ಭಾರತ ಸರ್ಕಾರದ ಜೊತೆ ಛೋಟಾ ರಾಜನ್ ವಿಶೇಷ ಸಂಬಂಧ ಹೊಂದಿದ್ದ

ಬಾಲಿ ಪೊಲೀಸರಿಂದ ಬಂಧಿತನಾಗಿ ಭಾರತಕ್ಕೆ ಗಡಿಪಾರಾಗಿ ತಿಹಾರ ಜೈಲಿನಲ್ಲಿರುವ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಸಹಚರ ಛೋಟಾ ರಾಜನ್ ಭಾರತ ಸರ್ಕಾರದ ಜೊತೆ ವಿಶೇಷ ಸಂಬಂಧ
ಛೋಟಾ ರಾಜನ್
ಛೋಟಾ ರಾಜನ್

ನವದೆಹಲಿ: ಬಾಲಿ ಪೊಲೀಸರಿಂದ ಬಂಧಿತನಾಗಿ ಭಾರತಕ್ಕೆ ಗಡಿಪಾರಾಗಿ ತಿಹಾರ ಜೈಲಿನಲ್ಲಿರುವ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಸಹಚರ ಛೋಟಾ ರಾಜನ್ ಭಾರತ ಸರ್ಕಾರದ ಜೊತೆ ವಿಶೇಷ ಸಂಬಂಧ ಹೊಂದಿದ್ದ ಎಂದು ನಿವೃತ್ತ  ದೆಹಲಿ ಪೊಲೀಸ್ ಕಮಿಷನರ್ ನೀರಜ್ ಕುಮಾರ್ ಹೇಳಿದ್ದಾರೆ.

ದೆಹಲಿಯಲ್ಲಿ ನಡೆದ ಸಾಹಿತ್ಯ ಹಬ್ಬದಲ್ಲಿ ಪತ್ರಕರ್ತರ ಪ್ರಶ್ನೆಗೆ ಈ ರೀತಿಯಾಗಿ ಉತ್ತರಿಸಿದ್ದಾರೆ. 1993 ರ ಮುಂಬೈ ಸ್ಫೋಟದ ನಂತರ ಛೋಟಾ ರಾಜನ್ ಮೂರು ಬಾರಿ ತಾವು ದೂರವಾಣಿಯಲ್ಲಿ ಸಂಭಾಷಣೆ ನಡೆಸಿರುವುದಾಗಿ ನೀರಜ್ ಕುಮಾರ್ ಹೇಳಿಕೊಂಡಿದ್ದಾರೆ.

1990 ರಲ್ಲಿ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಪೊಲೀಸರಿಗೆ ಶರಣಾಗಲು ಬಯಸಿದ್ದ ಎಂದು ನೀರಜ್ ಕುಮಾರ್ ಕಳೆದ ವರ್ಷ ಬಿಡುಗಡೆ ಮಾಡಿದ ತಮ್ಮ ಪುಸ್ತಕದಲ್ಲಿ ಬರೆದಿದ್ದಾರೆ.

ಛೋಟಾ ರಾಜನ್ ನಿಂದ ದಾವೂದ್ ಇಬ್ರಾಹಿಂ ನನ್ನು ಕರೆತರಲು ಸಹಾಯ ಮಾಡುತ್ತಾನೆ ಎಂಬ ಆಶಯ ಹೊಂದಬಾರದು ಎಂದು ನೀರಜ್ ಕುಮಾರ್ ಹೇಳಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com