
ಲಖನೌ: ಬಿಜೆಪಿ ಅಧ್ಯಕ್ಷ ಅಮಿತ್ ಷಾ ಅವರು ಪಾಲ್ಗೊಳ್ಳಬೇಕಾಗಿದ್ದ ಸಭೆಯೊಂದರ ವೇದಿಕೆ ಕುಸಿದ ಘಟನೆ ನಡೆದಿದೆ.
ಉತ್ತರ ಪ್ರದೇಶದ ಬಹರಿಚ್ನಲ್ಲಿ ಷಾ ಅವರು ರ್ಯಾಲಿ ಉದ್ದೇಶಿಸಿ ಮಾತನಾಡಬೇಕಾಗಿತ್ತು. ಆದರೆ ಅವರು ಆಗಮಿಸುವುದಕ್ಕೆ ಸ್ವಲ್ಪ ಹೊತ್ತಿಗೆ ಮೊದಲೇ ವೇದಿಕೆಯ ಒಂದು ಭಾಗ ಕುಸಿಯಿತು ಎಂದು ವರದಿಗಳು ಹೇಳಿವೆ.
ವೇದಿಕೆಯಲ್ಲಿ ಹಲವಾರು ನಾಯಕರಿದ್ದರು, ಆದರೆ ಯಾರಿಗೂ ಗಾಯಗಳಾಗಿಲ್ಲ. ದಲಿತರನ್ನು ಉದ್ದೇಶಿಸಿ ಭಾಷಮ ಮಾಡಬೇಕಿತ್ತು, ಹಾಗೂ ದಲಿತ ನಾಯಕ ಕಿಂಗ್ ಸುಹೇಲ್ ದೇವ್ ಅವರ ಪ್ರತಿಮೆ ಅನಾರವರಣಗೊಳಿಸುವ ಕಾರ್ಯಕ್ರಮದಲ್ಲಿ ಅಮಿತ್ ಶಾ ಪಾಲ್ಗೋಳ್ಳಬೇಕಿತ್ತು.
Advertisement