ಪಂಜಾಬ್: ``ಇನ್ನೂ ಸರಿಯಾಗಿ ಬೆಳಕು ಹರಿದಿರಲಿಲ್ಲ. ಜೋರಾಗಿ ಶಬ್ದಗಳು ಕೇಳಲಾರಂಭಿಸಿದವು. ಗಾಢ ನಿದ್ದೆಯಲ್ಲಿದ್ದ ನಾನು ಎದ್ದು ಕುಳಿತೆ. ಏನೂ ಗೊತ್ತಾಗಲಿಲ್ಲ. ಏನೆಂದು ನೋಡೋಣವೆಂದು ಟೆರೇಸ್ ಮೇಲೆ ಹತ್ತಿದೆ.
ಗುಂಡು ಹಾರಾಟದ ಶಬ್ದ ಒಂದೇ ಸಮನೆ ಕೇಳಲಾರಂಭಿಸಿತು. ಶುಕ್ರವಾರವೇ ಎಸ್ಪಿ ಅಪಹರಣದ ವಿಚಾರ ನಮಗೆ ಗೊತ್ತಿದ್ದ ಕಾರಣ, ನಾವು ಅಲರ್ಟ್ ಆದೆವು. ಕೂಡಲೇ ಎಲ್ಲರನ್ನೂ ಎಬ್ಬಿಸಿ, ಏನಾದರೂ ಅಪ್‍ಟೇಡ್ ಆಗುತ್ತಿದೆಯೆೀ ಎಂದು ನೋಡಲು ಟಿವಿ ಮುಂದೆ ಕುಳಿತೆವು.
'' ಇದು ಪಂಜಾಬ್ ವಾಯುನೆಲೆಯಿಂದ 700 ಮೀಟರ್ ದೂರದಲ್ಲೇ ವಾಸವಿರುವ ದಿನೇಶ್ ಶರ್ಮಾ ಅವರ ಮಾತುಗಳು. ದಿನಾನಗರ ದಾಳಿ ಬಳಿಕ ಇಲ್ಲಿ ವಾಸವಿರುವ ಎಲ್ಲರೂ ಭಯದಿಂದಲೇ ಬದುಕುತ್ತಿದ್ದಾರೆ.
ಆದರೆ, ಉಗ್ರರನ್ನು ನಮ್ಮ ಯೋಧರು ಮಟ್ಟಹಾಕುತ್ತಾರೆಂಬ ವಿಶ್ವಾಸವೂ ನಮಗಿದೆ. ದಾಳಿ ನಡೆದರೂ ನಾನು ನನ್ನ ಮಗಳನ್ನು(ವೈದ್ಯೆ) ಕೆಲಸಕ್ಕೆ ಕಳುಹಿಸಿದ್ದೇನೆ ಎಂದಿದ್ದಾರೆ ಶರ್ಮಾ.