ವಾಟ್ಸ್ ಆಪ್ ನಲ್ಲಿ ದಲಿತ ವಿದ್ಯಾರ್ಥಿಗಳ ಬಗ್ಗೆ ಅವಹೇಳನಕಾರಿ ಚಿತ್ರ: ವೈಎಂಸಿಎ ಕಾಲೇಜಿನ ವಿದ್ಯಾರ್ಥಿಗಳ ಮೇಲೆ ಶಿಸ್ತು ಕ್ರಮ

ದಲಿತ ವಿದ್ಯಾರ್ಥಿಗಳನ್ನು ಅವಹೇಳನಕಾರಿಯಾಗಿ ಬಿಂಬಿಸುವ ಚಿತ್ರವನ್ನು ವಾಟ್ಸ್ ಆಪ್ ನಲ್ಲಿ ಹಂಚಿಕೆ ಮಾಡಿದ್ದಕ್ಕಾಗಿ ಚೆನ್ನೈ ನ ವೈಎಂಸಿಎ ಕಾಲೇಜಿನ ಕೆಲವು ವಿದ್ಯಾರ್ಥಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗಿದೆ.
ವೈಎಂಸಿಎ ಕಾಲೇಜು
ವೈಎಂಸಿಎ ಕಾಲೇಜು

ಚೆನ್ನೈ: ದಲಿತ ವಿದ್ಯಾರ್ಥಿಗಳನ್ನು ಅವಹೇಳನಕಾರಿಯಾಗಿ ಬಿಂಬಿಸುವ ಚಿತ್ರವನ್ನು ವಾಟ್ಸ್ ಆಪ್ ನಲ್ಲಿ ಹಂಚಿಕೆ ಮಾಡಿದ್ದಕ್ಕಾಗಿ ಚೆನ್ನೈ ನ ವೈಎಂಸಿಎ ಕಾಲೇಜಿನ ಕೆಲವು ವಿದ್ಯಾರ್ಥಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗಿದೆ.
ವೈಎಂಸಿಎ ಕಾಲೇಜಿನ ದೈಹಿಕ ಶಿಕ್ಷಣ ವಿಭಾಗದ ವಿದ್ಯಾರ್ಥಿಗಳು ವಾಟ್ಸ್ ಅಪ್ ನಲ್ಲಿ ದಲಿತ ವಿದ್ಯಾರ್ಥಿಗಳನ್ನು ಅವಹೇಳನಕಾರಿಯಾಗಿ ಬಿಂಬಿಸುವ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ. ಇದರಿಂದಾಗಿ ಕಾಲೇಜ್ ನಲ್ಲಿ ಕೋಲಾಹಲ ಉಂಟಾಗಿದೆ. ಪ್ರಸ್ತುತ ಇರುವ ಮೀಸಲಾತಿ ವ್ಯವಸ್ಥೆಯನ್ನು ಟೀಕಿಸಲು ಹೋಗಿ ಈ ಪ್ರಮಾದ ಉಂಟಾಗಿದೆ. ಸಾಮಾನ್ಯ ವರ್ಗದ ವಿದ್ಯಾರ್ಥಿಗಳ ಹಾಗೂ ದಲಿತ ವಿದ್ಯಾರ್ಥಿಗಳ ಪರೀಕ್ಷಾ ತಯಾರಿಯನ್ನು ಹೋಲಿಕೆ ಮಾಡುವ ಚಿತ್ರವನ್ನು ವಾಟ್ಸ್ ಆಪ್ ನಲ್ಲಿ ಹಂಚಿಕೆ ಮಾಡಲಾಗಿದೆ.
ಚಿತ್ರದಲ್ಲಿ ಸಾಮಾನ್ಯ ವರ್ಗದ ವಿದ್ಯಾರ್ಥಿಗಳು ಪರೀಕ್ಷಾ ತಯಾರಿಯಲ್ಲಿ ತೊಡಗಿದ್ದರೆ, ಮೀಸಲಾತಿ ಪಡೆಯುವ ಅರ್ಹತೆಯುಳ್ಳ ವಿದ್ಯಾರ್ಥಿಗಳು ಮಾತ್ರ ಯಾವುದೇ ತಯಾರಿ ನಡೆಸದೆ ಮಲಗಿರುವ ಚಿತ್ರ ವಾಟ್ಸ್ ಆಪ್ ನಲ್ಲಿ ಹರಿದಾಡುತಿದೆ. ಈ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ವೈಎಂಸಿಎ ಕಾಲೇಜ್ ನ ದಲಿತ ವಿದ್ಯಾರ್ಥಿಗಳು ನಾವು ಪರೀಕ್ಷೆಗಳನ್ನು ಗಂಭೀರವಾಗಿ ಪರಿಗಣಿಸದೇ ಇದ್ದರೂ ಸಹ ಮೀಸಲಾತಿ ವ್ಯವಸ್ಥೆ ನಮ್ಮನ್ನು ಬೆಂಬಲಿಸುತ್ತಿರುವಂತೆ ಚಿತ್ರದಲ್ಲಿ ಬಿಂಬಿಸಲಾಗಿದೆ ಎಂದಿದ್ದಾರೆ. 
ಇಷ್ಟೇ ಅಲ್ಲದೇ ಇನ್ನೂ ಅನೇಕ ಸಂದರ್ಭದಗಳಲ್ಲಿ ವೈಎಂಸಿಎ ಕಾಲೇಜಿನಲ್ಲಿ ದಲಿತ ವಿದ್ಯಾರ್ಥಿಗಳು ಹಾಗೂ ಸಾಮಾನ್ಯ ವಿದ್ಯಾರ್ಥಿಗಳ ನಡುವೆ ತಾರತಮ್ಯ ಮಾಡಲಾಗುತ್ತಿದೆ ಎಂದು ದಲಿತ ವಿದ್ಯಾರ್ಥಿಗಳು ಆರೋಪಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com