್ನಿ ಅಮೃತಾ ಅವರಿಗೆ ಕೊಟ್ಟಿದ್ದರು. ಈ ವಿಡಿಯೋ ಇದೀಗ ಹಲವು ಟೀಕೆಗಳಿಗೆ ಕಾರಣವಾಗಿದ್ದು, ಪವಾಡದ ಹೆಸರಿನಲ್ಲಿ ನೀಡಿದ್ದ ಸರವನ್ನು ಸ್ವೀಕರಿಸಿದ್ದ ಅಮೃತಾ ಅವರ ವಿರುದ್ಧ ಹಲವು ವಿರೋಧಗಳು ವ್ಯಕ್ತವಾಗುತ್ತಿವೆ.

ಘಟನೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಮಹಾರಾಷ್ಟ್ರ ಅಂಧಶ್ರದ್ಧಾ ನಿರ್ಮೂಲನ ಸಮಿತಿಯ ಕಾರ್ಯನಿರ್ವಾಹಕ ಅಧ್ಯಕ್ಷ ಅವಿನಾಶ್‌ ಪಾಟೀಲ್‌ ಅವರು, ಈ ಬಗ್ಗೆ ಫಡ್ನವೀಸ್ ಅವರು ಸ್ಪಷ್ಟನೆ ನೀಡಬೇಕಿದೆ. ಅಗತ್ಯ ಬಿದ್ದಲ್ಲಿ ಅವರು ಜನತೆ ಬಳಿ ಕ್ಷಮಾಪಣೆ ಕೇಳಬೇಕು. ವೈಜ್ಞಾನಿಕವಾಗಿ ನೀಡುವ ನಿಯಮಗಳನ್ನು ಪಾಲಿಸಿ ಪವಾಡ ಸೃಷ್ಟಿಸಿದ್ದೇ ಆದರೆ. ಪವಾಡ ಸೃಷ್ಟಿಸುತ್ತೇನೆಂದು ಹೇಳುವ ಈ ದೇವಮಾನವನಿಗೆ ನಾವು 21 ಲಕ್ಷ ಬಹುಮಾನವನ್ನು ನೀಡುತ್ತೇವೆ ಎಂದು ಹೇಳಿದ್ದಾರೆ.

ಘಟನೆ ಕುರಿತಂತೆ ಸ್ಪಷ್ಟನೆ ನೀಡಿರುವ ಫಡ್ನವೀಸ್ ಅವರ ಪತ್ನಿ ಅಮೃತಾ ಅವರು, ಪವಾಡಗಳನ್ನು ನಾನೂ ನಂಬುವುದಿಲ್ಲ. ಆದರೆ, ಹಿರಿಯರಿಗೆ ಗೌರವ ಕೊಡಬೇಕಾದದ್ದು ನಮ್ಮ ಧರ್ಮ. ಅದನ್ನು ಹುಟ್ಟಿನಿಂದಲೂ ಬೆಳೆಸಿಕೊಂಡು ಬಂದಿದ್ದೇನೆ. ಹಿರಿಯರು ಆಶೀರ್ವಾದ ರೂಪದಲ್ಲಿ ಕೊಟ್ಟಾಗ ಅದಕ್ಕೆ ಗೌರವ ನೀಡಬೇಕು. ಆಶೀರ್ವಾದ ರೂಪದಲ್ಲಿ ಗುರುವಾನಂದ ಸ್ವಾಮಿಯವರು ನನಗೆ ಸರವನ್ನು ನೀಡಿದರೆ. ಅದಕ್ಕೆ ನಾನು ಗೌರವ ನೀಡಿ ಸ್ವೀಕರಿಸಿದ್ದೇನೆಯೇ ವಿನಃ ನಾನು ಪವಾಡಗಳನ್ನು ನಂಬುವುದಿಲ್ಲ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com