ಅಹಮಾದಾಬಾದ್: ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಆರೋಗ್ಯದ ತಪಾಸಣೆಗಾಗಿ ಗಾಂಧಿನಗರದ ಆಸ್ಪತ್ರೆಗೆ ದಾಖಲಾಗಿದ್ದರು ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಮೋದಿ ಅವರ ತಾಯಿ ಹೀರಾ ಬೆನ್ ಅವರು ಮತ್ತೊಬ್ಬ ಮಗ ಪಂಕಜ್ ಮೋದಿ(ಗುಜರಾತ್ ಮಾಹಿತಿ ಇಲಾಖೆಯ ಅಧಿಕಾರಿ) ಅವರೊಂದಿಗೆ ವಾಸವಿದ್ದಾರೆ.
ನಿನ್ನೆ ಸಂಜೆ 4ಗಂಟೆಗೆ ಆರೋಗ್ಯದ ತಪಾಸಣೆಗೆ ಆಸ್ಪತ್ರೆಗೆ ದಾಖಲಾಗಿ, ನಂತರ ಮನೆಗೆ ಹಿಂದಿರುಗಿದ್ದಾರೆ. ಮೋದಿ ಅವರ ತಾಯಿಗೆ ಕೆಮ್ಮು ಮತ್ತು ಉಸಿರಾಟದ ತೊಂದೆರೆಯಿದೆ. ವಯೋಸಹಜವಾದ ಸಮಸ್ಯೆಗಳಿಂದ ಬಳಲುತ್ತಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.