ಜಾಜ್ಪುರ್(ಒಡಿಶಾ): 5 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಹತ್ಯೆ ಮಾಡಿ, ಬಳಿಕ ಬಾಲಕಿಯ ದೇಹವನ್ನು ಜಾಜ್ಪುರ್-ಕೊಂಜಾರ್ ರಸ್ತೆಯ ಪನಸ್ಲಾ ರೇಲ್ವೆ ನಿಲ್ದಾಣದ ಬಳಿ ಬಿಸಾಡಿ ಹೋಗಿದ್ದಾರೆ.
ದಿನಗೂಲಿ ನೌಕರರೊಬ್ಬರ ಪುತ್ರಿಯಾಗಿರುವ ಈ ಬಾಲಕಿ ನಿನ್ನೆ ತನ್ನ ತಾಯಿಯೊಂದಿಗೆ ಕೆಲಸದಿಂದ ಮನೆಗೆ ಮರಳುತ್ತಿದ್ದ ಸಂದರ್ಭದಲ್ಲಿ ತಪ್ಪಿಸಿಕೊಂಡಿದ್ದಳು.
ಬಳಿಕ ನೆರೆಹೊರೆಯವರ ಸಹಕಾರದೊಂದಿಗೆ ಹುಡುಕಾಟ ನಡೆಸಿದಾಗ ಬಾಲಕಿಯ ಶಮ ರೇಲ್ವೆ ಹಳಿ ಬಳಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
'ಬೆತ್ತಲೆಯಾಗಿ ಬಾಲಕಿಯ ಶವ ಪತ್ತೆಯಾಗಿದ್ದು, ಆಕೆಯ ಖಾಸಗಿ ಭಾಗಗಳಲ್ಲಿ ತೀವ್ರ ರಕ್ತಶ್ರಾವವಾಗಿದೆ' ಎಂದು ಬಾಲಕಿಯ ತಾಯಿ ತಿಳಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.
ಈ ಸಂಬಂಧ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದು, ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.