ಸಿದ್ಧಿ ವಿನಾಯಕ ದೇವಾಲಯವೂ ಲಷ್ಕರ್ ಟಾರ್ಗೆಟ್ ಆಗಿತ್ತು: ಹೆಡ್ಲಿ

ಮುಂಬೈ ದಾಳಿ ಸಂಬಂಧ ವಿಡಿಯೋ ಕಾನ್ಫರೆನ್ಸ್ ಮೂಲಕ ಮುಂಬೈ ಕೋರ್ಟ್ ನಲ್ಲಿ ವಿಚಾರಣೆ ಎದುರಿಸುತ್ತಿರುವ ಉಷ್ಕರ ಇ ತೊಯ್ಬಾ ಉಗ್ರ ಹೆಡ್ಲಿ ತಮ್ಮ ಟಾರ್ಗೆಟ್...
ಸಿದ್ಧಿವಿನಾಯಕ ದೇವಾಲಯ
ಸಿದ್ಧಿವಿನಾಯಕ ದೇವಾಲಯ

ಮುಂಬೈ: ಮುಂಬೈ ದಾಳಿ ಸಂಬಂಧ ವಿಡಿಯೋ ಕಾನ್ಫರೆನ್ಸ್ ಮೂಲಕ ಮುಂಬೈ ಕೋರ್ಟ್ ನಲ್ಲಿ ವಿಚಾರಣೆ ಎದುರಿಸುತ್ತಿರುವ ಉಷ್ಕರ ಇ ತೊಯ್ಬಾ ಉಗ್ರ ಹೆಡ್ಲಿ ತಮ್ಮ ಟಾರ್ಗೆಟ್ ಪಟ್ಟಿಯಲ್ಲಿ ಮುಂಬೈನ ಸಿದ್ಧಿವಿನಾಯಕ ದೇವಾಲಯವೂ ಇತ್ತು ಎಂದು ಹೇಳಿದ್ದಾನೆ.

ಲಷ್ಕರ್ ನಾಯಕನ ಆದೇಶದಂತೆ ನಾನು ಸಿದ್ಧಿವಿನಾಯಕ ದೇವಾಲಯ, ನೌಕಾನೆಲೆ ಹಾಗೂ ರಕ್ಷಣಾ ವಿಜ್ಞಾನಿಗಳ ಸಮ್ಮೇಳನ ನಡೆಯುವ ಜಾಗಗಳ ವಿಡಿಯೋಗಳನ್ನು ಸೆರೆಹಿಡಿದು ಕಳುಹಿಸಿದ್ದೆ. ಸಾಜಿದ್ ಮಿರ್ ನ ವಿಶೇಷ ಸೂಚನೆ ಮೇರೆಗೆ ನಾನು ಸಿದ್ಧಿ ವಿನಾಯಕ ದೇವಾಲಯದ ವಿಡಿಯೋ ತೆಗೆದಿದ್ದೆ ಎಂದು ಹೇಳಿದ್ದಾನೆ. ಜತೆಗೆ ಭಾರತೀಯ ಸೈನಿಕರನ್ನೇ ಬೇಹುಗಾರಿಕೆಗೆ ಬಳಸಿಕೊಳ್ಳುಂತೆ ಪಾಕ್ ಐಎಸ್ಐ ನನಗೆ ಸೂಚಿಸಿತ್ತು ಎಂದು ಹೇಳಿದ್ದಾನೆ.

ಮುಂಬೈ ಛತ್ರಪತಿ ಶಿವಾಜಿ ಟರ್ಮಿನಸ್(ಸಿಎಸ್ಟಿ) ಅನ್ನೂ ನಾನು ಸರ್ವೇ ಮಾಡಿದ್ದೆ. ಆದರೆ. ಅದು ಉಗ್ರರ ಟಾರ್ಗೆಟ್ ಆಗಿರಲಿಲ್ಲ. ತಾಜ್ ಮೇಲೆ ದಾಳಿ ನಡೆಸಿದ ಬಳಿಕ ಉಗ್ರರಿಗೆ ಎಸ್ಕೇಪ್ ಆಗಲೆಂದು ಸಿಎಸ್ ಟಿ ಯನ್ನು ಸರ್ವೇ ಮಾಡಲಾಗಿತ್ತು ಎಂದು ಹೇಳಿದ್ದಾನೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com