ಜನಹಿತಕ್ಕಾಗಿ ಪಾನ ನಿಷೇಧ ಮಾಡಬಹುದು: ಸುಪ್ರೀಂ

ಸಾರ್ವಜನಿಕ ಹಿತಾಸಕ್ತಿಗೋಸ್ಕರ ತಮ್ಮತಮ್ಮ ರಾಜ್ಯಗಳಲ್ಲಿ ಮದ್ಯಪಾನ ಮತ್ತು ಧೂಮಪಾನದ ಮೇಲೆ ನಿಷೇಧ ಹೇರಬಹುದು ಎಂದು ಸುಪ್ರೀಂಕೋರ್ಟ್ ತಿಳಿಸಿದೆ...
ಧೂಮಪಾನ, ಮದ್ಯಪಾನ
ಧೂಮಪಾನ, ಮದ್ಯಪಾನ
Updated on

ನವದೆಹಲಿ: ಸಾರ್ವಜನಿಕ ಹಿತಾಸಕ್ತಿಗೋಸ್ಕರ ತಮ್ಮತಮ್ಮ ರಾಜ್ಯಗಳಲ್ಲಿ ಮದ್ಯಪಾನ ಮತ್ತು ಧೂಮಪಾನದ ಮೇಲೆ ನಿಷೇಧ ಹೇರಬಹುದು ಎಂದು ಸುಪ್ರೀಂಕೋರ್ಟ್ ತಿಳಿಸಿದೆ.

ಕೇರಳದಲ್ಲಿ ಪಂಚತಾರಾ ಹೋಟೆಲ್‍ಗಳಲ್ಲಿ ಮದ್ಯಸೇವನೆಗೆ ಹಸಿರು ನಿಶಾನೆ ತೋರಿಸುವ ಪ್ರಕರಣದ ವಿಚಾರಣೆ ವೇಳೆ ಸುಪ್ರೀಂಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ನ್ಯಾ. ವಿಕ್ರಮಜಿತ್ ಸೇನ್ ಮತ್ತು ನ್ಯಾ.ಎಸ್ ಕೆ ಸಿಂಗ್ ಒಳಗೊಂಡಿರುವ ಪೀಠ, 'ತಂಬಾಕು ಮತ್ತು ಮದ್ಯಸೇವನೆ ಮಾನವನ ಆರೋಗ್ಯಕ್ಕೆ ಹಾನಿಕರ ಎಂಬುದು ಸರ್ವಸಮ್ಮತ ಮಾತು.
ಇವುಗಳ ಸೇವನೆಗೆ ಪ್ರೇರೇಪಿಸುವುದನ್ನು ಜಗತ್ತಿನ ಹಲವೆಡೆ ನಿಷೇಧಿಸಲಾಗಿದೆ. ಆದರೆ ಸೇವನೆಯನ್ನು ಸಂಪೂರ್ಣ ನಿಷೇಧಿಸುವುದು ಅಸಾಧ್ಯ'' ಎಂದು ಅಭಿಪ್ರಾಯಪಟ್ಟಿದೆ. ಈ ಬಗ್ಗೆ ಖಾಸಗಿ ಪತ್ರಿಕೆಯೊಂದು ವರದಿ ಮಾಡಿದೆ. 

ರಾಜ್ಯ ಸರ್ಕಾರಗಳು ಅವುಗಳ ಉತ್ಪಾದನೆ ಮೇಲೆ ನಿಯಂತ್ರಣ ಹೇರದಿದ್ದರೂ ಜನರ ಹಿತಾಸಕ್ತಿ ಗಮನದಲ್ಲಿಟ್ಟುಕೊಂಡು ಇಂಥ ನಿರ್ಧಾರಗೊಳ್ಳಬಹುದೆಂದು ನ್ಯಾಯಪೀಠ ಪ್ರತಿಪಾದಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com