ಪಠಾಣ್ ಕೋಟ್ ನಲ್ಲಿ ಮತ್ತೆ ಉಗ್ರರ ಅಟ್ಟಹಾಸ: ವಾಯುನೆಲೆಯಲ್ಲಿ ಮತ್ತೆ ಸ್ಫೋಟ

ಗುರುದಾಸ್ ಪುರದ ಪಠಾಣ್ ಕೋಟ್ ನಲ್ಲಿರುವ ಸೇನಾ ವಾಯುನೆಲೆಯಲ್ಲಿ ಮತ್ತೆ ಉಗ್ರರು ತಮ್ಮ ಅಟ್ಟಹಾಸವನ್ನು ಮುಂದುವರೆಸಿದ್ದು, ಸೋಮವಾರ ಕೂಡ ವಾಯುನೆಲೆಯಲ್ಲಿ ಸ್ಫೋಟ ಸಂಭವಿಸಿರುವುದಾಗಿ...
ಪಠಾಣ್ ಕೋಟ್ ನಲ್ಲಿ ಮತ್ತೆ ಉಗ್ರ್ರ ಅಟ್ಟಹಾಸ: ವಾಯುನೆಲೆಯಲ್ಲಿ ಮತ್ತೆ ಸ್ಫೋಟ
ಪಠಾಣ್ ಕೋಟ್ ನಲ್ಲಿ ಮತ್ತೆ ಉಗ್ರ್ರ ಅಟ್ಟಹಾಸ: ವಾಯುನೆಲೆಯಲ್ಲಿ ಮತ್ತೆ ಸ್ಫೋಟ

ನವದೆಹಲಿ: ಗುರುದಾಸ್ ಪುರದ ಪಠಾಣ್ ಕೋಟ್ ನಲ್ಲಿರುವ ಸೇನಾ ವಾಯುನೆಲೆಯಲ್ಲಿ ಮತ್ತೆ ಉಗ್ರರು ತಮ್ಮ ಅಟ್ಟಹಾಸವನ್ನು ಮುಂದುವರೆಸಿದ್ದು, ಸೋಮವಾರ ಕೂಡ ವಾಯುನೆಲೆಯಲ್ಲಿ ಸ್ಫೋಟ ಸಂಭವಿಸಿರುವುದಾಗಿ ತಿಳಿದುಬಂದಿದೆ.

ಕಳೆದ ಮೂರು ದಿನಗಳಿಂದಲೂ ವಾಯುನೆಲೆ ಮೇಲೆ ದಾಳಿಯನ್ನು ಮುಂದುವರೆಸಿರುವ ಉಗ್ರರು ಈ ವರೆಗೂ 7ಯೋಧರನ್ನು ಬಲಿಪಡೆದಿದ್ದಾರೆ. ನಿನ್ನೆ ಕೂಡ ಇಬ್ಬರು ಉಗ್ರರು ಅಡಗಿ ಕುಳಿತಿರುವುದಾಗಿ ಹೇಳಲಾಗುತ್ತಿತ್ತು. ಇದರಂತೆ ವಾಯುನೆಲೆಯಲ್ಲಿ ಗುಂಡಿನ ಮೊರೆತ ಕೇಳಿಬರುತ್ತಿತ್ತು. ಇದರಂತೆ ಕಾರ್ಯಾಚರಣೆಗಿಳಿದಿದ್ದ ಯೋಧರು ಓರ್ವ ಉಗ್ರರನನ್ನು ಸದೆ ಬಡಿದಿದ್ದರು. ಮತ್ತೋರ್ವ ಉಗ್ರನನ್ನು ಜೀವಂತವಾಗಿ ಹಿಡಿಯಲು ಕಾರ್ಯಾಚರಣೆ ಮುಂದುವರೆಸಿದ್ದರು.

ಇದೀಗ ಮತ್ತೆ ವಾಯುನೆಲೆ ಮೇಲೆ ದಾಳಿ ಮುಂದುವರೆಸಿರುವ ಉಗ್ರರು ವಾಯುನೆಲೆಯ ಒಳಗೆ ಅವಿತು ಸ್ಫೋಟಿಸುತ್ತಿದ್ದಾರೆಂದು ಹೇಳಲಾಗುತ್ತಿದೆ.ಇದರಂತೆ ಉಗ್ರರಿಗಾಗಿ ಭಾರತೀಯ ಯೋಧರು ಕಾರ್ಯಾಚರಣೆಯನ್ನು ಮುಂದುವರೆಸಿದ್ದು, 100 ಕ್ಕೂ ಹೆಚ್ಚು ಯೋಧರು ಶೋಧನಾ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆಂದು ತಿಳಿದುಬಂದಿದೆ.

ವಾಯುನೆಲೆಯಲ್ಲಿದ್ದ ಯುದ್ಧವಿಮಾನ ಮತ್ತು ಹೆಲಿಕಾಪ್ಚರ್ ಗಳ ಧ್ವಂಸವೇ ಉಗ್ರರ ಗುರಿಯಾಗಿದ್ದು, ಸೇನಾ ವಾಯುನೆಲೆಯ ಮೇಲೆ ದಾಳಿ ಮಾಡಿರುವ ಉಗ್ರರು ಅಲ್ಲಿರುವ ಅತ್ಯಾಧುನಿಕ ಯುದ್ಧ ವಿಮಾನ ಮತ್ತು ಯುದ್ಧ ಹೆಲಿಕಾಪ್ಟರ್ ಗಳನ್ನು ಧ್ವಂಸ ಮಾಡುವುದಕ್ಕಾಗಿಯೇ ದಾಳಿ ಮಾಡಿದ್ದಾರೆ ಎಂದು ಸೇನಾಮೂಲಗಳು ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com