ಉಗ್ರರಿಗಾಗಿ ಸಿದ್ದಿ ವಿನಾಯಕ ದೇವಾಲಯದಲ್ಲಿ ಪವಿತ್ರ ದಾರಗಳನ್ನು ಖರೀದಿಸಿದ್ದೆ: ಡೇವಿಡ್ ಹೆಡ್ಲಿ

ಎಲ್ ಇಟಿ ಉಗ್ರರಿಗಾಗಿ ದೇವಾಸ್ಥಾನದಲ್ಲಿ ಮಾರುವ ಕೆಂಪು ಮತ್ತು ಹಳದಿ ಬಣ್ಣ ಮಿಶ್ರಿತ 1- ಪವಿತ್ರ ದಾರಗಳನ್ನು ಖರೀದಿಸಿದ್ದಾಗಿ ಹೆಡ್ಲಿ ಬಾಯಿ ಬಿಟ್ಟಿದ್ದಾನೆ....
ಡೇವಿಡ್ ಹೆಡ್ಲಿ
ಡೇವಿಡ್ ಹೆಡ್ಲಿ

ಮುಂಬಯಿ:  ಪಾಕ್ ಮೂಲದ ಉಗ್ರ ಡೇವಿಡ್ ಹೆಡ್ಲಿ ಕೋಲ್ಮನ್ ವಿಚಾರಣೆ ಮುಂದುವರಿದಿದ್ದು  ಮುಂಬೈ ಕೋರ್ಟ್ ವಿಚಾರಣೆಯಲ್ಲಿ ಮತ್ತಷ್ಟು ಸ್ಫೋಟಕ ಮಾಹಿತಿಯನ್ನು ನೀಡಿದ್ದಾನೆ.

ಮುಂಬಯಿನ ಸಿದ್ದಿ ವಿನಾಯಕ ದೇವಾಲಯದಲ್ಲಿ ಎಲ್ ಇಟಿ ಉಗ್ರರಿಗಾಗಿ ದೇವಾಸ್ಥಾನದಲ್ಲಿ ಮಾರುವ ಕೆಂಪು ಮತ್ತು ಹಳದಿ ಬಣ್ಣ ಮಿಶ್ರಿತ 10 ಪವಿತ್ರ ದಾರಗಳನ್ನು ಖರೀದಿಸಿದ್ದಾಗಿ ಹೆಡ್ಲಿ ಬಾಯಿ ಬಿಟ್ಟಿದ್ದಾನೆ.

ಆ ದಾರಗಳನ್ನು ಎಲ್ ಇಟಿ ಉಗ್ರರು ತಮ್ಮ ಕೈಗೆ ಕಟ್ಟಿ ಕೊಳ್ಳುವುದರಿಂದ ಅವರನ್ನು ಯಾರು ಅನುಮಾನಿಸಲಾರರು. ತಮ್ಮ ಗುರುತನ್ನು ಮರೆಮಾಚಿ ಅವರು, ಹಿಂದೂಗಳು ಎಂದು ನಂಬಲು ಈ ದಾರಗಳನ್ನು ಕಟ್ಟಿದ್ದಾಗಿ ತಿಳಿಸಿದ್ದಾನೆ.

ಎಲ್ ಇಟಿ ಮುಖ್ಯಸ್ಥ ಝಾಕಿ ಉರ್ ರೆಹಮಾನ್ 26/11 ದಾಳಿಯ ಬಗ್ಗೆ ಬಹಳ ಜಾಗರೂಕತೆ ವಹಿಸಿದ್ದ. ಪಾಕಿಸ್ತಾನದಲ್ಲಿ ಭಾರತ ನಡೆಸಿದ್ದ ಎಲ್ಲಾ ಬಾಂಬ್ ದಾಳಿಗಳ ಪ್ರತೀಕಾರ ತೀರಿಸಿಕೊಳ್ಳಲು ಇದು ಒಳ್ಳೆಯ ಸಮಯ ಎಂದು ಹೇಳಿದ್ದ. ಆದರೆ 26/11 ದಾಳಿಯ ವೇಳೆ ಮುಂಬಯಿ ವಿಮಾನ ನಿಲ್ದಾಣವನ್ನು ಟಾರ್ಗೆಟ್ ಮಾಡದಿದ್ದರಿಂದ ಲಷ್ಕರ್ -ಇ -ತಯ್ಬಾ ಮುಖ್ಯಸ್ಥರು ಅಸಮಾಧಾನ ವ್ಯಕ್ತ ಪಡಿಸಿದ್ದರು ಎಂದು ಮುಂಬಯಿ ವಿಶೇಷ ಕೋರ್ಟ್ ನಲ್ಲಿ ಹೆಡ್ಲಿ ತಿಳಿಸಿದ್ದಾನೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com