ಹ್ಯಾಕ್ ಮಾಡಿದ ವೆಬ್ ಸೈಟ್
ಹ್ಯಾಕ್ ಮಾಡಿದ ವೆಬ್ ಸೈಟ್

ಪಾಕ್ ವೆಬ್‌ಸೈಟ್ ಹ್ಯಾಕ್ ಮಾಡುವ ಮೂಲಕ ಹುತಾತ್ಮ ನಿರಂಜನ್‌ಗೆ ಶ್ರದ್ಧಾಂಜಲಿ

ಪಾಕಿಸ್ತಾನದ ಕೆಲವು ವೆಬ್ ಸೈಟ್‌ಗಳನ್ನು ಹ್ಯಾಕ್ ಮಾಡುವ ಮೂಲಕ ಭಾರತೀಯ ಹ್ಯಾಕರ್‌ಗಳು ಪಠಾಣ್‌ಕೋಟ್ ಉಗ್ರ ದಾಳಿಯಲ್ಲಿ ಹುತಾತ್ಮರಾದ..
ಕೋಟ್ಟಯಂ: ಪಾಕಿಸ್ತಾನದ ಕೆಲವು ವೆಬ್ ಸೈಟ್‌ಗಳನ್ನು ಹ್ಯಾಕ್ ಮಾಡುವ ಮೂಲಕ ಭಾರತೀಯ ಹ್ಯಾಕರ್‌ಗಳು ಪಠಾಣ್‌ಕೋಟ್ ಉಗ್ರ ದಾಳಿಯಲ್ಲಿ ಹುತಾತ್ಮರಾದ ಲೆ.ಕರ್ನಲ್ ನಿರಂಜನ್ ಇ ಕುಮಾರ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ಭಾರತೀಯ ಹ್ಯಾಕರ್‌ಗಳ ಒಕ್ಕೂಟವಾದ ಕೇರಳ ಮೂಲದ ಇಂಡಿಯನ್ ಬ್ಲಾಕ್ ಹ್ಯಾಟ್ಸ್ ಪಾಕ್ ವಿರುದ್ಧ ಸೈಬರ್ ಮುಯ್ಯಿ ತೀರಿಸಿದೆ.
ಪಾಕಿಸ್ತಾನ ಸರ್ಕಾರದ ವೆಬ್‌ಸೈಟ್‌ಗಳು ಸೇರಿದಂತೆ ಇನ್ನು ಕೆಲವು ಪ್ರಧಾನ ವೆಬ್‌ಸೈಟ್‌ಗಳನ್ನು ಹ್ಯಾಕ್ ಮಾಡಲಾಗಿದೆ. ಪಠಾಣ್‌ಕೋಟ್ ಉಗ್ರ ದಾಳಿಯಲ್ಲಿ ಹುತಾತ್ಮರಾದ ನಿರಂಜನ್ ಮತ್ತು ಇನ್ನಿತರ ಸೈನಿಕರಿಗೆ ಶ್ರದ್ಧಾಂಜಲಿ ಅರ್ಪಿಸುವ ಸಲುವಾಗಿ ಹ್ಯಾಕ್ ಮಾಡಲಾಗಿದೆ ಎಂದು ಹ್ಯಾಕರ್ ಗಳು ಹೇಳಿದ್ದಾರೆ.
ಹ್ಯಾಕ್ ಮಾಡಿದ ವೆಬ್‌ಸೈಟ್ ಗಳಲ್ಲಿ ಹುತಾತ್ಮ ನಿರಂಜನ್ ಅವರ 18 ತಿಂಗಳ ಮಗು ವಿಸ್ಮಯಳ ಫೋಟೋ ಜತೆ ಸಂದೇಶವನ್ನೂ ಹ್ಯಾಕರ್ ಗಳು ನೀಡಿದ್ದಾರೆ. ಎನ್‌ಎಸ್ ಜಿ ಕಮಾಂಡೋ ಲೆಫ್ಟಿನೆಂಟ್ ಕರ್ನಲ್ ನಿರಂಜನ್ ಮಗಳು ವಿಸ್ಮಯಳಿಗಾಗಿ ಆ ಹ್ಯಾಕಿಂಗ್ ಅರ್ಪಿಸುತ್ತಿದ್ದೇವೆ ಎಂದು ಸಂದೇಶದಲ್ಲಿ ಬರೆಯಲಾಗಿದೆ. ಪಠಾಣ್‌ಕೋಟ್ ದಾಳಿಯಲ್ಲಿ ಹುತಾತ್ಮರಾದ ಧೀರ ಸೈನಿಕರ ಕುಟುಂಬಕ್ಕೆ ಇಂಡಿಯನ್ ಬ್ಲಾಕ್ ಹ್ಯಾಟ್ಸ್  ಸಂಘದ ಸೆಲ್ಯೂಟ್. ದೇಶಕ್ಕಾಗಿ, ದೇಶದ ಜನರಿಗಾಗಿ ತಮ್ಮ ಪ್ರಾಣ ತ್ಯಾಗ ಮಾಡಿದ  ಸೈನಿಕರಿಗೆ ಶ್ರದ್ಧಾಂಜಲಿ ಎಂದು ಹ್ಯಾಕರ್ ಗಳು ಹ್ಯಾಕ್ ಮಾಡಿದ ವೆಬ್‌ಸೈಟ್ ಗಳಲ್ಲಿ ಸಂದೇಶ ನೀಡಿದ್ದಾರೆ. 
ಅದೇ ವೇಳೆ ವೆಬ್‌ಸೈಟ್ ನಲ್ಲಿರವ ಮಾಹಿತಿಗಳನ್ನು ಯಾವುದೂ ನಾಶ ಮಾಡಿಲ್ಲ. ನಾಶ ಮಾಡಬಹುದಾಗಿತ್ತು, ಆದರೆ ಇದೀಗ ಶ್ರದ್ಧಾಂಜಲಿ ಕೋರುವ ಸಮಯ. ಈ ಮೂಲಕ ಪಾಕ್‌ಗೆ ಒಂದು ಪುಟ್ಟ ಬೆದರಿಕೆ ಕೊಡಬೇಕಿತ್ತು. ಅದಕ್ಕಾಗಿ ವೆಬ್‌ಸೈಟ್ ಹ್ಯಾಕ್ ಮಾಡಿದ್ದೇವೆ ಎಂದು ಹ್ಯಾಕರ್ ಗಳು ಹೇಳಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com