ದ್ವೇಷಪೂರಿತ ಭಾಷಣ: ಕಥೇರಿಯಾ ವಜಾಕ್ಕೆ ಕಾಂಗ್ರೆಸ್ ಆಗ್ರಹ

ವಿಶ್ವ ಹಿಂದೂ ಪರಿಷತ್ ಕಾರ್ಯಕ್ರಮದಲ್ಲಿ ಮಾನವ ಸಂಪನ್ಮೂಲ ರಾಜ್ಯ ಸಚಿವ ರಾಮ್ ಶಂಕರ್ ಕಥೇರಿಯಾ ಅವರು ದ್ವೇಷಪೂರಿತ ಭಾಷಣವನ್ನು ಮಾಡಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕಥೇರಿಯಾ ಅವರನ್ನು ಕೂಡಲೇ ವಜಾಗೊಳಿಸಬೇಕು ಎಂದು ಕಾಂಗ್ರೆಸ್ ಗುರುವಾರ ಆಗ್ರಹಿಸಿದೆ...
ಕಾಂಗ್ರೆಸ್ ನಾಯಕ ಪಿ.ಎಲ್. ಪುಣ್ಯ (ಸಂಗ್ರಹ ಚಿತ್ರ)
ಕಾಂಗ್ರೆಸ್ ನಾಯಕ ಪಿ.ಎಲ್. ಪುಣ್ಯ (ಸಂಗ್ರಹ ಚಿತ್ರ)
Updated on

ನವದೆಹಲಿ: ವಿಶ್ವ ಹಿಂದೂ ಪರಿಷತ್ ಕಾರ್ಯಕ್ರಮದಲ್ಲಿ ಮಾನವ ಸಂಪನ್ಮೂಲ ರಾಜ್ಯ ಸಚಿವ ರಾಮ್ ಶಂಕರ್ ಕಥೇರಿಯಾ ಅವರು ದ್ವೇಷಪೂರಿತ ಭಾಷಣವನ್ನು ಮಾಡಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕಥೇರಿಯಾ ಅವರನ್ನು ಕೂಡಲೇ ವಜಾಗೊಳಿಸಬೇಕು ಎಂದು ಕಾಂಗ್ರೆಸ್ ಗುರುವಾರ ಆಗ್ರಹಿಸಿದೆ.

ಈ ಕುರಿತಂತೆ ಮಾಡನಾಡಿರುವ ಕಾಂಗ್ರೆಸ್ ನಾಯಕ ಪಿ.ಎಲ್. ಪುಣ್ಯ ಅವರು, ಕಥೇರಿಯಾ ಅವರು ಕೋಮುವಾದಿ ವಿಷವನ್ನು ಹರಡುವಂತೆ ಮಾಡುತ್ತಿದ್ದು, ಅವರ ದ್ವೇಷಪೂರಿತ ಭಾಷಣ ಅಕ್ಷಮ್ಯ ಅಪರಾಧವಾಗಿದೆ ಎಂದು ಹೇಳಿದ್ದಾರೆ.

ಕಥೇರಿಯಾ ಅವರು ಕೇವಲ ಶಾಸಕರಷ್ಟೇ ಅಲ್ಲ. ಸಚಿವ ಸಂಪುಟದಲ್ಲೂ ಭಾಗಿಯಾಗಿದ್ದಾರೆ. ಕಚೇರಿಯಲ್ಲಿ ಪ್ರಮಾಣ ವಚನವನ್ನು ಸ್ವೀಕರಿಸಿದ್ದಾರೆ. ಇಂತಹವರು ಕೋಮುವಾದಿ ವಿಷವನ್ನು ಭಿತ್ತಲು ಯತ್ನಿಸುತ್ತಿದ್ದಾರೆ. ಇದು ನಿಜಕ್ಕೂ ಅಕ್ಷಮ್ಯ ಅಪರಾಧವಾದದ್ದು, ಇಂತಹ ವ್ಯಕ್ತಿ ಸಂಪುಟದಲ್ಲಿ ಇರಬಾರದು. ಈ ವಿಚಾರ ರಾಜ್ಯಸಭೆ ಹಾಗೂ ಸಂಸತ್ತಿನಲ್ಲಿ ಚರ್ಚೆಯಾಗಬೇಕೆಂದು ಆಗ್ರಹಿಸಿದ್ದಾರೆ.

ಇದರಂತೆ ಖಾಸಗಿ ಪತ್ರಿಕೆಯೊಂದರಲ್ಲಿ ತಮ್ಮ ಬಗ್ಗೆ ಪ್ರಕಟವಾದ ವರದಿ ವಿರುದ್ಧ ಕಿಡಿಕಾರಿರುವ ಕಥೇರಿಯಾ ಅವರು, ಪತ್ರಿಕೆಯಲ್ಲಿ ಪ್ರಕಟವಾಗಿರುವ ವರದಿ ಸತ್ಯವಾದುದ್ದಲ್ಲ. ರಾಮ್ ಗೋಪಾಲ್ ಯಾದವ್ ಅವರು ಸಿಡಿಗಳನ್ನು ನೋಡದೆಯೇ ಹೇಳಿಕೆಯನ್ನು ನೀಡಿದ್ದಾರೆ. ಸಿಡಿಯನ್ನು ನೋಡಿ ಕಾರ್ಯಕ್ರಮದ ಮಾತನಾಡಿದ್ದನ್ನು ಕೇಳಿ ಹೇಳಿಕೆ ನೀಡುವ ಅಗತ್ಯವಿದೆ ಎಂದು ಹೇಳಿದ್ದಾರೆ.

ಈ ಹಿಂದೆ ಘಟನೆ ಕುರಿತಂತೆ ಪ್ರತಿಕ್ರಿಯೆ ನೀಡಿದ್ದ ಸಮಾಜವಾದಿ ಪಕ್ಷದ ನಾಯಕ ರಾಮ್ ಗೋಪಾಲ್ ಯಾದವ್ ಅವರು, ಪ್ರಚೋದನಕಾರಿ ಹೇಳಿಕೆ ನೀಡುತ್ತಿರುವ ಇಂತಹ ಶಾಸಕರನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕೂಡಲೇ ವಜಾಗೊಳಿಸಬೇಕು ಎಂದು ಹೇಳಿದ್ದರು.

ಮೂಲಗಳ ಪ್ರಕಾರ, ಕಳೆದ ವಾರ ಮುಸ್ಲಿಂ ಯುವಕರಿಂದ ಹತ್ಯೆಗೀಡಾದ ವಿಶ್ವ ಹಿಂದೂ ಪರಿಷತ್ ಮುಖಂಡ ಅರುಣ್ ಮಾಹೋರ್ ಶದ್ಧಾಂಜಲಿ ಸಲ್ಲಿಸುವ ಸಲುವಾಗಿ ವಿಹೆಚ್ ಪಿ ನಿನ್ನೆ ಸಭೆಯೊಂದನ್ನು ಏರ್ಪಡಿಸಿತ್ತು. ಸಭೆಯಲ್ಲಿ ಕಥೇರಿಯಾ ಸೇರಿ ಇನ್ನಿತರೆ ಬಿಜೆಪಿ ಶಾಸಕರು ಹಾಜರಿದ್ದರು. ಸಭೆ ವೇಳೆ ಮಾತನಾಡಿದ್ದ ಕಥೇರಿಯಾ ಅವರು ಮುಸ್ಲಿಮರು ರಾಕ್ಷಸರು.  ಅವರು ರಾವಣನ ವಂಶಜರು. ನಮ್ಮ ಶಕ್ತಿ ಎಷ್ಟಿದೆ ಎಂಬುದನ್ನು ನಾವು ಅವರಿಗೆ ತಿಳಿಸಬೇಕು. ದೇವಸ್ಥಾನಕ್ಕೆ ಹೋಗಿ ಮರಳುವಾಗ ನಮ್ಮ ಗೆಳೆಯನ ಹತ್ಯೆಯಾಗಿದೆ. ನಾವೆಲ್ಲರೂ ಒಗ್ಗಟ್ಟಾಗಬೇಕು. ಇವರ ವಿರುದ್ಧ ನಾವು ಹೋರಾಡಲೇ ಬೇಕು. ಇಂದು ನಾವು ಅರುಣ್ ಅವರನ್ನು ಕಳೆದುಕೊಂಡಿದ್ದೇವೆ. ನಾಳೆ ಇನ್ನೊಬ್ಬರೂ ಆಗಬಹುದು. ಇನ್ನೊಬ್ಬರನ್ನು ಕಳೆದುಕೊಳ್ಳುವ ಮುನ್ನ ನಾವು ನಮ್ಮ ಶಕ್ತಿ ಏನೆಂದು ಅವರಿಗೆ ಮನವರಿಕೆ ಮಾಡಿಕೊಡಬೇಕು ಎಂದು ಹೇಳಿದ್ದಾರೆಂದು ಹೇಳಲಾಗುತ್ತಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com