ಮೋದಿ ದತ್ತು ಪಡೆದ ಗ್ರಾಮಕ್ಕೆ ಬಂತು 'ಅಚ್ಚೇ ದಿನ್'

ಸಂಸದ್ ಆದರ್ಶ್ ಗ್ರಾಮ ಯೋಜನೆಯಡಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ದತ್ತು ಪಡೆದುಕೊಂಡಿದ್ದ ಗ್ರಾಮಗಳಿಗೆ ಇದೀಗ ಅಚ್ಚೇ ದಿನ್ ಬಂದಿದ್ದು, ಶೀಘ್ರದಲ್ಲೇ ಗ್ರಾಮಕ್ಕೆ ಉಚಿತ ವಿದ್ಯುತ್ ಸಿಗಲಿದೆ ಎಂದು ಹೇಳಲಾಗುತ್ತಿದೆ...
ಪ್ರಧಾನಮಂತ್ರಿ ನರೇಂದ್ರ ಮೋದಿ (ಸಂಗ್ರಹ ಚಿತ್ರ)
ಪ್ರಧಾನಮಂತ್ರಿ ನರೇಂದ್ರ ಮೋದಿ (ಸಂಗ್ರಹ ಚಿತ್ರ)

ನವದೆಹಲಿ: ಸಂಸದ್ ಆದರ್ಶ್ ಗ್ರಾಮ ಯೋಜನೆಯಡಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ದತ್ತು ಪಡೆದುಕೊಂಡಿದ್ದ ಗ್ರಾಮಗಳಿಗೆ ಇದೀಗ ಅಚ್ಚೇ ದಿನ್ ಬಂದಿದ್ದು, ಶೀಘ್ರದಲ್ಲೇ ಗ್ರಾಮಕ್ಕೆ ಉಚಿತ ವಿದ್ಯುತ್ ಸಿಗಲಿದೆ ಎಂದು ಹೇಳಲಾಗುತ್ತಿದೆ.

ಈ ಹಿಂದೆ ಮೋದಿಯವರು ವಾರಣಾಸಿಯ ಜಯಪುರ ಗ್ರಾಮವನ್ನು ಸಂಸದ್ ಆದರ್ಶ್ ಗ್ರಾಮ ಯೋಜನೆಯಡಿಯಲ್ಲಿ ದತ್ತು ಪಡೆದಕೊಂಡಿದ್ದು, ಗ್ರಾಮದಲ್ಲಿ ಒಟ್ಟು 810 ಕುಟುಂಬಗಳು ವಾಸವಿದ್ದು, ಈ ಎಲ್ಲಾ ಕುಟುಂಬಗಳು ಶೀಘ್ರದಲ್ಲೇ ಉಚಿತ್ ವಿದ್ಯುತ್ ಪಡೆಯಲಿದೆ ಎಂದು ತಿಳಿದುಬಂದಿದೆ.

ಗ್ರಾಮದಲ್ಲಿ ಗ್ರೀನ್ ಸೋಲಾರ್ ಎನರ್ಜಿ ಲಿಮಿಟೆಡ್'ನ್ನು ಸ್ಥಾಪಿಸಲು ಈಗಾಗಲೇ ಯೋಜನೆ ರೂಪಿಸಲಾಗಿದ್ದು, ಈ ಮೂಲಕ ಉಚಿತ ಸೋಲಾರ್ ವಿದ್ಯುತ್ ಸೌಲಭ್ಯವನ್ನು ಗ್ರಾಮದ ಜನತೆ ಪಡೆಯಲಿದೆ. ಈಗಾಗಲೇ ಗ್ರಾಮದಲ್ಲಿ 25 ಕೆಡಬ್ಲ್ಯೂ ಸಾಮರ್ಥ್ಯದ 2 ಪ್ಲಾಂಟ್ ಗಳನ್ನು ಸ್ಥಾಪಿಸಲಾಗಿದ್ದು, ಶೀಘ್ರದಲ್ಲೇ ಕಾರ್ಯ ಆರಂಭವಾಲಗಿದೆ ಎನ್ನಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com