ಜೆಎನ್ ಯು ವಿವಾದ: ಪ್ರತಿಪಕ್ಷಗಳನ್ನು ತರಾಟೆಗೆ ತೆಗೆದುಕೊಂಡ ಜೇಟ್ಲಿ

ಜೆಎನ್ ಯು ವಿವಾದ ಲೋಕಸಭೆಯಲ್ಲದೇ ರಾಜ್ಯಸಭೆಯಲ್ಲೂ ಸಾಕಷ್ಟು ಗಲಭೆಯನ್ನುಂಟು ಮಾಡಿದ್ದು, ವಿಪಕ್ಷಗಳ ಹೇಳಿಕೆಗಳಿಗೆ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ತಿರುಗೇಟು ನೀಡಿದ್ದಾರೆ...
ಜೆಎನ್ ಯು ವಿವಾದ: ಪ್ರತಿಪಕ್ಷಗಳನ್ನು ತರಾಟೆಗೆ ತೆಗೆದುಕೊಂಡ ಜೇಟ್ಲಿ
ಜೆಎನ್ ಯು ವಿವಾದ: ಪ್ರತಿಪಕ್ಷಗಳನ್ನು ತರಾಟೆಗೆ ತೆಗೆದುಕೊಂಡ ಜೇಟ್ಲಿ

ನವದೆಹಲಿ; ಜೆಎನ್ ಯು ವಿವಾದ ಲೋಕಸಭೆಯಲ್ಲದೇ ರಾಜ್ಯಸಭೆಯಲ್ಲೂ ಸಾಕಷ್ಟು ಗಲಭೆಯನ್ನುಂಟು ಮಾಡಿದ್ದು, ವಿಪಕ್ಷಗಳ ಹೇಳಿಕೆಗಳಿಗೆ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ತಿರುಗೇಟು ನೀಡಿದ್ದಾರೆ.

ಗುರುವಾರ ನಡೆದ ಅಧಿವೇಶನದಲ್ಲಿ ಕಾಂಗ್ರೆಸ್ ನೇತೃತ್ವದಲ್ಲಿ ಎಲ್ಲಾ ಪ್ರತಿಪಕ್ಷಗಳು ಎನ್ ಡಿಎ ಸರ್ಕಾರದ ವಿರುದ್ಧ ಹರಿಹಾಯುತ್ತಿದ್ದವು. ಈ ವೇಳೆ ಪ್ರತಿಪಕ್ಷಗಳನ್ನು ತರಾಟೆಗೆ ತೆಗೆದುಕೊಂಡ ಜೇಟ್ಲಿ ಅವರು, ಜವಾಹರ್ ಲಾಲ್ ನೆಹರು ವಿಶ್ವವಿದ್ಯಾಲಯ ವಿದೇಶಿ ರಾಯಭಾರಿಯಂತೆ ಸಾರ್ವಭೌಮ ಪ್ರದೇಶವಲ್ಲ. ಜೆಎನ್ ಯು ವಿನಲ್ಲಿ ವಿದ್ಯಾರ್ಥಿಗಳು ಕೂಗಿದ ಘೋಷಣೆಗಳನ್ನು ಅಭಿವ್ಯಕ್ತಿ ಸ್ವಾಂತ್ರ್ಯವೆಂದು ಪರಿಗಣಿಸಲು ಸಾಧ್ಯವೇ? ದ್ವೇಷದ ಭಾಷಣ ಅಭಿವ್ಯಕ್ತಿ ಸ್ವಾತಂತ್ರ್ಯವಾಗಲು ಸಾಧ್ಯವಿದೆಯೇ? ದೇಶ ವಿರೋಧಿ ಘೋಷಣೆ ಕೂಗುವವರ ವಿರುದ್ಧ ದೇಶ ದ್ರೋಹ ಪ್ರಕರಣ ದಾಖಲಿಸಿರುವುದರಲ್ಲಿ ತಪ್ಪೇನಿದೆ ಎಂದು ಪ್ರತಿಪಕ್ಷಗಳಿಗೆ ಪ್ರಶ್ನೆಹಾಕಿದರು.

ಇದೇ ವೇಳೆ ಪೊಲೀಸರ ಕ್ರಮವನ್ನು ಸಮರ್ಥಿಸಿಕೊಂಡಿರುವ ಅವರು, ದೇಶದ್ರೋಹಿಗಳಿಗಿಲ್ಲ ಗೌರವದೇಶದ್ರೋಹ ಕಾನೂನಿನ ಪರಿಚ್ಛೇದ 124ಎ ನಲ್ಲಿ ದೇಶ ವಿರೋದಿ ಮಾತಿಗಳು ಕೂಡ ದೇಶದ್ರೋಹ ಪ್ರಕರಣ ದಾಖಲಿಸಲು ಸಾಕಾಗುತ್ತದೆ ಎಂದು ಹೇಳಿದರು. ಅಲ್ಲದೆ, ನ್ಯಾಯಾಲಯ ಆವರಣದಲ್ಲಿ ನಡೆದ ಗಲಭೆಯನ್ನು ವಿರೋಧಿಸಿದರು. ವಿವಿ ಆವರಣದಲ್ಲಿ ದೇಶವಿರೋಧಿ ಘೋಷಣೆಗಳನ್ನು ಕೂಗಲಾಗಿದೆ. ಅಲ್ಲದೆ, ದೇಶವನ್ನು ಒಡೆಯಲು ಪ್ರಯತ್ನಗಳನ್ನು ನಡೆಸಲಾಗಿದೆ. ದೇಶ ಒಡೆಯಲು ಪ್ರಯತ್ನಿಸುತ್ತಿರುವವರಿಗೆ ಗೌರವ ಸಲ್ಲಿಸಲು ಹೇಗೆ ಸಾಧ್ಯ? ಎಂದು ಪ್ರಶ್ನಿಸಿದರು.

ಇದೇ ವೇಳೆ ಜೆಎನ್ ಯು ಪ್ರಕರಣ ಸಂಬಂಧ ಕಾಂಗ್ರೆಸ್ ಪಕ್ಷದ ನಿಲುವನ್ನು ಕಟುವಾಗಿ ಟೀಕಿಸಿರುವ ಅವರು, ಕಾಂಗ್ರೆಸ್ ಪಕ್ಷ ಮುಂಬರುವ ಪಶ್ಚಿಮ ಬಂಗಾಳ ಚುನಾವಣೆಯನ್ನು ಮುಂದಿಟ್ಟುಕೊಂಡು ಈ ರೀತಿಯಾಗಿ ವರ್ತಿಸುತ್ತಿದೆ. ಬಂಗಾಳದ ದುರದೃಷ್ಟಕರ ಸಂಗತಿಯೆಂದರೆ ಅಲ್ಲಿ ಮೂರು ರೀತಿಯ ಕಾಂಗ್ರೆಸ್ ಪಕ್ಷಗಳಿವೆ. ಒಂದು ಕಾಂಗ್ರೆಸ್, ಮತ್ತೊಂದು ತೃಣಮೂಲ ಕಾಂಗ್ರೆಸ್ ಹಾಗೂ ಮೂರನೆಯದು ಕಾಂಗ್ರೆಸ್ ಮಾರ್ಕ್ಸ್ವಾದಿ.

ಕಾಂಗ್ರೆಸ್ ನಿಲುವನ್ನು ತೃಣಮೂಲ ಕಾಂಗ್ರೆಸ್ ನಾಯಕ ಡೆರೆಕ್ ಒಬ್ರೇನ್ ಅವರು ವಿರೋಧಿಸಿದ್ದಾರೆ. ನಾವು 1998ರಲ್ಲಿಯೇ ವಿಭಜನೆಗೊಂಡಿದ್ದೇವೆ. ಇಂದು ನಮ್ಮ ಅಭಿಪ್ರಾಯವಲ್ಲ ಎಂದು ಹೇಳಿದ್ದಾರೆ.

ಜೆಎನ್ ಯು ಪ್ರಕರಣದಲ್ಲಿ ನಿಮ್ಮ ಕಪಟತನವನ್ನು ತೋರಿಸಬೇಡಿ. ಇದು ನಿಜಕ್ಕೂ ಗಂಭೀರವಾದ ವಿಚಾರ ಒಂದು ಕಡೆ ಜಿಹಾದಿಗಳು ಹಾಗೂ ಮತ್ತೊಂದು ಕಡೆ ಮವೋವಾದಿಗಳು ಸೇರಿಕೊಂಡಿದ್ದಾರೆ. ನೀವು ಧೀರ್ಘಾಕಾಲಿಕವಾಗಿ ಅಧಿಕಾರದಲ್ಲಿರುತ್ತೀರಿ. ಜೆಎನ್ ಯು ಆವರಕ್ಕೂ ಹೋಗುವುದಕ್ಕೂ ಮುನ್ನು ಯೋಚಿಸಬೇಕು. ಪಶ್ಚಿಮ ಬಂಗಾಳ ಚುನಾವಣೆ ಹತ್ತಿರ ಬರುತ್ತಿದೆ ಎಂಬ ಕಾರಣಕ್ಕೆ ಜೆಎನ್ ಯು ವಿವಾದವನ್ನು ಮರೆ ಮಾಚುವ ಪ್ರಯತ್ನ ಮಾಡಬೇಡಿ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com