ಸಂಗೀತ ವಿದ್ವಾಂಸ ಉಸ್ತಾದ್ ಅಬ್ದುಲ್ ರಶೀದ್ ನಿಧನ

ದೇಶದ ಅತ್ಯಂತ ಹಿರಿಯ ಹಿಂದೂಸ್ತಾನಿ ಸಂಗೀತ ವಿದ್ವಾಂಸರಾದ ಶತಾಯುಷಿ ಉಸ್ತಾದ್ ಅಬ್ದುಲ್ ರಶೀದ್ ಖಾನ್(107)...
ಉಸ್ತಾದ್ ಅಬ್ದುಲ್ ರಶೀದ್ ಖಾನ್
ಉಸ್ತಾದ್ ಅಬ್ದುಲ್ ರಶೀದ್ ಖಾನ್
ಕೋಲ್ಕತ್ತ: ದೇಶದ ಅತ್ಯಂತ ಹಿರಿಯ ಹಿಂದೂಸ್ತಾನಿ ಸಂಗೀತ ವಿದ್ವಾಂಸರಾದ ಶತಾಯುಷಿ ಉಸ್ತಾದ್ ಅಬ್ದುಲ್ ರಶೀದ್ ಖಾನ್(107) ಅವರು ಗುರುವಾರ ನಿಧನರಾಗಿದ್ದಾರೆ. 
ತಾನ್ ಸೇನ್ ಅವರ ಕುಟುಂಬದ 16ನೇ ತಲೆಮಾರಿನವರಾದ ರಶೀದ್ ಖಾನ್ ಅರು ವಯೋಸಹಜವಾದ ಸಮಸ್ಯೆಗಳಿಂದ ಬಳಲುತ್ತಿದ್ದರು. ಇಬ್ಬರು ಗಂಡು ಮಕ್ಕಳು ಹಾಗೂ ಹೆಣ್ಮು ಮಕ್ಕಳ ಮತ್ತು ಮೊಮ್ಮಕ್ಕಳನ್ನು ಅಗಲಿದ್ದಾರೆ. ರಾಯ್ ಬರೇಲಿಯಲ್ಲಿ ಅಂತ್ಯ ಸಂಸ್ಕಾರ ನಡೆಸಲಾಗುವುದು ಎಂದು ತಿಳಿದು ಬಂದಿದೆ.
ಉತ್ತರಪ್ರದೇಶದಲ್ಲಿ 1908ರಲ್ಲಿ ಜನಿಸಿದ ರಶೀದ್ ಖಾನ್ ಅವರು, ಹಿಂಸ್ತಾನಿಯ ಗ್ವಾಲಿಯರ್ ಘರಾನಾದಲ್ಲಿ ಪ್ರಸಿದ್ಧರಾಗಿದ್ದರು. ಐಟಿಸಿ ಸಂಗೀತ ಸಂಶೋಧನಾ ಅಕಾಡೆಮಿಯ ಸ್ಥಾನಿಕ ಗುರುಗಳಾಗಿ ಎಱಡು ದಶಕಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿದ್ದರು. 
ರಶೀದ್ ಖಾನ್ ಅವರು ಬಿಬಿಸಿ ಮತ್ತು ಇರಾಕ್ ರೇಡಿಯೋ ಕಾರ್ಯಕ್ರಮಗಳಲ್ಲೂ ಹಾಡಿದ್ದಾರೆ. ಪದ್ಮಭೂಷಣ, ಜೀವಮಾನ ಸಾಧನೆ ಪ್ರಶಸ್ತಿ, ಭುವಾಕ ಪ್ರಶಸ್ಸತಿ, ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ರಸ ಸಾಗರ್ ಮತ್ತು ಕಾಶಿ ಸ್ವರ್ ಗಂಗಾ ಪುರಸ್ಕಾರಗಳಿಗೆ ಪಾತ್ರರಾಗಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com