ಜೆಎನ್‌ಯು ವಿವಾದ: ಸೀತಾರಾಂ ಯೆಚೂರಿಗೆ ಬೆದರಿಕೆ ಕರೆ

ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಅವರಿಗೆ ಆಮ್ ಆದ್ಮಿ ಸೇನೆಯಿಂದ ಬೆದರಿಕೆ ಕರೆ ಬಂದಿದೆ ಎಂದು ಹೇಳಲಾಗುತ್ತಿದೆ. ಜೆಎನ್‌ಯು ವಿದ್ಯಾರ್ಥಿ...
ಸೀತಾರಾಂ ಯೆಚೂರಿ
ಸೀತಾರಾಂ ಯೆಚೂರಿ
ನವದೆಹಲಿ: ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಅವರಿಗೆ ಆಮ್ ಆದ್ಮಿ  ಸೇನೆಯಿಂದ ಬೆದರಿಕೆ ಕರೆ ಬಂದಿದೆ ಎಂದು ಹೇಳಲಾಗುತ್ತಿದೆ. ಜೆಎನ್‌ಯು ವಿದ್ಯಾರ್ಥಿ ಸಂಘಟನೆಗಳ ಪ್ರತಿಭಟನೆಯನ್ನು ಬೆಂಬಲಿಸಿದ್ದಕ್ಕಾಗಿ ಯೆಚೂರಿಯವರಿಗೆ ಬೆದರಿಕೆ  ಕರೆ ಬಂದಿದೆ. ಭಾನುವಾರ ರಾತ್ರಿ 10.30ರಿಂದ 1 ಗಂಟೆಯ ನಡುವಿನ ಅವಧಿಯಲ್ಲಿ ಈ ಕರೆಗಳು ಬಂದಿವೆ ಎಂದು ಸಿಪಿಐಎಂ ಕಚೇರಿಯ ನೌಕರ ದೀಪಕ್ ಕುಮಾರ್ ಹೇಳಿದ್ದಾರೆ.
ಯೆಚೂರಿ ಮಾಡಿದ್ದು ತಪ್ಪು, ಅವರಿಗೆ ಈ ದೇಶ ಬಿಟ್ಟು ಹೋಗಬೇಕಾಗುತ್ತದೆ ಎಂದು ಬೆದರಿಕೆ ಕರೆಯಲ್ಲಿ ಹೇಳಲಾಗಿತ್ತು. ಕರೆ ಮಾಡಿದ ವ್ಯಕ್ತಿ ತಾನು ಆಮ್ ಆದ್ಮಿ ಬಾಲ್‌ವೀರ್ ಸೇನೆಯ ಸದಸ್ಯ ಎಂದು ಹೇಳಿರುವುದಾಗಿ ದೀಪಕ್ ಹೇಳಿಕೆ ನೀಡಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಸಿಪಿಎಂ ಮಂದಿರ್ ಮಾರ್ಗ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ಬೆದರಿಕೆ ಕರೆ ಹಿನ್ನಲೆಯಲ್ಲಿ ಎಕೆಜಿ ಭವನದ ಸುತ್ತಲೂ ಬಿಗಿಭದ್ರತೆ ಏರ್ಪಡಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com