ಆದರೆ ಪೊಲೀಸರಿಗೆ ಸಿಕ್ಕಿದ ವೀಡಿಯೋ ದೃಶ್ಯಾವಳಿಯಲ್ಲಿ ಆಡಿಯೋ ಮಿಸ್ ಆಗಿದೆ. ಆದ್ದರಿಂದ ಕನ್ಹಯ್ಯ ಅವರೇ ದೇಶ ವಿರೋಧಿ ಘೋಷಣೆ ಕೂಗಿದ್ದಾರೆ ಎಂದು ಹೇಳುವುದಕ್ಕೆ ಆಗುವುದಿಲ್ಲ. ಅವರ ವಿರುದ್ಧ ಯಾವುದೇ ಸಾಕ್ಷ್ಯಗಳು ಸಿಗದೇ ಇದ್ದರೆ, ದೆಹಲಿ ಪೊಲೀಸರು ಆ ಆರೋಪವನ್ನು ಕೈ ಬಿಡುತ್ತಾರೆ ಎಂದು ಗೃಹ ಸಚಿವಾಲಯದ ಮೂಲಗಳು ಹೇಳಿವೆ.