ಆಕಸ್ಮಿಕವಾಗಿ ಬಂದೂಕಿನಿಂದ ಹಾರಿತು ಗುಂಡು: ಶಾಸಕನ ಕಾರು ಚಾಲಕ ಸಾವು

ಆಕಸ್ಮಿಕವಾಗಿ ಬಂದೂಕಿನಿಂದ ಗುಂಡು ಹಾರಿ ನರಸಾಪುರ ಶಾಸಕ ಮದನ್ ರೆಡ್ಡಿ ಅವರ ಕಾರು ಚಾಲಕನೊಬ್ಬ ದುರುಂತದಲ್ಲಿ ಸಾವನ್ನಪ್ಪಿರುವ ಘಟನೆ ಮಂಗಳವಾರ ನಡೆದಿದೆ...
ಆಕಸ್ಮಿಕವಾಗಿ ಬಂದೂಕಿನಿಂದ ಹಾರಿತು ಗುಂಡು: ಶಾಸಕನ ಕಾರು ಚಾಲಕ ಸಾವು
ಆಕಸ್ಮಿಕವಾಗಿ ಬಂದೂಕಿನಿಂದ ಹಾರಿತು ಗುಂಡು: ಶಾಸಕನ ಕಾರು ಚಾಲಕ ಸಾವು
Updated on
ಹೈದರಾಬಾದ್: ಆಕಸ್ಮಿಕವಾಗಿ ಬಂದೂಕಿನಿಂದ ಗುಂಡು ಹಾರಿ ನರಸಾಪುರ ಶಾಸಕ ಮದನ್ ರೆಡ್ಡಿ ಅವರ ಕಾರು ಚಾಲಕನೊಬ್ಬ ದುರುಂತದಲ್ಲಿ ಸಾವನ್ನಪ್ಪಿರುವ ಘಟನೆ ಮಂಗಳವಾರ ನಡೆದಿದೆ. 
ಸಯೀದ್ ಅಕ್ಬರ್ ದುರಂತದಲ್ಲಿ ಸಾವನ್ನಪ್ಪಿದ್ದ ಶಾಸಕನ ಕಾರು ಚಾಲಕ. ನಿನ್ನೆ ಶಾಸಕ ತಮ್ಮ ನಿವಾಸದಲ್ಲಿ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದರು. ಈ ವೇಳೆ ಅವರ ಕಾರು ಚಾಲಕ ಹಾಗೂ ಭದ್ರತಾ ಸಿಬ್ಬಂದಿಗಳಾಗಿ ಕಾರ್ಯನಿರ್ವಹಿಸುತ್ತಿದ್ದ ಅಕ್ಬರ್, ವೆಂಟಕ್ ಹಾಗೂ ಭದ್ರತಾ ಸಿಬ್ಬಂದಿಗಳಾದ ಪಾಂಡು, ರವೀಂದರ್ ಎಂಬುವವರು ವಿಶ್ರಾಂತಿ ತೆಗೆದುಕೊಳ್ಳಲು ಕೊಠಡಿಯೊಂದಕ್ಕೆ ಹೋಗಿದ್ದಾರೆ. 
ಮಧ್ಯಾಹ್ನ 2 ಗಂಟೆ ಸುಮಾರಿಗೆ ಶಾಸಕರ ಮತ್ತೊಬ್ಬ ಚಾಲಕ ವೆಂಕಟ್ ಎಂಬ ವ್ಯಕ್ತಿ ಭದ್ರತಾ ಸಿಬ್ಬಂದಿಯಾದ ರವೀಂದರ್ ಬಳಿ ಇದ್ದ ಬಂದೂಕನ್ನು ನೋಡಿ ಕುತೂಹಲಭರಿತನಾಗಿದ್ದಾನೆ. ಈ ವೇಳೆ ರವೀಂದರ್ ಬಳಿಯಿಂದ ಬಂದೂಕು ತೆಗೆದುಕೊಂಡಿದ್ದಾನೆ. ಇದನ್ನು ನೋಡಿದ ಅಕ್ಬರ್ ವೆಂಕಟ್ ನಿಂದ ಬಂದೂಕನ್ನು ಕಸಿದುಕೊಂಡಿದ್ದಾನೆ. ಈ ಇಬ್ಬರನ್ನೂ ನೋಡಿದ ರವೀಂದರ್ ಗೆ ಭಯವಾಗಿದೆ ನಂತರ ಬಂದೂಕನ್ನು ತೆಗೆದುಕೊಳ್ಳಲು ಹೋದಾಗ ಇಬ್ಬರ ನಡುವೆ ಬಂದೂಕು ತೆಗೆದುಕೊಳ್ಳುವ ಪ್ರಯತ್ನಗಳು ನಡೆದಿದೆ. ಈ ವೇಳೆ ಅಕ್ಬರ್ ಬಂದೂಕಿನಿಂದ ಗುಂಡು ಆಕಸ್ಮಿಕವಾಗಿ ಹಾರಿ ಅಕ್ಬರ್ ಎದೆಗೆ ಹೊಕ್ಕಿದೆ. 
ಘಟನೆಯಲ್ಲಿ ಭದ್ರತಾ ಸಿಬ್ಬಂದಿಯ ನಿರ್ಲಕ್ಷ್ಯ ಎದ್ದುಕಾಣುತ್ತಿದ್ದು, ಪ್ರಸ್ತುತ ರವೀಂದರ್ ವಿರುದ್ಧ ಐಪಿಸಿ ಸೆಕ್ಷನ್ 304ರ ಅಡಿಯಲ್ಲಿ ಪ್ರಕಣವನ್ನು ದಾಖಲಿಸಿಕೊಳಅಳಲಾಗಿದೆ. ಘಟನೆಗೆ ಸಂಬಂಧಿಸಿ ಇಬ್ಬರು ಪ್ರತ್ಯಕ್ಷದರ್ಶಿಗಳು ಸಾಕ್ಷಿ ಸಿಕ್ಕಿದ್ದಾರೆ. ಶಾಸಕರು ನೀಡಿರುವ ದೂರಿನ ಅನ್ವಯ  ಇದೀಗ ರವೀಂದರ್ ಅವರನ್ನು ಬಂಧನಕ್ಕೊಳಪಡಿಸಲಾಗಿದ್ದು, ಪ್ರಾಥಮಿಕ ತನಿಖೆಯನ್ನು ನಡೆಸಲಾಗಿದೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com