ತಿಮ್ಮಪ್ಪನಿಗೆ ಕೋಟಿ ರು. ಮೌಲ್ಯದ ವಜ್ರದ ಕಿರೀಟ..!

ವಿಶ್ವದ ಅತ್ಯಂತ ಶ್ರೀಮಂತ ದೇವರು ಎಂಬ ಖ್ಯಾತಿಗೆ ಪಾತ್ರವಾಗಿರುವ ತಿಮ್ಮಪ್ಪನ ಖಾತೆಗೆ ಮತ್ತೊಂದು ವಜ್ರದ ಕಿರೀಟ ಸೇರ್ಪಡೆಯಾಗಿದ್ದು, ತಮಿಳುನಾಡು ಮೂಲದ ದಂಪತಿಯೊಬ್ಬರು ಸುಮಾರು 1 ಕೋಟಿ ಮೌಲ್ಯದ ವಜ್ರದ ಕಿರೀಟವನ್ನು ಅರ್ಪಿಸಿದ್ದಾರೆ...
ತಿಮ್ಮಪ್ಪನ ಸನ್ನಿಧಿಗೆ ಅರ್ಪಣೆಯಾದ ವಜ್ರ ಖಚಿತ ಕಿರೀಟ (ಚಿತ್ರಕೃಪೆ: ಇಂಡಿಯಾಟುಡೇ)
ತಿಮ್ಮಪ್ಪನ ಸನ್ನಿಧಿಗೆ ಅರ್ಪಣೆಯಾದ ವಜ್ರ ಖಚಿತ ಕಿರೀಟ (ಚಿತ್ರಕೃಪೆ: ಇಂಡಿಯಾಟುಡೇ)

ತಿರುಮಲ: ವಿಶ್ವದ ಅತ್ಯಂತ ಶ್ರೀಮಂತ ದೇವರು ಎಂಬ ಖ್ಯಾತಿಗೆ ಪಾತ್ರವಾಗಿರುವ ತಿಮ್ಮಪ್ಪನ ಖಾತೆಗೆ ಮತ್ತೊಂದು ವಜ್ರದ ಕಿರೀಟ ಸೇರ್ಪಡೆಯಾಗಿದ್ದು, ತಮಿಳುನಾಡು ಮೂಲದ  ದಂಪತಿಯೊಬ್ಬರು ಸುಮಾರು 1 ಕೋಟಿ ಮೌಲ್ಯದ ವಜ್ರದ ಕಿರೀಟವನ್ನು ಅರ್ಪಿಸಿದ್ದಾರೆ.

ಮೂಲತಃ ತಮಿಳುನಾಡಿನ ಕೊಯಮತ್ತೂರು ಮೂಲದ ಬಾಲಮುರುಗನ್ ಮತ್ತು ಪೂಣಿ೯ಮಾ ದ೦ಪತಿಗಳು ಶನಿವಾರ ಆ೦ಧ್ರಪ್ರದೇಶದ ತಿರುಮಲದಲ್ಲಿರುವ ವೆ೦ಕಟೇಶ್ವರ ಸ್ವಾಮಿಗೆ 1 ಕೋಟಿ  ರು. ಮೌಲ್ಯದ ವಜ್ರಖಚಿತ ಚಿನ್ನದ ಕಿರೀಟವನ್ನು ಸಮರ್ಪಿಸಿದ್ದಾರೆ. ಹರಕೆಯ ನಿಮಿತ್ತ ತಾವು ತಿಮ್ಮಪ್ಪನಿಗೆ ಈ ಕಿರೀಟವನ್ನು ಅರ್ಪಿಸುತ್ತಿರುವುದಾಗಿ ಅವರು ಹೇಳಿದ್ದಾರೆ.

ಇನ್ನು ಸುಮಾರು 5000ಕ್ಕೂ ಹೆಚ್ಚು ವರ್ಷಗಳ ಇತಿಹಾಸವುಳ್ಳ ತಿಮ್ಮಪ್ಪ ದೇವಾಲಯಕ್ಕೆ ಚಿನ್ನ, ವಜ್ರ ವೈಡೂರ್ಯಗಳನ್ನು ಅರ್ಪಿಸುವ ಪ್ರಕ್ರಿಯೆಗೆ ನೂರಾರು ವರ್ಷಗಳ ಇತಿಹಾಸವೇ ಇದ್ದು,  ಕರ್ನಾಟಕದ ಹೆಮ್ಮೆಯ ಮತ್ತು ವಿಜಯನಗರ ಸಾಮ್ರಾಜ್ಯದ ಅರಸ ಶ್ರೀಕೃಷ್ಣ ದೇವಾರಾಯನಿಂದ ಹಿಡಿದು ಇತ್ತೀಚಿನ ರಾಜಕಾರಣಿಗಳವರೆಗೆ ಲಕ್ಷಾಂತರ ಮಂದಿ ತಮ್ಮ ಶಕ್ತ್ಯಾನುಸಾರ  ತಿಮ್ಮಪ್ಪನಿಗೆ ಕಾಣಿಕೆಗಳನ್ನು ಅರ್ಪಿಸುತ್ತಾರೆ.

ಕೆಲ ವಷ೯ಗಳ ಹಿ೦ದೆ ಇದೇ ದೇಗುಲಕ್ಕೆ ಕನಾ೯ಟಕದ ಮಾಜಿ ಸಚಿವ, ಗಣಿ ದಣಿ ಗಾಲಿ ಜನಾದ೯ನ ರೆಡ್ಡಿ ಸುಮಾರು 45 ಕೋಟಿ ರು. ಮೌಲ್ಯದ ವಜ್ರಖಚಿತ ಚಿನ್ನದ ಕಿರೀಟವನ್ನು  ಸಮಪಿ೯ಸಿದ್ದರು. ಆದರೆ ಕಿರೀಟದಲ್ಲಿ ರೆಡ್ಡಿ ಅವರ ಹೆಸರು ಕೆತ್ತಲಾಗಿತ್ತು ಎಂಬ ಕಾರಣದಿಂದಾಗಿ ದೇವಾಲಯದ ಆಡಳಿತ ಮಂಡಳಿ ಕಿರೀಟವನ್ನು ತಿರಸ್ಕರಿಸಿತ್ತು. ಇದು ವ್ಯಾಪಕ ಚರ್ಚೆಗೆ  ಕಾರಣವಾಗಿತ್ತು. ಐದು ಸಾವಿರಕ್ಕೂ ಹೆಚ್ಚು ವರ್ಷಗಳ ಐತಿಹ್ಯವಿರುವ ಈ ದೇಗುಲಕ್ಕೆ ವಾರ್ಷಿಕ ಒಂದು ಟನ್ ಗೂ ಅಧಿಕ ಚಿನ್ನವನ್ನು ಭಕ್ತರು ಸಮಪಿ೯ಸುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com