12,858 ನಿರಾಶ್ರಿತರಿಗೆ ಪಿಎಂಒ ನೆರವು: ಆರ್ಟಿಐನಿಂದ ಮಾಹಿತಿ ಬಹಿರಂಗ

ಭಾರತದ ಪ್ರಧಾನಮಂತ್ರಿಯಾಗಿ ನರೇಂದ್ರ ಮೋದಿ ಅವರು ಪದಗ್ರಹಣ ಮಾಡಿದ ಬಳಿಕ ಸುಮಾರು 12,858 ನಿರಾಶ್ರಿತರಿಗೆ ಪ್ರಧಾನಮಂತ್ರಿ ಕಚೇರಿ(ಪಿಎಂಒ)...
ನರೇಂದ್ರ ಮೋದಿ
ನರೇಂದ್ರ ಮೋದಿ

ನವದೆಹಲಿ: ಭಾರತದ ಪ್ರಧಾನಮಂತ್ರಿಯಾಗಿ ನರೇಂದ್ರ ಮೋದಿ ಅವರು ಪದಗ್ರಹಣ ಮಾಡಿದ ಬಳಿಕ ಸುಮಾರು 12,858 ನಿರಾಶ್ರಿತರಿಗೆ ಪ್ರಧಾನಮಂತ್ರಿ ಕಚೇರಿ(ಪಿಎಂಒ) ಸಹಾಯಹಸ್ತ ಚಾಚಿದೆ ಎಂದು ತಿಳಿದುಬಂದಿದೆ.

ಪ್ರಧಾನಿಯಾಗಿ 2014ರ ಮೇ 26ರಂದು ಪ್ರಮಾಣವಚನ ಸ್ವೀಕರಿಸಿದ್ದ ಮೋದಿ ಅವರು 2015ರ ಆಗಸ್ಟ್ 31ರವರೆಗೆ ದೇಶಾದ್ಯಂತ ಸುಮಾರು 29,678 ಮಂದಿ ಹಣಕಾಸಿನ ನೆರವಿಗಾಗಿ ಪ್ರಧಾನಮಂತ್ರಿ ಕಚೇರಿಗೆ ಅರ್ಜಿ ಹಾಕಿದ್ದು, ಈ ಪೈಕಿ 12,858 ಮಂದಿ ನಿರಾಶ್ರಿತರಿಗೆ ಹಣಕಾಸಿನ ಸಹಾಯ ಮಾಡಿದ್ದಾರೆ. ಇದೇ ವೇಳೆ 4,059 ಅರ್ಜಿಗಳು ತಿರಸ್ಕೃತಗೊಂಡಿದ್ದು, ಇನ್ನುಳಿದ ಅರ್ಜಿಗಳು ಪ್ರಕ್ರಿಯೆಯಲ್ಲಿದೆ ಎಂಬ ಮಾಹಿತಿ ಆರ್ಟಿಐನಿಂದ ಬಹಿರಂಗಗೊಂಡಿದೆ.

ಪಿಎಂಒ ಮೂಲಗಳ ಪ್ರಕಾರ, 174.9966 ಕೋಟಿ ರುಪಾಯಿ ಪ್ರಧಾನಿ ರಾಷ್ಟ್ರೀಯ ಪರಿಹಾರ ನಿಧಿ(ಪಿಎಂಎನ್ಆರ್ಎಫ್) ಪ್ರಧಾನಿ ಮೋದಿ ಅವರ ನಿರ್ದೇಶನದ ಮೂಲಕ 12,858 ನಿರಾಶ್ರಿತರಿಗೆ ಹಣಕಾಸಿನ ನೆರವು ನೀಡಲಾಗಿದೆ.

ಕಳೆದ ಮೇ ತಿಂಗಳಲ್ಲಿ ಉತ್ತರಪ್ರದೇಶದ ಬುಕಂದ್ಶಹರ್ ನ ಶಿಕ್ಷಕರೊಬ್ಬರು ತಮ್ಮ ತಂಗಿಯರ ಮದುವೆಗಾಗಿ ಹಣಕಾಸಿನ ನೆರವು ಕೋರಿದ್ದು, ಅವರಿಗೆ ಪ್ರಧಾನಮಂತ್ರಿ ಕಚೇರಿಯಿಂದ 50 ಸಾವಿರ ರುಪಾಯಿ ನೀಡಲಾಗಿತ್ತು.

ಉತ್ತರಪ್ರದೇಶದಿಂದ ಸುಮಾರು 6,178, ಪಶ್ಚಿಮ ಬಂಗಾಳದಿಂದ 4,204, ಮಹಾರಾಷ್ಟ್ರದಿಂದ 3,852, ಕೇರಳದಿಂದ 2,568, ತಮಿಳುನಾಡುನಿಂದ 1,251 ಅರ್ಜಿಗಳು ಬಂದಿವೆ ಎಂಬ ಮಾಹಿತಿಗಳು ಆರ್ಟಿಐನಿಂದ ತಿಳಿದುಬಂದಿದೆ. ಪ್ರಾಕೃತಿಕ ವಿಕೋಪಗಳಂತ ಪ್ರಕರಣಗಳಿಗೆ ಹಣಕಾಸು ನೆರವನ್ನು ಪಿಎಂಎನ್ಆರ್ಎಫ್ ನೀಡಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com