ಚುನಾವಣಾ ಟೇಪ್ ವಿವಾದ: ಕಾಂಗ್ರೆಸ್ ನಿಂದ ಅಮಿತ್ ಜೋಗಿ ಉಚ್ಛಾಟನೆ

ಛತ್ತೀಸ್​ಗಢದ ಮಾಜಿ ಮುಖ್ಯಮಂತ್ರಿ ಅಜಿತ್ ಜೋಗಿ ಅವರ ಪುತ್ರ ಅಮಿತ್ ಜೋಗಿ ಅವರನ್ನು ಬುಧವಾರ ಕಾಂಗ್ರೆಸ್ ಪಕ್ಷದಿಂದ 6 ವರ್ಷಗಳ ಕಾಲ ಉಚ್ಛಾಟಿಸಲಾಗಿದೆ...
ಕಾಂಗ್ರೆಸ್ ನಿಂದ ಉಚ್ಛಾಟನೆಗೊಂಡ ಅಮಿತ್ ಜೋಗಿ (ಸಂಗ್ರಹ ಚಿತ್ರ)
ಕಾಂಗ್ರೆಸ್ ನಿಂದ ಉಚ್ಛಾಟನೆಗೊಂಡ ಅಮಿತ್ ಜೋಗಿ (ಸಂಗ್ರಹ ಚಿತ್ರ)

ನವದೆಹಲಿ: ಛತ್ತೀಸ್​ಗಢದ ಮಾಜಿ ಮುಖ್ಯಮಂತ್ರಿ ಅಜಿತ್ ಜೋಗಿ ಅವರ ಪುತ್ರ ಅಮಿತ್ ಜೋಗಿ ಅವರನ್ನು ಕಾಂಗ್ರೆಸ್ ಪಕ್ಷದಿಂದ 6 ವರ್ಷಗಳ ಕಾಲ ಉಚ್ಛಾಟಿಸಲಾಗಿದೆ.

ಛತ್ತೀಸ್ ಗಢ ಚುನಾವಣಾ ಸಂಬಂಧ ಅಮಿತ್ ಜೋಗಿ ಹಾಗೂ ಮುಖ್ಯಮಂತ್ರಿ ರಮಣ್ ಸಿಂಗ್ ಅವರ ಅಳಿಯ ಪುನೀತ್ ಗುಪ್ತಾ ನಡುವೆ ನಡೆದಿದ್ದ ದೂರವಾಣಿ ಸಂಭಾಷಣೆಯ ಅಂಶಗಳನ್ನು  ಮಾಧ್ಯಮಗಳಿಗೆ ಬಿಡುಗಡೆ ಮಾಡಿದ ಆರೋಪದ ಮೇಲೆ ಅಮಿತ್ ಜೋಗಿ ಅವರನ್ನು ಉಚ್ಛಾಟಿಸಲಾಗಿದೆ ಎಂದು ತಿಳಿದುಬಂದಿದೆ.

ನವದೆಹಲಿಯಲ್ಲಿ ನಡೆದಿದ್ದ ದೂರವಾಣಿ ಸಂಭಾಷಣೆ ಮುದ್ರಿತ ಅಂಶಗಳ ಬಿಡುಗಡೆ ವಿಚಾರ ಭಾರಿ ವಿವಾದಕ್ಕೆ ಕಾರಣವಾಗಿತ್ತು. ಅಲ್ಲದೆ ಕಾಂಗ್ರೆಸ್ ಪಕ್ಷದ ತೀವ್ರ ಮುಜುಗರಕ್ಕೂ ಕಾರಣವಾಗಿತ್ತು.  ಈ ಹಿನ್ನಲೆಯಲ್ಲಿ ಇಂದು ಅಮಿತ್ ಜೋಗಿ ಅವರನ್ನು ಆಲ್ ಇಂಡಿಯಾ ಕಾಂಗ್ರೆಸ್  ಕಮಿಟಿ ಉಚ್ಛಾಟನೆ ಮಾಡಿದೆ.

ಕಳೆದ ವರ್ಷ ನಡೆದ ಅಂತಗದ್ ಉಪ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಮಂತುರಾಮ್ ಪವಾರ್ ಮತ್ತು ಅಮಿತ್ ಜೋಗಿ ಹಾಗೂ ಅವರ ನಿಕಟವರ್ತಿಗಳಾದ ಫಿರೋಜ್ ಸಿದ್ದಿಕಿ, ಅಮೀನ್  ಮೆನನ್ ಸಹವರ್ತಿ ಪುನೀತ್ ಮೆನನ್ ಅವರ ನಡುವೆ ನಡೆದ ಮಾತುಕತೆಗಳ ವಿವರಗಳು ಪತ್ರಿಕೆಯಲ್ಲಿ ಬಹಿರಂಗಗೊಂಡಿತ್ತು. ಈ ವಿಚಾರ ಪ್ರತಿಪಕ್ಷಗಳಿಂದ ತೀವ್ರ ಟೀಕೆಗೆ ಗುರಿಯಾಗಿತ್ತು.  ಅಲ್ಲದೆ ಕಾಂಗ್ರೆಸ್ ಪಕ್ಷ ತೀವ್ರ ಮುಜುಗರಕ್ಕೆ ಒಳಗಾಗುವಂತೆ ಮಾಡಿತ್ತು, ಪವಾರ್ ಅವರು ಚುನಾವಣೆಯಲ್ಲಿ ಕೊನೆ ಕ್ಷಣದಲ್ಲಿ ಸ್ಪರ್ಧೆಯಿಂದ ಹಿಂದೆ ಸರಿದ ಪರಿಣಾಮ ಆಡಳಿತಾರೂಢ ಬಿಜೆಪಿ  ಪಕ್ಷದ ಅಭ್ಯರ್ಥಿ ಅನಾಯಾಸವಾಗಿ ಈ ಸ್ಥಾನವನ್ನು ಗೆದ್ದುಕೊಂಡಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com