ಮತ್ತೆ ಸಮ-ಬೆಸ ನಿಯಮ: ಇಂದು ಕೇಜ್ರಿವಾಲ್ ರಿಂದ ದಿನಾಂಕ ಪ್ರಕಟ

ಜ.1ರಿಂದ 15 ದಿನಗಳ ಮಟ್ಟಿಗೆ ದೆಹಲಿಯಲ್ಲಿ ಜಾರಿಗೆ ತರಲಾಗಿದ್ದ ಸಮ- ಬೆಸಸಂಖ್ಯೆ ಆಧಾರಿತ ವಾಹನ ಓಡಾಟ ವ್ಯವಸ್ಥೆಯನ್ನು ಮತ್ತೂಮ್ಮೆ ಅನುಷ್ಠಾನಗೊಳಿಸಲು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ:  ಜ.1ರಿಂದ 15 ದಿನಗಳ ಮಟ್ಟಿಗೆ ದೆಹಲಿಯಲ್ಲಿ ಜಾರಿಗೆ ತರಲಾಗಿದ್ದ ಸಮ- ಬೆಸಸಂಖ್ಯೆ ಆಧಾರಿತ ವಾಹನ ಓಡಾಟ ವ್ಯವಸ್ಥೆಯನ್ನು ಮತ್ತೂಮ್ಮೆ ಅನುಷ್ಠಾನಗೊಳಿಸಲು ದೆಹಲಿ ಸರ್ಕಾರ ಮುಂದಾಗಿದೆ. ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ದಿನಾಂಕಗಳನ್ನು ಘೋಷಿಸಲಿದ್ದಾರೆ.  

ಸಿಬಿಎಸ್‌ಇ ಪರೀಕ್ಷೆಗಳು ಮುಗಿದ ಬಳಿಕ, ಅಂದರೆ ಏಪ್ರಿಲ್‌ನಲ್ಲಿ ಸಮ- ಬೆಸಸಂಖ್ಯೆ ವಾಹನ ಓಡಾಟ ವ್ಯವಸ್ಥೆ ಜಾರಿಗೆ ಬರಲಿದೆ ಎಂದು ಮೂಲಗಳು ತಿಳಿಸಿವೆ.

ಜನವರಿಯಲ್ಲಿ ಪ್ರಾಯೋಗಿಕವಾಗಿ 15 ದಿನಗಳ ಕಾಲ ಅನುಷ್ಠಾನಗೊಂಡಿದ್ದ ವ್ಯವಸ್ಥೆ ಕುರಿತು ಸಾರ್ವಜನಿಕರಿಂದ ದೆಹಲಿ ಸರ್ಕಾರ ಅಭಿಪ್ರಾಯ ಸಂಗ್ರಹಿಸಿತ್ತು.  ಆ ಪ್ರಕಾರ 11 ಲಕ್ಷ ಅಭಿಪ್ರಾಯಗಳು ಸಲ್ಲಿಕೆಯಾಗಿವೆ. ಅವುಗಳ ಪರಾಮರ್ಶೆ ನಡೆದಿದೆ ಎಂದು ಸಾರಿಗೆ ಸಚಿವ ಗೋಪಾಲ ರೈ ತಿಳಿಸಿದ್ದಾರೆ.

ಈ ನಡುವೆ ಸಮ-ಬೆಸ ಸಂಖ್ಯೆ ಆಧಾರಿತ ವಾಹನ ಸಂಚಾರ ವ್ಯವಸ್ಥೆ ಮರು ಜಾರಿ ಬಗ್ಗೆ ಚೇಂಜ್‌ ಡಾಟ್‌ ಓಆರ್‌ಜಿ ಎಂಬ ಸಂಸ್ಥೆ ಸಮೀಕ್ಷೆಯೊಂದನ್ನು ನಡೆಸಿದ್ದು, ಅದರಲ್ಲಿ ಶೇ.78ರಷ್ಟು ಜನ ವ್ಯವಸ್ಥೆಯ ಮರುಜಾರಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com