2ನೇ ದಿನಕ್ಕೆ ಸಮ-ಬೆಸ ಯೋಜನೆ: ಸೈಕಲ್ ನಲ್ಲಿ ಕಚೇರಿಗೆ ಆಗಮಿಸಿದ ದೆಹಲಿ ಉಪ ಮುಖ್ಯಮಂತ್ರಿ

ವಾಯು ಮಾಲಿನ್ಯದ ನಿಯಂತ್ರಿಸುವ ನಿಟ್ಟಿನಲ್ಲಿ ಆಪ್ ಸರ್ಕಾರ ದೆಹಲಿಯಲ್ಲಿ ಜಾರಿಗೆ ತಂದಿರುವ ಸಮ - ಬೆಸ ಸಂಖ್ಯಾ ಸೂತ್ರದ ವಾಹನ ಸಂಚಾರ ವ್ಯವಸ್ಥೆ ಶನಿವಾರ...
ಮನಿಶ್ ಸಿಸೋಡಿಯಾ
ಮನಿಶ್ ಸಿಸೋಡಿಯಾ
ನವದೆಹಲಿ: ವಾಯು ಮಾಲಿನ್ಯ ನಿಯಂತ್ರಿಸುವ ನಿಟ್ಟಿನಲ್ಲಿ ಆಪ್ ಸರ್ಕಾರ ದೆಹಲಿಯಲ್ಲಿ ಜಾರಿಗೆ ತಂದಿರುವ ಸಮ - ಬೆಸ ಸಂಖ್ಯಾ ಸೂತ್ರದ ವಾಹನ ಸಂಚಾರ ವ್ಯವಸ್ಥೆ ಶನಿವಾರ 2ನೇ ದಿನಕ್ಕೆ ಕಾಲಿಟ್ಟಿದ್ದು, ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯ ಇಂದು ಸೈಕಲ್ ನಲ್ಲಿ ಕಚೇರಿಗೆ ಆಗಮಿಸುವ ಮೂಲಕ ಎಲ್ಲರ ಗಮನ ಸೆಳೆದರು.
ಜನವರಿ 1ರಿಂದ ಸಮ-ಬೆಸ ಯೋಜನೆ ಪ್ರಾಯೋಗಿಕವಾಗಿ ಜಾರಿಯಾಗಿದ್ದು, ನಿನ್ನೆ ಬೆಸ ಸಂಖ್ಯೆಯ ವಾಹಗಳಿಗೆ ಮಾತ್ರ ರಾಜಧಾನಿಯಲ್ಲಿ ಸಂಚರಿಸಲು ಅವಕಾಶವಿತ್ತು. ಇಂದು ಸಮ ಸಂಖ್ಯೆಯ ವಾಹನಗಳ ಸಂಚಾರಕ್ಕೆ ಅವಕಾಶ ನೀಡಲಾಗಿದೆ. 
ಸಿಸೋಡಿಯಾ ಅವರು ಸಮ ಸಂಖ್ಯೆಯನ್ನು ಹೊಂದಿದ ತಮ್ಮ ಕಾರನ್ನು ಇಂದು ಮನೆಯಲ್ಲಿಯೇ ಬಿಟ್ಟು ಸೈಕಲ್ ನಲ್ಲಿ ಆಗಮಿಸಿದರು.
ಈ ಬಗ್ಗೆ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಸಿಸೋಡಿಯಾ, ದೆಹಲಿಯಲ್ಲಿ ಸೈಕಲ್ ಬಳಸೋದು ಸುಲಭವಲ್ಲ. ಆದರೆ ಈ 15 ದಿನಗಳ ಸಮ ಬೆಸ ಸಂಖ್ಯೆಯ ವಾಹನ ವ್ಯವಸ್ಥೆ ಜಾರಿ ಹಿನ್ನೆಲೆಯಲ್ಲಿ ನಾನು 15 ದಿನಗಳ ಕಾಲ ಸೈಕಲ್ ಬಳಸಲು ನಿರ್ಧರಿಸಿರುವುದಾಗಿ ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com