ಪೃಥ್ವಿ-2 ಕ್ಷಿಪಣಿ ಪರೀಕ್ಷಾರ್ಥ ಉಡಾವಣೆ ಯಶಸ್ವಿ

ಸ್ವದೇಶಿ ನಿರ್ಮಿತ ಅಣ್ವಸ್ತ್ರವನ್ನು ಹೊತ್ತೊಯ್ಯಬಲ್ಲ ಖಂಡಾಂತರ ಪೃಥ್ವಿ-2 ಕ್ಷಿಪಣಿಯನ್ನು ಮಂಗಳವಾರ ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ.
ಪೃಥ್ವಿ-2 ಕ್ಷಿಪಣಿ ಪರೀಕ್ಷೆ (ಸಂಗ್ರಹ ಚಿತ್ರ)
ಪೃಥ್ವಿ-2 ಕ್ಷಿಪಣಿ ಪರೀಕ್ಷೆ (ಸಂಗ್ರಹ ಚಿತ್ರ)

ಭುವನೇಶ್ವರ್: ಸ್ವದೇಶಿ ನಿರ್ಮಿತ ಅಣ್ವಸ್ತ್ರವನ್ನು ಹೊತ್ತೊಯ್ಯಬಲ್ಲ ಖಂಡಾಂತರ ಪೃಥ್ವಿ-2  ಕ್ಷಿಪಣಿಯನ್ನು ಮಂಗಳವಾರ ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ.

ಒಡಿಶಾದ ಚಾಂಡಿಪುರದಲ್ಲಿರುವ ಸೇನಾ ನೆಲೆಯಲ್ಲಿ ಇಂದು ಬೆಳಗ್ಗೆ ಪೃಥ್ವಿ-2 ಕ್ಷಿಪಣಿ ಪರೀಕ್ಷಾರ್ಥ ಪ್ರಯೋಗವನ್ನು ನಡೆಸಲಾಗಿದ್ದು, ನಿಗದಿತ ಗುರಿಯನ್ನು ನಿರ್ಧಿಷ್ಟ ಸಮಯದಲ್ಲಿ ತಲುಪುವ  ಮೂಲಕ ಕ್ಷಿಪಣಿ ಪರೀಕ್ಷೆ ಯಶಸ್ವಿಯಾಗಿದೆ.  ಕ್ಷಿಪಣಿ ಗುರಿ ತಲುಪಿದ್ದನ್ನು ಭಾರತೀಯ ರಾಡಾರ್‌ಗಳು ಪತ್ತೆ ಮಾಡಿದ್ದು, ವಿಜ್ಞಾನಿಗಳಲ್ಲಿ ಹರ್ಷ ಮೂಡಿಸಿದೆ.

ಪೃಥ್ವಿ-2 ಸಂಪೂರ್ಣ ಸ್ವದೇಶಿ ನಿರ್ಮಿತ ಕ್ಷಿಪಣಿಯಾಗಿದ್ದು, 350 ಕಿಮೀ ವ್ಯಾಪ್ತಿಯ ಸಾಮರ್ಥ್ಯವನ್ನು ಹೊಂದಿದೆ. ಈ ಕ್ಷಿಪಣಿಯನ್ನು ಕರಾವಳಿ ಭದ್ರತೆಗಾಗಿ ಸಂಶೋಧಿಸಲಾಗಿದ್ದು, ಶತ್ರು ಪಾಳಯದ  ನೌಕೆಗಳನ್ನು ಕ್ಷಣಮಾತ್ರದಲ್ಲಿ ಉಡಾಯಿಸಬಲ್ಲ ಸಾಮರ್ಥ್ಯ ಪೃಥ್ವಿ-2 ಕ್ಷಿಪಣಿಗಿದೆ. ಸುಮಾರು 500ರಿಂದ 1 ಸಾವಿರ ಕೆಜಿ ಸಿಡಿತಲೆಗಳನ್ನು ಹೊತ್ತೊಯ್ಯಬಲ್ಲ ಸಾಮರ್ಥ್ಯ ಪೃಥ್ವಿ-2 ಕ್ಷಿಪಣಿಗಿದ್ದು, ಧ್ರವ  ಇಂಧನವನ್ನು ಸ್ರವಿಸುವ ಅವಳಿ ಇಂಜಿನ್ ಗಳನ್ನು ಕ್ಷಿಪಣಿ ಹೊಂದಿದೆ.

ಸ್ಟ್ರಾಟೆಜಿಕ್ ಫೋರ್ಸ್ ಕಮಾಂಡ್ ಕ್ಷಿಪಣಿಯ ಉಡಾವಣೆಯ ಮೇಲುಸ್ತುವಾರಿ ನೋಡಿಕೊಂಡಿದ್ದು, ಡಿಆರ್ ಡಿಒ ವಿಜ್ಞಾನಿಗಳನ್ನು ಕ್ಷಿಪಣಿ ಉಡಾವಣೆಯ ಬಳಿಕ ಅದನ್ನು ರಾಡಾರ್ ಮೂಲಕ ಪತ್ತೆ  ಮಾಡಿದ್ದಾರೆ. ಇನ್ನು ಕ್ಷಿಪಣಿಯ ಮತ್ತೊಂದು ಪ್ರಮುಖ ಅಂಶವೆಂದರೆ ಇದು ಖಡಾಂತರ ಕ್ಷಿಪಣಿಯಾಗಿದ್ದು. ಭೂಮಿಯ ಮೇಲ್ಮೈಯಿಂದ ಮೇಲ್ಮೈಗೆ ಪ್ರಯೋಗಿಸಬಹುದಾಗಿದೆ. ಸ್ಟ್ರಾಟೆಜಿಕ್ ಫೋರ್ಸ್  ಕಮಾಂಡ್ ಮಂಗಳವಾರ ಬೆಳಗ್ಗೆ ಸಂಯುಕ್ತ ಪರೀಕ್ಷಾ ವಲಯದಲ್ಲಿನ 3ನೇ ಸಂಕೀರ್ಣದಿಂದ ಈ ಮೊಬೈಲ್ ಲಾಂಚಿಂಗ್ ವೆಹಿಕಲ್ ಮೂಲಕವಾಗಿ ಪರೀಕ್ಷಾರ್ಥ ಉಡಾವಣೆ ನಡೆಸಿತ್ತು. ಪೃಥ್ವಿ-2  ಕ್ಷಿಪಣಿ 350 ಕಿ.ಮೀ ದೂರವನ್ನು ಕ್ರಮಿಸುವಲ್ಲಿ ಯಶಸ್ವಿಯಾಗಿದೆ.

2003ರಲ್ಲಿ ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ ಪೃಥ್ವಿ-2 ಕ್ಷಿಪಣಿಯನ್ನು ಅಭಿವೃದ್ಧಿ ಪಡಿಸಿತ್ತು. ಬಳಿಕ 2015 ಫೆಬ್ರವರಿ 15 ಮತ್ತು ನವೆಂಬರ್ 26ರಂದು ಕ್ಷಿಪಣಿಯನ್ನು ಪರೀಕ್ಷೆಗೆ  ಒಳಪಡಿಸಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com