ರಾಜ್ ಸಿಂಗ್ (58) ಆತ್ಮಹತ್ಯೆ ಮಾಡಿಕೊಂಡ ಸಿಐಎಸ್ಎಫ್ ಅಧಿಕಾರಿಯಾಗಿದ್ದು, ಇವರು ಸಹಾಯಕ ಸಬ್ ಇನ್ಸ್ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಕೇಂದ್ರ ಕೈಗಾರಿಕಾ ಭದ್ರತಾ ಪಡೆ ಶಿಬಿರದಲ್ಲಿ ರಾಜ್ ಸಿಂಗ್ ಅವರಿಗೆ ನಿನ್ನೆ ರಾತ್ರಿ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರಾತ್ರಿ ಪಾಳಿಯಲ್ಲಿ ಕೆಲಸ ಮಾಡಲು ಸೇವೆಗಾಗಿ ಶಸ್ತ್ರಾಸ್ತ್ರವನ್ನು ನೀಡಲಾಗಿತ್ತು. ಶಸ್ತ್ರಾಸ್ತ್ರ ನೀಡುತ್ತಿದ್ದಂತೆ ಶಿಬಿರದಲ್ಲಿಯೇ ರಾಜ್ ಸಿಂಗ್ ಇದ್ದಕ್ಕಿದ್ದಂತೆ ಗುಂಡು ಹಾರಿಸಿಕೊಂಡ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.