ಮಥುರಾ: ತನ್ನ ಮೇಲಿನ ಅತ್ಯಾಚಾರ ಯತ್ನವನ್ನು ವಿರೋಧಿಸಿ ಅಪ್ರಾಪ್ತೆಯನ್ನು ಯುವಕನೊಬ್ಬ ಸಜೀವವಾಗಿ ದಹನ ಮಾಡಿರುವ ಘಟನೆ ಔರಂಗಬಾದ್ ನಲ್ಲಿ ನಡೆದಿದೆ.
ತಂದೆ ತಾಯಿ ಇಲ್ಲದ ಸಮಯದಲ್ಲಿ ಮನೆಗೆ ನುಗ್ಗಿದ ಭೋಲ ಎಂಬ ಯುವಕ 17 ವರ್ಷದ ಹುಡುಗಿಯ ಮೇಲೆ ಅತ್ಯಾಚಾರವೆಸಗಲು ಮುಂದಾಗಿದ್ದಾನೆ, ಅದಕ್ಕೆ ಅಪ್ರಾಪ್ತೆ ವಿರೋಧ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ಕೋಪಗೊಂಡ ಯುವಕ ಆಕೆಯ ಮೇಲೆ ಸೀಮೆಎಣ್ಣೆ ಸುರಿದು ಜೀವಂತವಾಗಿ ಸುಟ್ಟು ಹಾಕಿದ್ದಾನೆ.
ಅಪ್ರಾಪ್ತೆಯ ಚಿಕ್ಕಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಭೋಲ ವಿರುದ್ಧ ಎಫ್ ಐಆರ್ ದಾಖಲಾಗಿದ್ದು, ಭೋಲ ತಲೆಮರೆಸಿಕೊಂಡಿದ್ದಾನೆ.