
ನವದೆಹಲಿ: ದೆಹಲಿಯ ವಾಯುಮಾಲಿನ್ಯವನ್ನು ಕಡಿಮೆ ಗೊಳಿಸಬೇಕು ಎಂಬ ದೃಷ್ಠಿಯಿಂದ ಆಪ್ ಸರ್ಕಾರ ಸಮ-ಬೆಸ ಯೋಜನೆಯನ್ನು ಜಾರಿಗೆ ತಂದಿದೆ.
ಆದರೆ ಆರಂಭದಲ್ಲೇ, ಅಂದರೇ ಮೊದಲ ದಿನವೇ ಬಿಜೆಪಿ ಸಂಸದರೊಬ್ಬರು ನಿಯಮ ಉಲ್ಲಂಘಿಸಿ ಸಂಚಾರಿ ಪೊಲೀಸರಿಗೆ ಸಿಕ್ಕಿ ಬಿದ್ದು ದಂಡ ತೆತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಜನವರಿ 1 ರಂದು ಕೇವಲ ಬೆಸ ಸಂಖ್ಯೆ ನೋಂದಣಿ ವಾಹನ ಸಂಚರಿಸಲು ಸರ್ಕಾರ ಅನುಮತಿ ನೀಡಿತ್ತು. ಆದರೆ ಉತ್ತರ ಪ್ರದೇಶ ಸಂಸದ ಸತ್ಯಪಾಲ್ ಸಿಂಗ್, ಸಮ ಸಂಖ್ಯೆಯ ಇರುವ ಕಾರು ಬಳಸಿ ದೆಹಲಿಯ ಹೃದಯ ಭಾಗವಾದ ಇಂಡಿಯಾ ಗೇಟ್ ಬಳಿ ಸಿಕ್ಕಿ ಹಾಕಿಕೊಂಡಿದ್ದಾರೆ.
ಪ್ರಾಯೋಗಿಕವಾಗಿ 15 ದಿನಗಳ ಕಾಲ ಈ ನಿಯಮ ಜಾರಿಗೆ ತರಲಾಗಿದೆ. ಈ ನಿಯಮ ಜಾರಿಗೆ ತಂದಿದ್ದರಿಂದ ದೆಹಲಿಯಲ್ಲಿ ನಿನ್ನೆ ಶೇ.10 ರಷ್ಟು ವಾಯು ಮಾಲಿನ್ಯ ಕಡಿಮೆಯಾಗಿದೆ ಎಂದು ಹೇಳಲಾಗಿದೆ.
Advertisement