ನವದೆಹಲಿ: ಜವಾಹರ್‌ಲಾಲ್ ನೆಹರೂ ವಿಶ್ವವಿದ್ಯಾನಿಲಯದಲ್ಲಿನ ವಿವಾದವನ್ನು ಕೇಂದ್ರ ಸರ್ಕಾರ ನಿಭಾಯಿಸಿದ ರೀತಿ ಸರಿಯಿಲ್ಲ ಎಂದು ಪ್ರತಿಭಟಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನ ಮೂವರು ಸದಸ್ಯರು ರಾಜಿನಾಮೆ ನೀಡಿದ್ದಾರೆ.
ಎಬಿವಿಪಿ ಜೆಎನ್‌ಯು ಯುನಿಟ್‌ನ ಜತೆ ಕಾರ್ಯದರ್ಶಿ ಪ್ರದೀಪ್ ನಾರ್ವಲ್, ಎಬಿವಿಪಿ ಯುನಿಟ್‌ನ ಸ್ಕೂಲ್ ಆಫ್ ಸೋಷ್ಯಲ್ ಸಯನ್ಸ್ (ಎಸ್‌ಎಸ್‌ಎಸ್ )ನ ಅಧ್ಯಕ್ಷ ರಾಹುಲ್ ಾದವ್ ಮತ್ತು ಕಾರ್ಯದರ್ಶಿ ಅಂಕಿತ್ ಹಾನ್ಸ್ ರಾಜಿನಾಮೆ ನೀಡಿದ ವಿದ್ಯಾರ್ಥಿಗಳು.
ಸೋಮವಾರ ಪಟಿಯಾಲಾ ಹೌಸ್ ಕೋರ್ಟ್ ಆವರಣದಲ್ಲಿ ಪತ್ರಕರ್ತರು ಮತ್ತು ಜೆಎನ್‌ಯು ವಿದ್ಯಾರ್ಥಿಗಳ ಮತ್ತು ಅಧ್ಯಾಪಕರ ಮೇಲೆ ನಡೆದ ಹಲ್ಲೆ ಮತ್ತು ಬುಧವಾರ ಅದೇ ಕೋರ್ಟ್ ಆವರಣದಲ್ಲಿ ಕನಯ್ಯಾ ಕುಮಾರ್ ಮೇಲೆ ನಡೆದ ಹಲ್ಲೆಯನ್ನು ಈ ವಿದ್ಯಾರ್ಥಿಗಳು ಖಂಡಿಸಿದ್ದಾರೆ.
ಪ್ರಸ್ತುತ ಜೆಎನ್‌ಯುವಿನಲ್ಲಿ ನಡೆಯುತ್ತಿರುವ ಪರಿಸ್ಥಿತಿ ಬಗ್ಗೆ ಅಸಮಾಧಾನಗೊಂಡಿದ್ದು, ಇನ್ನು ಮುಂದೆ ನಾವು ಎಬಿವಿಪಿಯ ಯಾವುದೇ ಕಾರ್ಯಗಳಲ್ಲಿ ಭಾಗಿಯಾಗುವುದಿಲ್ಲ ಎಂದು ಈ ವಿದ್ಯಾರ್ಥಿಗಳು ಜಂಟಿ ಹೇಳಿಕೆ ನೀಡಿದ್ದಾರೆ.