"ಅಫ್ಜಲ್ ಗುರು" ಸಾರ್ವಜನಿಕ ಚರ್ಚೆಬೇಡ: ಫಾರೂಖ್ ಅಬ್ದುಲ್ಲಾ

ಅಫ್ಜಲ್ ವಿಚಾರವನ್ನು ಸಾರ್ವಜನಿಕವಾಗಿ ಚರ್ಚಿಸಬಾರದು ಎಂದು ಜಮ್ಮು ಮತ್ತು ಕಾಶ್ಮೀರ ಮಾಜಿ ಮುಖ್ಯಮಂತ್ರಿ ಫಾರೂಖ್ ಅಬ್ದುಲ್ಲಾ ಅವರು ಜೆಎನ್ ಯು ವಿದ್ಯಾರ್ಥಿಗಳಿಗೆ ಶನಿವಾರ ಸಲಹೆ ನೀಡಿದ್ದಾರೆ...
ಜಮ್ಮು ಮತ್ತು ಕಾಶ್ಮೀರ ಮಾಜಿ ಮುಖ್ಯಮಂತ್ರಿ ಫಾರೂಖ್ ಅಬ್ದುಲ್ಲಾ (ಸಂಗ್ರಹ ಚಿತ್ರ)
ಜಮ್ಮು ಮತ್ತು ಕಾಶ್ಮೀರ ಮಾಜಿ ಮುಖ್ಯಮಂತ್ರಿ ಫಾರೂಖ್ ಅಬ್ದುಲ್ಲಾ (ಸಂಗ್ರಹ ಚಿತ್ರ)

ಜಮ್ಮು: ಅಫ್ಜಲ್ ವಿಚಾರವನ್ನು ಸಾರ್ವಜನಿಕವಾಗಿ ಚರ್ಚಿಸಬಾರದು ಎಂದು ಜಮ್ಮು ಮತ್ತು ಕಾಶ್ಮೀರ ಮಾಜಿ ಮುಖ್ಯಮಂತ್ರಿ ಫಾರೂಖ್ ಅಬ್ದುಲ್ಲಾ ಅವರು ಜೆಎನ್ ಯು ವಿದ್ಯಾರ್ಥಿಗಳಿಗೆ ಶನಿವಾರ ಸಲಹೆ ನೀಡಿದ್ದಾರೆ.

ಜಮ್ಮುವಿನಲ್ಲಿ ಶನಿವಾರ ಮಾತನಾಡಿದ ಅವರು ವಿವಿ ಆವರಣದಲ್ಲಿ ಅಫ್ಜಲ್ ಗುರು ವಿಚಾರವನ್ನು ಚರ್ಚಿಸಬಾರದು ಮತ್ತು ಇಂತಹ ಸೂಕ್ಷ್ಮ ವಿಚಾರಗಳನ್ನು ಚರ್ಚಿಸಬೇಕಿದ್ದರೆ ನಿಮ್ಮ-ನಿಮ್ಮಲ್ಲೇ  ಚರ್ಚಿಸಹಬೇಕೇ ವಿನಃ ಸಾರ್ವಜಿನಕವಾಗಿ ಚರ್ಚಿಸಬಾರದು ಎಂದು ಜೆಎನ್ ಯು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಇದೇ ವೇಳೆ ಜೆಎನ್ ಯು ವಿವಿ ಉಪಕುಲಪತಿಗಳೇ ವಿವಾದವನ್ನು ನಿಯಂತ್ರಿಸಬೇಕು ಮತ್ತು ಪೊಲೀಸರನ್ನು ಬಳಕೆ ಮಾಡಿಕೊಳ್ಳುವ ಮೂಲಕ ಸಂಘರ್ಷವನ್ನು ನಿಯಂತ್ರಿಸಬೇಕು ಎಂದು ಹೇಳಿದರು.

ಪ್ರಕರಣದ ಆರಂಭದಿಂದಲೇ ತಪ್ಪು ತಪ್ಪು ಮಾರ್ಗಗಳನ್ನು ಅನುಸರಿಸಲಾಗುತ್ತಿದ್ದು, ಪೊಲೀಸರ ನೆರವಿನೊಂದಿಗೆ ಪ್ರಕರಣವನ್ನು ಉಪಕುಲಪತಿಗಳು ನಿಯಂತ್ರಿಸಬೇಕಿತ್ತು. ಆದರೆ ಇದೀಗ ಈ  ಪ್ರಕರಣ ದೇಶಾದ್ಯಂತ ಹೊತ್ತಿ ಉರಿಯುತ್ತಿದ್ದು, ದೇಶಾದ್ಯಂತ ತೀವ್ರ ಚರ್ಚೆಗೀಡಾಗುತ್ತಿದೆ. ನನಗೀಗಲೂ ಒಂದು ಅಂಶ ಅರ್ಥವಾಗುತ್ತಿಲ್ಲ. ಪ್ರಕರಣದಲ್ಲಿ ಅಫ್ಜಲ್ ಗುರು ಹೆಸರನ್ನು ಅದೇಕೆ  ತರಲಾಯಿತು. ಇದನ್ನು ಮಾಡಿದ್ದು ಯಾರೇ ಆದರೂ ಅದು ತಪ್ಪು. ಅವರ ಈ ತಪ್ಪಿನಿಂದಾಗಿ ಇದೀಗ ಇಡೀ ವಿಶ್ವವಿದ್ಯಾಲಯದ ಗೌರವಕ್ಕೆ ಕಪ್ಪು ಚುಕ್ಕಿ ಇಟ್ಟಂತಾಗಿದೆ ಎಂದು ಅಬ್ದುಲ್ಲಾ ಹೇಳಿದರು.

ಇದೇ ವೇಳೆ ಅಫ್ಜಲ್ ಗುರು ಸಾವು ತಪ್ಪು ಎಂದು ನೀವು ತಿಳಿಯುವುದಾದರೆ ಅದನ್ನು ನಿಮ್ಮೊಳಗೇ ಚರ್ಚಿಸಬೇಕೇ ಹೊರತು ಸಾರ್ವಜನಿಕವಾಗಿ ಅಲ್ಲ. ಇಂತಹ ಸೂಕ್ಷ್ಮ ವಿಚಾರಗಳನ್ನು  ಚರ್ಚಿಸುವುದು ಅಭಿವ್ಯಕ್ತಿ ಸ್ವಾತಂತ್ರ್ಯವಲ್ಲ. ಈಗಲಾದರೂ ಈ ಬಗ್ಗೆ ಉಪಕುಲಪತಿಗಳು ಗಮನಹರಿಸಿ, ಪೊಲೀಸರ ನೆರವಿನಿಂದ ವಿವಾದಕ್ಕೆ ತೆರೆ ಎಳೆಯಬೇಕು ಎಂದು ಫಾರೂಖ್ ಅಬ್ದುಲ್ಲಾ  ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com