ರಕ್ಷಣೆಗೆ ಹೈ ನಕಾರ: ಪೊಲೀಸರಿಗೆ ಶರಣಾದ ವಿದ್ಯಾರ್ಥಿಗಳು
ದೇಶ
ರಕ್ಷಣೆಗೆ 'ಹೈ' ನಕಾರ: ಪೊಲೀಸರಿಗೆ ಶರಣಾದ ವಿದ್ಯಾರ್ಥಿಗಳು
ಜವಾಹರ್ ಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ಉಗ್ರ ಅಫ್ಜಲ್ ಗುರು ಪರ ಘೋಷಣೆಗಳನ್ನು ಕೂಗಿ ರಾಷ್ಟ್ರದ್ರೋಹ ಆರೋಪ ಎದುರಿಸುತ್ತಿರುವ ವಿದ್ಯಾರ್ಥಿಗಳಾದ ಉಮರ್ ಖಾಲಿದ್ ಹಾಗೂ ಅನಿರ್ಬನ್...
ನವದೆಹಲಿ: ಜವಾಹರ್ ಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ಉಗ್ರ ಅಫ್ಜಲ್ ಗುರು ಪರ ಘೋಷಣೆಗಳನ್ನು ಕೂಗಿ ರಾಷ್ಟ್ರದ್ರೋಹ ಆರೋಪ ಎದುರಿಸುತ್ತಿರುವ ವಿದ್ಯಾರ್ಥಿಗಳಾದ ಉಮರ್ ಖಾಲಿದ್ ಹಾಗೂ ಅನಿರ್ಬನ್ ಭಟ್ಟಾಚಾರ್ಯ ಮಂಗಳವಾರ ತಡರಾತ್ರಿ ದೆಹಲಿ ಪೊಲೀಸರ ಬಳಿ ಶರಣಾಗಿದ್ದಾರೆ.
ಜೆಎನ್ ಯು ವಿವಾದಕ್ಕೆ ಸಂಬಂಧಿಸಿದಂತೆ ಖಾಲಿದ್ ಸೇರಿ ಮತ್ತೈವರು ವಿದ್ಯಾರ್ಥಿಗಳ ವಿಷಯದಲ್ಲಿ ಕಠಿಣ ನಿಲುವು ತಳೆದಿದ್ದ ದೆಹಲಿ ಹೈಕೋರ್ಟ್, ಪೊಲೀಸರಿಗೆ ಶರಣಾಗುವಂತೆ ವಿದ್ಯಾರ್ಥಿಗಳಿಗೆ ಸೂಚನೆ ನೀಡಿತ್ತು.
ಪ್ರಕರಣ ಸಂಬಂಧ ಪ್ರಮುಖ ಆರೋಪಿ ಎಂದೇ ಹೇಳಲಾಗುತ್ತಿರುವ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯ ಕುಮಾರ್ ಬಂಧನದ ನಂತರ ಕಣ್ಮರೆಯಾಗಿ ಭಾನುವಾರ ರಾತ್ರಿಯಷ್ಟೇ ವಿವಿಯ ಕ್ಯಾಂಪಸ್ ನಲ್ಲಿ ಕಾಣಿಸಿಕೊಂಡಿದ್ದ ಉಮರ್ ಖಾಲಿದ್ ಸೇರಿ ಐವರು ವಿದ್ಯಾರ್ಥಿಗಳು ಶರಣಾಗುವುದಕ್ಕೂ ಮುನ್ನು ರಕ್ಷಣೆಗಾಗಿ ಹೈ ಕೋರ್ಟ್ ಮೊರೆ ಹೋಗಿದ್ದರು.
ಈ ಅರ್ಜಿಯನ್ನು ಪರಿಶೀಲಿಸಿದ್ದ ನ್ಯಾಯಾಲಯವು ಉಮರ್ ಖಾಲಿದ್ ಹಾಗೂ ಅನಿರ್ಬನ್ ಭಟ್ಟಾಚಾರ್ಯಗೆ ರಕ್ಷಣೆ ನಿರಾಕರಿಸಿತ್ತು. ಅಲ್ಲದೆ,. ವಿದ್ಯಾರ್ಥಿಗಳೇ ನಿಗದಿಪಡಿಸಿದ ತಾವು ನಿರ್ಧರಿಸಿದ ಪ್ರದೇಶದಲ್ಲಿ ಪೊಲೀಸರ ಬಳಿ ಶರಣಾಗಬಹುದೆಂದು ಹೇಳಿ ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಿತ್ತು. ಇದರಂತೆ ಉಮರ್ ಖಾಲಿದ್ ಹಾಗೂ ಅನಿರ್ಬನ್ ರಹಸ್ಯ ಕಳೆದ ರಾತ್ರಿ ಪೊಲೀಸರ ಬಳಿ ಶರಣಾಗಿದ್ದರು. ಇದೀಗ ಇಬ್ಬರು ವಿದ್ಯಾರ್ಥಿಗಳನ್ನು ಬಂಧನಕ್ಕೊಳಪಡಿಸಿರುವ ದೆಹಲಿ ಪೊಲೀಸರು ಇಬ್ಬರು ವಿದ್ಯಾರ್ಥಿಗಳನ್ನು ರಹಸ್ಯ ಸ್ಥಳಕ್ಕೆ ಕರೆದೊಯ್ದು ಪ್ರಕರಣ ಸಂಬಂಧ ವಿಚಾರಣೆ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ