ಮತ್ತೆ ಸಮ-ಬೆಸ ಸಂಖ್ಯೆ ವಾಹನ ಸಂಚಾರ ನಿಯಮ ಜಾರಿ ಪ್ರಶ್ನಿಸಿದ್ದ ಅರ್ಜಿ ವಜಾ
ಮತ್ತೆ ಸಮ-ಬೆಸ ಸಂಖ್ಯೆ ವಾಹನ ಸಂಚಾರ ನಿಯಮ ಜಾರಿ ಪ್ರಶ್ನಿಸಿದ್ದ ಅರ್ಜಿ ವಜಾ

ಮತ್ತೆ ಸಮ-ಬೆಸ ಸಂಖ್ಯೆ ವಾಹನ ಸಂಚಾರ ನಿಯಮ ಜಾರಿ ಪ್ರಶ್ನಿಸಿದ್ದ ಅರ್ಜಿ ವಜಾ

ಎರಡನೇ ಹಂತದಲ್ಲಿ ಸಮ-ಬೆಸ ಸಂಖ್ಯೆ ವಾಹನ ಸಂಚಾರ ನಿಯಮ ಜಾರಿಗೆ ತರುವುದನ್ನು ವಿರೋಧಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ವಜಾಗೊಳಿಸಿದೆ.

ನವದೆಹಲಿ: ಎರಡನೇ ಹಂತದಲ್ಲಿ ಸಮ-ಬೆಸ ಸಂಖ್ಯೆ ವಾಹನ ಸಂಚಾರ ನಿಯಮ ಜಾರಿಗೆ ತರುವುದನ್ನು ವಿರೋಧಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ವಜಾಗೊಳಿಸಿದೆ.
ಏಪ್ರಿಲ್ 15 -30 ರಿಂದ ಎರಡನೇ ಬಾರಿ ಜಾರಿಗೆ ಬರಲಿರುವ ಸಮ-ಬೆಸ ವಾಹನ ಸಂಚಾರ ನಿಯಮದಲ್ಲಿ ಮಹಿಳೆಯರಿಗೆ ಹಾಗೂ ದ್ವಿಚಕ್ರವಾಹನಗಳಿಗೆ ವಿನಾಯ್ತಿ ನೀಡಿದ್ದನ್ನು ಪಿಐಎಲ್ ಪ್ರಶ್ನಿಸಿತ್ತು. ಸಮ- ಬೆಸ ಸಂಚಾರ ನಿಯಮವನ್ನು ದ್ವಿಚಕ್ರವಾಹನಗಳಿಗೂ ಅನ್ವಯ ಮಾಡುವಂತೆ ಪಿಐಎಲ್ ಸಲ್ಲಿಸಿದ್ದ ಅರ್ಜಿದಾರ ಕೋರ್ಟ್ ಗೆ ಮನವಿ ಮಾಡಿದ್ದರು.
ಮಾಲಿನ್ಯ ದ್ವಿಚಕ್ರವಾಹನಗಳಿಂದಲೇ ನಗರದಲ್ಲಿ ಶೇ 37 ರಷ್ಟು ಮಾಲಿನ್ಯ ಉಂಟಾಗುತ್ತಿದೆ, ಆದ್ದರಿಂದ ನಿಯಮವನ್ನು ದ್ವಿಚಕ್ರ ವಾಹನಗಳಿಗೂ ಅನ್ವಯ ಮಾಡಬೇಕೆಂದು ಅರ್ಜಿಯಲ್ಲಿ ವಾದಿಸಲಾಗಿತ್ತು. ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಾಲಯ ಈ ವಿಷಯವನ್ನು ಅಕಾಲಿಕವೆಂದು ಹೇಳಿದ್ದು ಅರ್ಜಿಯನ್ನು ವಜಾಗೊಳಿಸಿದೆ. 

Related Stories

No stories found.

Advertisement

X
Kannada Prabha
www.kannadaprabha.com