ನಲ್ಲಿಯ ನೀರೇ ಮೇಲು ಹೋಮಿಯೋಪಥಿಗಿಂತ

ಹೋಮಿಯೋಪಥಿ ಮತ್ತು ಜ್ಯೋತಿಷ್ಯ ಶಾಸ್ತ್ರಗಳು ಅಪ್ರಯೋಜಕ ಹಾಗೂ ಅಪಾಯಕಾರಿ ಪದ್ಧತಿ. ನಿಜವಾದ ವಿಜ್ಞಾನ ಇಂಥ ಪೊಳ್ಳು ವಿಷಯಗಳಿಗಿಂತ ಹೆಚ್ಚು ಆಸಕ್ತಿಕರವಾಗಿದೆ ಎಂಬು ನೊಬೆಲ್ ವಿಜೇತ ರಸಾಯನ ಶಾಸ್ತ್ರಜ್ಞ...
ವೆಂಕಟ್ರಾಮನ್ ರಾಮಕೃಷ್ಣನ್
ವೆಂಕಟ್ರಾಮನ್ ರಾಮಕೃಷ್ಣನ್

ನೊಬೆಲ್ ಪುರಸ್ಕೃತ ವಿಜ್ಞಾನಿ ವೆಂಕಟರಾಮನ್ ರಾಮಕೃಷ್ಣನ್ ಪ್ರತಿಪಾದನೆ, ಹಿಂದೆ ಪಾಲ್ಗೊಂಡಿದ್ದೆ, ಮುಂದೆಂದೂ ಹೋಗಲ್ಲ
ನಲ್ಲಿ ನೀರಿನಲ್ಲಿರುವ ಔಷಧೀಯ ಶಕ್ತಿಯೂ ಹೋಮಿಯೋಪಥಿಗಿಲ್ಲ, ಇದು ಬರೀ ಆರ್ಸೆನಿಕ್ ಮಿಶ್ರಣ. ಏನೂ ಉಪಯೋಗವಾಗದು

ಚಂಡೀಗಡ:
ಹೋಮಿಯೋಪಥಿ ಮತ್ತು ಜ್ಯೋತಿಷ್ಯ ಶಾಸ್ತ್ರಗಳು ಅಪ್ರಯೋಜಕ ಹಾಗೂ ಅಪಾಯಕಾರಿ ಪದ್ಧತಿ. ನಿಜವಾದ ವಿಜ್ಞಾನ ಇಂಥ ಪೊಳ್ಳು ವಿಷಯಗಳಿಗಿಂತ ಹೆಚ್ಚು ಆಸಕ್ತಿಕರವಾಗಿದೆ ಎಂಬು ನೊಬೆಲ್ ವಿಜೇತ ರಸಾಯನ ಶಾಸ್ತ್ರಜ್ಞ ಭಾರತೀಯ ಸಂಜಾತ ವೆಂಕಟರಾಮನ್ ರಾಮಕೃಷ್ಣನ್ ಅಭಿಪ್ರಾಯಪಟ್ಟಿದ್ದಾರೆ.

2009ರಲ್ಲಿ ರಸಾಯನಶಾಸ್ತ್ರದಲ್ಲಿನ ಸಾಧನೆಗಾಗಿ ನೊಬೆಲ್ ಪ್ರಶಸ್ತಿ ಪಡೆದ ರಾಮಕೃಷ್ಣನ್ ರಾಮಕೃಷ್ಣನ್ ಚಂಡೀಗಢದ ಪಂಜಾಬ್ ವಿವಿಯಲ್ಲಿ ಏರ್ಪಡಿಸಲಾಗಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಈ ವಿಷಯಗಳ ಬಗ್ಗೆ ತಮ್ಮ ಅಸಹನೆ ತೋರಿದರು.

ವಿಜ್ಞಾನದೊಂದಿಗೆ ರಾಜಕೀಯ, ಧಾರ್ಮಿಕ ಭಾವನೆಗಳನ್ನು ಹೊಸೆಯುವರಿವಾಜು ಇರುವುದು ಭಾರತದಲ್ಲಿ ಮಾತ್ರ ಎಂದ ಅವರು, ತರ್ಕಬದ್ಧ ಪದ್ಧತಿಗಳ ಆಚರಣೆಯತ್ತ ಮುಂದಾಗಬೇಕಿದೆ ಎಂದರು.

ಹೋಮಿಯೋಪಥಿ ಪದ್ಧತಿಯನ್ನು ಟೀಕಿಸಿದ ಅವರು ``ಎಲ್ಲರೂ ಅಂದುಕೊಂಡಂತೆ ಇದು ಭಾರತದಲ್ಲಿ ಹುಟ್ಟಿಕೊಂಡ ವೈದ್ಯಕೀಯ ಪದ್ಧತಿ ಅಲ್ಲ. ಜರ್ಮನಿಯಲ್ಲಿ ಆರಂಭವಾದದ್ದು. ಅದರಲ್ಲಿ ಆರ್ಸೆನಿಕ್ ಮಿಶ್ರಣಗಳನ್ನು ಇನ್ನಿಲ್ಲದಂತೆ ದುರ್ಬಲಗೊಳಿಸಿ ಔಷಧವಾಗಿಸುತ್ತಾರೆ. ಅದರಿಂದ ಕಿಂಚಿತ್ತೂ ಪರಿಣಾಮವಾಗುವುದಿಲ್ಲ. ನಲ್ಲಿ ನೀರು ಈ ಔಷಧಗಳಿಗಿಂತ ಹೆಚ್ಚು ಪ್ರಬಲವಾಗಿರುತ್ತದೆ. ರಸಾಯನ ಶಾಸ್ತ್ರ ಅಭ್ಯಸಿಸುವ ಯಾರೊಬ್ಬರೂ ಹೋಮಿಯೋಪಥಿ ವೈದ್ಯ ಪದ್ಧತಿಯನ್ನು ಒಪ್ಪಿಕೊಳ್ಳುವುದಿಲ್ಲ,'' ಎಂದು ಪ್ರತಿಪಾದಿಸಿದರು.

``ಜ್ಯೋತಿಷ್ಯ ಶಾಸ್ತ್ರ ಕೇವಲ ಮನುಷ್ಯನ ನಂಬಿಕೆಗಳು, ಮೌಢ್ಯಗಳನ್ನು ಅವಲಂಬಿಸಿದೆ. ನಮ್ಮ ಹಣೆಬರಹದ ಮೇಲೆ ಗ್ರಹಗಳು ನಕ್ಷತ್ರಗಳು ಪರಿಣಾಮ ಬೀರುತ್ತವೆ ಎಂಬುದಕ್ಕೆ
ಯಾವುದೇ ಪುರಾವೆಗಳಿಲ್ಲ. ಮನುಷ್ಯ ಹುಟ್ಟುವ ಸಮಯ ಆತನ ಮುಂದಿನ ಆಗು ಹೋಗುಗಳ ಮೇಲೆ ಯಾವುದೇ ರೀತಿಯಲ್ಲೂ ಕಾರಣವಾಗುವುದಿಲ್ಲ,'' ಎನ್ನುವ ಮೂಲಕ ಜ್ಯೋತಿಷ್ಯ ಶಾಸ್ತ್ರವನ್ನು ಅಲ್ಲಗಳೆದರು.ಆದರೆ ಆಧುನಿಕ ಜ್ಯೋತಿಷ್ಯ ಶಾಸ್ತ್ರದ ಬಗ್ಗೆ ಅವರು ಭರವಸೆ ವ್ಯಕ್ತಪಡಿಸಿದರು.
 
``ಇಂಡಿಯನ್ ವಿಜ್ಞಾನ ಕಾಂಗ್ರೆಸ್ ಒಂದು ಸರ್ಕಸ್, ಇದರಲ್ಲಿ ವಿಜ್ಞಾನ ಹೊರತುಪಬಡಿಸಿ ಬೇರೆ ಎಲ್ಲವನ್ನೂ ಚರ್ಚಿಸಲಾಗುತ್ತದೆ. ಈ ಹಿಂದೆ ಆಯೋಜಿಸಲಾಗಿದ್ದು, ಸೈನ್ಸ್ ಕಾಂಗ್ರೆಸ್ ನಲ್ಲಿ ಒಂದು ದಿನ ಭಾಗವಹಿಸಿದ್ದ. ಅದನ್ನು ನೋಡಿದ ಮೇಲೆ ನಾನು ಮುಂದಿನ ದಿನಗಳಲ್ಲಿ  ಇಂಡಿಯನ್ ಸೈನ್ಸ್ ಕಾರ್ಯಕ್ರಮದಲ್ಲಿ ಭಾಗವಹಿಸಬಾರದು ಎಂದು ನಿರ್ಧಾರ ಮಾಡಿದೆ ಎಂದು ನೊಬೆಲ್ ಪುರಸ್ಕೃತ ವಿಜ್ಞಾನಿ ವೆಂಕಟರಾಮನ್ ರಾಮಕೃಷ್ಣನ್ ತಿಳಿಸಿದ್ದಾರೆ.

ಸದ್ಯ ಮೈಸೂರಿನಲ್ಲಿ ಆಯೋಜಿಸಲಾಗಿರುವ ಕಾರ್ಯಕ್ರಮದಲ್ಲಿ ಏಕೆ ಭಾಗವಹಿಸಲಿಲ್ಲ ಎಂಬ ಪ್ರಶ್ನೆಗೆ ಅವರು ಈ ರೀತಿ ಉತ್ತರಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com