ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಝೀಲಂ ನದಿಗೆ ಜಲವಿದ್ಯುತ್ ಅಣೆಕಟ್ಟು ನಿರ್ಮಿಸಲು ಚೀನಾ ನಿರ್ಧಾರ

ಭಾರತ ಸರ್ಕಾರದ ವಿರೋಧದ ನಡುವೆಯೂ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಝೀಲಂ ನದಿಗೆ ಡ್ಯಾಮ್ ನಿರ್ಮಿಸಲು ಚೀನಾ ಸಿದ್ಧತೆ ನಡೆಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಭಾರತ ಸರ್ಕಾರದ ವಿರೋಧದ ನಡುವೆಯೂ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಝೀಲಂ ನದಿಗೆ ಡ್ಯಾಮ್ ನಿರ್ಮಿಸಲು ಚೀನಾ ಸಿದ್ಧತೆ ನಡೆಸಿದೆ.

ವಿಶ್ವದ ಅತಿದೊಡ್ಡ ಅಣೆಕಟ್ಟು ಎನಿಸಿರುವ ತ್ರೀ ಜಾರ್ಜಸ್ ಅಣೆಕಟ್ಟು ನಿರ್ಮಿಸಿರುವ ತ್ರೀ ಜಾರ್ಜಸ್ ಕಾರ್ಪೊರೇಷನ್ ಪಿಒಕೆಯಲ್ಲಿ ವಿವಾದಿತ ಯೋಜನೆಯನ್ನು ಜಾರಿಗೆ ತರಲು ಮುಂದಾಗಿದೆ. ಖಾಸಗಿ ಮಾಧ್ಯಮವೊಂದರ ವರದಿ ಪ್ರಕಾರ, ಚೀನಾದ ಸರ್ಕಾರಿ ಸಂಸ್ಥೆ ಪಾಕ್ ಆಕ್ರಮಿತ ಪ್ರದೇಶದಲ್ಲಿ 1 ,100 ಮೆಗಾ ವ್ಯಾಟ್  ಸಾಮರ್ಥ್ಯದ ಕೊಹಾಲಾ ಜಲವಿದ್ಯುತ್ ಅಣೆಕಟ್ಟು ನಿರ್ಮಾಣ ಮಾಡಲು ನಿರ್ಧರಿಸಿದೆ. 

ಚೀನಾ-ಪಾಕಿಸ್ತಾನದ ಸ್ನೇಹ ಸಂಕೇತವಾಗಿ ಇತ್ತೀಚೆಗಷ್ಟೇ ಪಾಕ್ ಪ್ರಧಾನಿ ನವಾಜ್ ಷರೀಫ್ ಗಿಲ್ಗಿಟ್-ಬಾಲ್ಟಿಸ್ತಾನ್ ರಲ್ಲಿರುವ ಅಟ್ಟಾಬಾದ್ ನದಿಯ ಮೇಲೆ ಚೀನಾ ನಿರ್ಮಿಸಿದ್ದ ಫ್ರೆಂಡ್ ಶಿಪ್ ಟನಲ್ ನ್ನು ಉದ್ಘಾಟಿಸಿದ್ದರು. ಬೀಜಿಂಗ್ ಭೇಟಿ ವೇಳೆ ಪಾಕ್-ಚೀನಾದ ಬಗ್ಗೆ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ, ಪಾಕ್- ಚೀನಾ ಎಕೆನಾಮಿಕ್ ಕಾರಿಡಾರ್ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಅಲ್ಲದೇ ಪಾಕ್- ಚೀನಾ ಎಕೆನಾಮಿಕ್ ಕಾರಿಡಾರ್ ನ್ನು ಒಪ್ಪಲು ಸಾಧ್ಯವಿಲ್ಲ ಎಂದು ಚೀನಾಗೆ ಸ್ಪಷ್ಟಪಡಿಸಿದ್ದರು.

ಚೀನಾ- ಪಾಕ್ ಸಹಯೋಗದಲ್ಲಿ ವಿವಾದಿತ ಪ್ರದೇಶ ಪಾಕ್ ಆಕ್ರಮಿತ ಪ್ರದೇಶದಲ್ಲಿ ನಡೆಸಲು ಉದ್ದೇಶಿಸಲಾಗಿರುವ ಹಲವು ಯೋಜನೆಗಳಿಗೆ ಭಾರತ ಸರ್ಕಾರದಿಂದ ವಿರೋಧ ವ್ಯಕ್ತವಾಗಿದ್ದರೂ, ಚೀನಾ ಮಾತ್ರ ಜಲವಿದ್ಯುತ್ ಅಣೆಕಟ್ಟು ನಿರ್ಮಾಣ ಮಾಡಲು ನಿರ್ಧರಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com