ಗಂಗಾ ನದಿಯಲ್ಲಿ ಮೂತ್ರ ವಿಸರ್ಜನೆ: ಮ್ಯಾಜಿಸ್ಟ್ರೇ ಟ್ ವಿರುದ್ಧ ಭಕ್ತರ ಆಕ್ರೋಶ

ಹಿಂದೂಗಳ ಪವಿತ್ರ ನದಿ ಗಂಗೆಯಲ್ಲಿ ಅಲಹಾಬಾದ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಒಬ್ಬರು ಮೂತ್ರ ಮಾಡಿದ ವಿಡಿಯೋ ಇದೀಗ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆಗೆ ಗುರಿಯಾಗಿದೆ...
ಗಂಗೆಯಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿದ್ದಾರೆ ಎಂದು ಹೇಳಲಾದ ವಿವಾದಿತ ಚಿತ್ರ
ಗಂಗೆಯಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿದ್ದಾರೆ ಎಂದು ಹೇಳಲಾದ ವಿವಾದಿತ ಚಿತ್ರ
Updated on

ಅಲಹಾಬಾದ್: ಹಿಂದೂಗಳ ಪವಿತ್ರ ನದಿ ಗಂಗೆಯಲ್ಲಿ ಅಲಹಾಬಾದ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಒಬ್ಬರು ಮೂತ್ರ ಮಾಡಿದ ವಿಡಿಯೋ ಇದೀಗ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ  ವ್ಯಾಪಕ ಟೀಕೆಗೆ ಗುರಿಯಾಗಿದೆ.

ಗಂಗಾನದಿ ಶುದ್ಧೀಕರಣಕ್ಕಾಗಿ ಕೇಂದ್ರ ಸರ್ಕಾರ "ನಮಾಮಿ ಗ೦ಗೆ' ಯೋಜನೆಯ ಮೂಲಕ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದ್ದರೆ ಇತ್ತ ಜವಾಬ್ದಾರಿಯುತ ಸ್ಥಾನದಲ್ಲಿರುವ ವ್ಯಕ್ತಿಯೊಬ್ಬರು  ಬಹಿರಂಗವಾಗಿ ಗಂಗೆಯಲ್ಲಿ ಮೂತ್ರ ವಿಸರ್ಜನೆ ಮಾಡುವ ಮೂಲಕ ವ್ಯಾಪಕ ಟೀಕೆಗೆ ಗುರಿಯಾಗಿದ್ದಾರೆ. ಗ೦ಗಾ-ಯಮುನಾ-ಸರಸ್ವತಿ ನದಿಗಳ ಸ೦ಗಮ ಸ್ಥಳವಾಗಿರುವ ತ್ರಿವೇಣಿ ಸಂಗಮದಲ್ಲಿ  "ತ್ರಿವೇಣಿ ಮಹೋತ್ಸವ' ಆಚರಿಸುವ ಸ೦ಬ೦ಧ ಪರಿಶೀಲನೆ ನಡೆಸುತ್ತಿದ್ದ ವೇಳೆ "ಕ್ಲೀನ್ ಗ೦ಗಾ' ಬರಹವಿದ್ದ ಟಿ ಶಟ್‍೯ ಧರಿಸಿದ್ದ ಅಲಹಾಬಾದ್‍ನ ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇ ಟ್ ಒ.ಪಿ. ಶ್ರೀವಾಸ್ತವ ಈ ಕೃತ್ಯ ಎಸಗಿದ್ದಾರೆ. ಈ ಘಟನೆ ಇದೀಗ ಅಸಂಖ್ಯ ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ.

ಇನ್ನು ಘಟನೆ ಬಗ್ಗೆ ವ್ಯಾಪಕ ಪ್ರತಿಭಟನೆ ವ್ಯಕ್ತವಾದ ಹಿನ್ನಲೆಯಲ್ಲಿ ಉತ್ತರ ಪ್ರದೇಶ ಸರ್ಕಾರ ಎಚ್ಚೆತ್ತುಕೊಂಡಿದ್ದು, ಈ ಸಂಬಂಧ ತನಿಖೆಗೆ ಆದೇಶಿಸಿದೆ. ಆದರೆ ನದಿಗೆ ಮೂತ್ರ  ವಿಸರ್ಜಿಸಿರುವುದನ್ನು ನಿರಾಕರಿಸಿರುವ ಶ್ರೀವಾಸ್ತವ ಅವರು, ಕೈ ತೊಳೆದುಕೊ೦ಡು ಪ್ಯಾ೦ಟ್ ಸರಿ ಮಾಡಿಕೊ೦ಡಿದ್ದನ್ನು ತಪ್ಪಾಗಿ ಅರ್ಥೈಸಲಾಗಿದೆ ಎ೦ದು ಹೇಳಿದ್ದಾರೆ.

ವಿಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com