ಜಯಲಲಿತಾಗಾಗಿ ದೇವಾಲಯ ನಿರ್ಮಿಸಲು ಮುಂದಾದ 'ಅಮ್ಮಾ' ಅಭಿಮಾನಿಗಳು

ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಬೆಂಬಲಿಗರು ವೆಲ್ಲೂರು ಬಳಿ ಅಮ್ಮಾ ಆಲಯ ನಿರ್ಮಿಸಲು ಮುಂದಾಗಿದ್ದಾರೆ....
ಜಯಲಲಿತಾ
ಜಯಲಲಿತಾ
Updated on

ಚೆನ್ನೈ: ತಮಿಳುನಾಡು  ಮುಖ್ಯಮಂತ್ರಿ ಜಯಲಲಿತಾ ಬೆಂಬಲಿಗರು ವೆಲ್ಲೂರು ಬಳಿ ಅಮ್ಮಾ ಆಲಯ ನಿರ್ಮಿಸಲು ಮುಂದಾಗಿದ್ದಾರೆ.

ವಿರುಗುಂಬಾಕಂ ವಿಧಾನಸಭಾ ಕ್ಷೇತ್ರದ ಎಂಜಿಆರ್ ಯುವ ವಿಭಾಗದ ಜಂಟಿ ಕಾರ್ಯದರ್ಶಿಯಾದ 37 ವರ್ಷ ವಯಸ್ಸಿನ ಎ.ಪಿ.ಶ್ರೀನಿವಾಸನ್, ಮುಖ್ಯಮಂತ್ರಿ ಜಯಲಲಿತಾ ಅವರ ದೇವಾಲಯ "ಅಮ್ಮಾ ದೇವಾಲಯ" ನಿರ್ಮಿಸಲು ಉತ್ಸುಕರಾಗಿದ್ದಾರೆ.  

ವೆಲ್ಲೂರ್‌ನಿಂದ 60 ಕಿ.ಮೀ ದೂರದಲ್ಲಿರುವ ಐಯಪ್ಪೆಡು ಗ್ರಾಮದಲ್ಲಿ ಶ್ರೀನಿವಾಸನ್ ಮಾಲೀಕತ್ವದ 1200 ಚದುರ ಅಡಿ ಭೂಮಿಯಲ್ಲಿ ದೇವಾಲಯ ನಿರ್ಮಾಣವಾಗಲಿದ್ದು, 50 ಲಕ್ಷ ರೂಪಾಯಿಗಳು ವೆಚ್ಚವಾಗಲಿವೆ. ದೇವಾಲಯ ನಿರ್ಮಿಸಲು ನಿನ್ನೆ ಭೂಮಿ ಪೂಜೆ ನೆರವೇರಿಸಲಾಗಿದೆ.

ಅಮ್ಮಾ ಆಲಯಂ ದೇವಾಲಯದಲ್ಲಿ ಜಯಲಲಿತಾರ ಆರು ಅಡಿ ಎತ್ತರದ ಕಂಚಿನ ಪ್ರತಿಮೆ ಅನಾವರಣಗೊಳ್ಳಲಿದ್ದು, ದೇವಾಲಯದ ಎಲ್ಲಾ ಬದಿಗಳಲ್ಲಿ ಅವರ ಜೀವನ ಮತ್ತು ಸಾಧನೆಗಳನ್ನು ಬರೆಯಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಅಮ್ಮಾ ದೇವಾಲಯದ ಹೊರ ಆವರಣದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಸಿ.ಎನ್. ಅಣ್ಣಾ ದೊರೈ ಮತ್ತು ಎಂ.ಜಿ.ರಾಮಚಂದ್ರನ್ ಅವರ ಪ್ರತಿಮೆ ಪ್ರತಿಷ್ಠಾಪಿಸಲಾಗುವುದು.

ಅಮ್ಮಾ ದೇವಾಲಯ ನಿರ್ಮಾಣಕ್ಕೆ ಅಗತ್ಯವಾದ ಹಣವನ್ನು ತಮ್ಮ ಕುಟುಂಬದ ಸದಸ್ಯರಿಂದ ಮತ್ತು ಅಮ್ಮಾ ಭಕ್ತರಿಂದ ದೇಣಿಗೆ ಸಂಗ್ರಹಿಸಿ ನಿರ್ಮಾಣ ಮಾಡಲಾಗುವುದು ಎಂದು ಶ್ರೀನಿವಾಸನ್ ತಿಳಿಸಿದ್ದಾರೆ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com