ಧಾರ್ಮಿಕ ದುರುಪಯೋಗ ವಿಶ್ವಶಾಂತಿಗೆ ದೊಡ್ಡ ಬೆದರಿಕೆ

ಧಾರ್ಮಿಕ ದುರುಪಯೋಗ ವಿಶ್ವಶಾಂತಿಗೆ ದೊಡ್ಡ ಬೆದರಿಕೆಯಾಗಿದ್ದು, ಸಮಾಜವನ್ನು ಇಬ್ಬಾಗ ಮಾಡಿ ತಮ್ಮ ಸ್ವಾರ್ಥ ಸಾಧನೆ ಮಾಡಿಕೊಳ್ಳುವುದು ಸರಿಯಲ್ಲ ಎಂದು ನೊಬೆಲ್ ಪ್ರಶಸ್ತಿ ವಿಜೇತೆ ಲೆಮನ್ಹ್ ಆರ್ ಗ್ಬೋವಿ ಹೇಳಿದ್ದಾರೆ....
ನೊಬೆಲ್ ಪ್ರಶಸ್ತಿ ವಿಜೇತೆ ಲೆಮನ್ಹ್ ಆರ್ ಗ್ಬೋವಿ (ಸಂಗ್ರಹ ಚಿತ್ರ)
ನೊಬೆಲ್ ಪ್ರಶಸ್ತಿ ವಿಜೇತೆ ಲೆಮನ್ಹ್ ಆರ್ ಗ್ಬೋವಿ (ಸಂಗ್ರಹ ಚಿತ್ರ)

ನವದೆಹಲಿ: ಧಾರ್ಮಿಕ ದುರುಪಯೋಗ ವಿಶ್ವಶಾಂತಿಗೆ ದೊಡ್ಡ ಬೆದರಿಕೆಯಾಗಿದ್ದು, ಸಮಾಜವನ್ನು ಇಬ್ಬಾಗ ಮಾಡಿ ತಮ್ಮ ಸ್ವಾರ್ಥ ಸಾಧನೆ ಮಾಡಿಕೊಳ್ಳುವುದು ಸರಿಯಲ್ಲ ಎಂದು ನೊಬೆಲ್ ಪ್ರಶಸ್ತಿ ವಿಜೇತೆ ಲೆಮನ್ಹ್  ಆರ್ ಗ್ಬೋವಿ ಹೇಳಿದ್ದಾರೆ.

2011ರಲ್ಲಿ ನೊಬೆಲ್ ಪ್ರಶಸ್ತಿಗೆ ಭಾಜನರಾಗಿದ್ದ ಘಾನಾ ಮೂಲದ ಲೆಮನ್ಹ್ ಆರ್ ಗ್ಬೋವಿ ಇದೇ ಮೊದಲ ಬಾರಿಗೆ ಭಾರತಕ್ಕೆ ಆಗಮಿಸಿರುವ ಲೆಮನ್ಹ್ ಆರ್ ಗ್ಬೋವಿ, ತಮ್ಮ ಸ್ವಹಿತಾಸಕ್ತಿಗೆ ಧರ್ಮವನ್ನು  ದುರುಪಯೋಗ ಮಾಡಿಕೊಳ್ಳುವವರಿಂದ ವಿಶ್ವಶಾಂತಿಗೆ ದೊಡ್ಡ ಬೆದರಿಕೆ ಇದೆ. ಇಂತಹ ಮನಸ್ಥಿತಿಯ ಜನರಿಂದ ಸಮಾಜದ ಇಬ್ಭಾಗವಾಗುವ ಮೂಲಕ ಅಶಾಂತಿಗೆ ಕಾರಣವಾಗುತ್ತದೆ ಎಂದು ಅವರು  ಆಭಿಪ್ರಾಯಪಟ್ಟಿದ್ದಾರೆ.

"ಪ್ರಸ್ತುತ ವಿಶ್ವಶಾಂತಿ ನಿಜಕ್ಕೂ ಅಪಾಯಕ್ಕೆ ಸಿಲುಕಿದ್ದು, ಕೋಮು ಘರ್ಷಣೆಗಳು ನಮ್ಮ ದೊಡ್ಡ ಸಮಸ್ಯೆಯಲ್ಲ. ತಮ್ಮ ಸ್ವಹಿತಾಸಕ್ತಿಗೆ ಧರ್ಮವನ್ನು ದುರುಪಯೋಗ ಮಾಡಿಕೊಳ್ಳುವವರಿಂದಲೇ ವಿಶ್ವಶಾಂತಿಗೆ ದೊಡ್ಡ  ಬೆದರಿಕೆ ಎದುರಾಗಿದೆ. ಇಂತಹ ವ್ಯಕ್ತಿಗಳಿಂದ ಧರ್ಮವನ್ನು ಸಮಾಜದಲ್ಲಿ ದುರ್ಬಳಕೆಯಾಗುತ್ತಿದೆ. ಹೀಗಾಗಿ ಧಾರ್ಮಿಕ ಮುಖಂಡರು ಒಂದು ಹೆಜ್ಜೆ ಮುಂದೆ ವಿಶ್ವಶಾಂತಿಗಾಗಿ ದುಡಿಯಬೇಕು ಎಂದು ಲೆಮನ್ಹ್ ಆರ್  ಗ್ಬೋವಿ ಹೇಳಿದ್ದಾರೆ. ಇತ್ತೀಚೆಗೆ ದೆಹಲಿಯಲ್ಲಿ ನಡೆದ ನೊಬೆಲ್ ಸಲ್ಯೂಷನ್ಸ್ ಎಂಬ ಕಾರ್ಯಕ್ರಮದಲ್ಲಿ ಕೈಲಾಶ್ ಸತ್ಯಾರ್ಥಿ, ಲೆಮನ್ಹ್ ಆರ್ ಗ್ಬೋವಿ ಸೇರಿದಂತೆ 6 ನೊಬೆಲ್ ಪ್ರಶಸ್ತಿ ವಿಜೇತರು ಪಾಲ್ಗೊಂಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com