ನವದೆಹಲಿ: ಜೆಎನ್ ಯು ಕ್ಯಾಂಪಸ್ ನಲ್ಲಿ ಡಿಎಸ್ ಯು ವಿದ್ಯಾರ್ಥಿಗಳು ದೇಶವಿರೋಧಿ ಘೋಷಣೆ ಕೂಗಿದ್ದನ್ನು ವಿರೋಧಿಸಿ ದೆಹಲಿಯಲ್ಲಿ ನೂರಾರು ವಕೀಲರು ಇಂಡಿಯಾ ಗೆಟ್ ವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಡಿಎಸ್ ಯು ವಿದ್ಯಾರ್ಥಿ ಸಂಘಟನೆ ಮುಖಂಡ ಕನ್ಹಯ್ಯ ಕುಮಾರ್ ನನ್ನು ಕೋರ್ಟ್ ಆವರಣದಲ್ಲೇ ಥಳಿಸಿದ್ದ ವಕೀಲರು ಸಹ ಈ ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಿದ್ದರು.ವಂದೇ ಮಾತರಂ, ಪಾಕಿಸ್ತಾನ್ ಮುರ್ದಾಬಾದ್ ಎಂಬ ಘೋಷಣೆ ಕೂಗಿದ ವಕೀಲರು ತ್ರಿವರ್ಣ ಧ್ವಜ ಹಿಡಿದು ದೇಶವಿರೋಧಿಗಳನ್ನು ಪ್ರತಿಭಟಿಸಿದರು.
ಕಾನೂನನ್ನು ವಕೀಲರಿಗಿಂತ ಚೆನ್ನಾಗಿ ತಿಳಿದಿರುವವರಿಲ್ಲ, ಕಾನೂನಿನ ಪ್ರಕಾರ ಕನ್ಹಯ್ಯ ಕುಮಾರ್ ಹಾಗೂ ಉಮರ್ ಖಾಲಿದ್ ಭಯೋತ್ಪಾದಕರು ಎಂದು ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ವಕೀಲ ಸುರೇಶ್ ಸಿನ್ಹಾ ಹೇಳಿದ್ದಾರೆ. ದೇಶವಿರೋಧಿಗಳ ಮೇಲೆ ದಾಳಿ ಮುಂದುವರೆಸುವುದಾಗಿ ಪ್ರತಿಭಟನೆ ನಡೆಸಿದ ವಕೀಲರು ಎಚ್ಚರಿಕೆ ನೀಡಿದ್ದಾರೆ.
Advertisement