ಪೊಲೀಸ್ ನಾಯಿ ಮೃತಪಟ್ಟಿದ್ದಕ್ಕಾಗಿ ಬಿಹಾರದ ಐವರು ಪೊಲೀಸ್ ಸಿಬ್ಬಂದಿ ಅಮಾನತು!

ಬಿಹಾರದಲ್ಲಿ ಪೊಲೀಸ್ ನಾಯಿ ಮೃತಪಟ್ಟಿದ್ದಕ್ಕಾಗಿ ಐವರು ಪೊಲೀಸರನ್ನು ಅಮಾನತುಗೊಳಿಸಲಾಗಿದೆ.
ಪೊಲೀಸ್ ನಾಯಿಗಳಿಗೆ ತರಬೇತಿ( ಸಾಂಕೇತಿಕ ಚಿತ್ರ)
ಪೊಲೀಸ್ ನಾಯಿಗಳಿಗೆ ತರಬೇತಿ( ಸಾಂಕೇತಿಕ ಚಿತ್ರ)

ಪಾಟ್ನಾ: ಬಿಹಾರದಲ್ಲಿ ಪೊಲೀಸ್ ನಾಯಿ ಮೃತಪಟ್ಟಿದ್ದಕ್ಕಾಗಿ ಐವರು ಪೊಲೀಸರನ್ನು ಅಮಾನತುಗೊಳಿಸಲಾಗಿದೆ.
ಪೊಲೀಸ್ ನಾಯಿ ಗುಲಾಬೋ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದು, ನಾಯಿಯನ್ನು ಚೈನ್ ಹಾಕದೇ ಹಾಗೆಯೇ ಬಿಟ್ಟಿದ್ದಕ್ಕಾಗಿ ಅದನ್ನು ನಿಯಂತ್ರಿಸುತ್ತಿದ್ದವರನ್ನು ಅಮಾನತುಗೊಳಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು  ತಿಳಿಸಿದ್ದಾರೆ.
 ಗುಲಾಬೋ ಗೆ ಪೊಲೀಸ್ ನಾಯಿ ತಂಡದಲ್ಲಿ ಸಬ್ ಇನ್ಸ್ ಪೆಕ್ಟರ್ ಶ್ರೇಣಿ ನೀಡಲಾಗಿತ್ತು. ನಾಯಿಯನ್ನು ನೋಡಿಕೊಳ್ಳುವ ಜವಾಬ್ದಾರಿ ಹೊತ್ತಿದ್ದ ನಾಲ್ಕು ಸಿಬ್ಬಂದಿಗಳು ಹಾಗೂ ಓರ್ವ ಸಬ್ ಇನ್ಸ್ ಪೆಕ್ಟರ್ ನ್ನು ಬೇಜವಾಬ್ದಾರಿತನದ ಆರೋಪದ ಮೇಲೆ ಅಮಾನತುಗೊಳಿಸಲಾಗಿದೆ.    
ಬೇಜವಾಬ್ದಾರಿತನದಿಂದ ಪೊಲೀಸ್ ನಾಯಿಯೊಂದು ಮೃತಪಟ್ಟಿರುವುದಕ್ಕೆ ಸಿಬ್ಬಂದಿಗಳ ವಿರುದ್ಧ ಇದೆ ಮೊದಲ ಬಾರಿಗೆ ಬಿಹಾರ ಪೊಲೀಸರು ಕಠಿಣ ಕ್ರಮ ಕೈಗೊಂಡಿದ್ದಾರೆ. ರಸ್ತೆ ಅಪಘಾತದಲ್ಲಿ ಮೃತಪಟ್ಟ ನಾಯಿ ಗುಲಾಬೋ, ಉನ್ನತ ತರಬೇತಿ ಪಡೆದ 45 ನಾಯಿಗಳ ಪೈಕಿ ಒಂದಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com