ಕಪಿಲ್ ಸಿಬಲ್
ದೇಶ
ಪಾರ್ಲಿಮೆಂಟ್ ರಂಗಸ್ಥಳವಾಗಿ ಬದಲಾಗಿದೆ: ಕಪಿಲ್ ಸಿಬಲ್
ಪಾರ್ಲಿಮೆಂಟ್ ರಂಗಸ್ಥಳವಾಗಿ ಬದಲಾಗಿದೆ. ಈ ಹಿಂದೆ ರಂಗಸ್ಥಳದಲ್ಲಿ ನಡೆಯುತ್ತಿದ್ದುದು ಎಲ್ಲ ಈಗ ಸಂಸತ್‌ನಲ್ಲಿ ನಡೆಯುತ್ತಿದೆ ಎಂದು ಕಾಂಗ್ರೆಸ್‌ನ ...
ಭೋಪಾಲ್: ಪಾರ್ಲಿಮೆಂಟ್ ರಂಗಸ್ಥಳವಾಗಿ ಬದಲಾಗಿದೆ. ಈ ಹಿಂದೆ ರಂಗಸ್ಥಳದಲ್ಲಿ ನಡೆಯುತ್ತಿದ್ದುದು ಎಲ್ಲ ಈಗ ಸಂಸತ್‌ನಲ್ಲಿ ನಡೆಯುತ್ತಿದೆ ಎಂದು ಕಾಂಗ್ರೆಸ್‌ನ ಹಿರಿಯ ನಾಯಕ ಕಪಿಲ್ ಸಿಬಲ್ ಹೇಳಿದ್ದಾರೆ.
ದೇಶವನ್ನು ಮುನ್ನಡೆಸುವುದು ಹೇಗೆ ಎಂಬುದರ ಬಗ್ಗೆ ಸಂಸತ್‌ನಲ್ಲಿ ಚರ್ಚೆ ನಡೆಯಬೇಕು. ಮುಂದಿನ ವರ್ಷಗಳಲ್ಲಿ ಪ್ರಧಾನಿ ಮೋದಿ ದೇಶದ ಪ್ರಧಾನಿಯಾಗಿದ್ದರು ಎಂದು ಕರೆಯಲ್ಪಡುತ್ತಾರೋ ಎಂಬುದರ ಬಗ್ಗೆ ನನಗೆ ಚಿಂತೆಯಿದೆ.
ಅದೇ ವೇಳೆ ವ್ಯಾಪಂ ಹಗರಣದ ಬಗ್ಗೆ ಕೇಳಿದಾಗ, ಸಿಬಿಐ ಆಗಾಗಲೇ ದಾಖಲೆಗಳನ್ನು ಒದಗಿಸಿದ್ದರೂ,ಯಾವುದೇ ಕ್ರಮಗಳನ್ನು ಸರ್ಕಾರ ಯಾಕೆ ತೆಗೆದುಕೊಂಡಿಲ್ಲ ಎಂದು ಎಂದು ಸಿಬಲ್ ಪ್ರಶ್ನಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ