ಸೆಲ್ಫಿ ತೆಗೆಯುವಾಗ ಯುವತಿ ಸಾವು; ಆಕೆಯ ಸ್ನೇಹಿತೆಯರೂ ನೀರು ಪಾಲು
ಮುಂಬೈ: ಇಲ್ಲಿನ ಕಾಲೇಜು ಯುವತಿಯೊಬ್ಬಳು ತನ್ನ ಕಾಲೇಜು ಮಿತ್ರರೊಂದಿಗೆ ಸಮುದ್ರ ತೀರದ ಸಮೀಪ ಸೆಲ್ಫಿ ತೆಗೆದುಕೊಳ್ಳುವಾಗ ಕಾಲು ಜಾರಿ ಬಿದ್ದು ನೀರು ಪಾಲಾದ ಘಟನೆ ಬಾಂದ್ರಾದ ಸಮೀಪ ಶನಿವಾರ ಬೆಳಗ್ಗೆ ನಡೆದಿದೆ. ಆಕೆಯನ್ನು ರಕ್ಷಿಸಲು ಹೋದ ಅವಳ ಇಬ್ಬರು ಸ್ನೇಹಿತರು ಕೂಡ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ಇಂದು ಬೆಳಗ್ಗೆ ಮುಂಬೈಯ ಬಾಂದ್ರಾ ವೋರ್ಲಿ ಸಮುದ್ರ ತೀರದಲ್ಲಿ ಮೂವರು ಕಾಲೇಜು ಯುವತಿಯರು ಅಡ್ಡಾಡುತ್ತಿದ್ದರು. ಈ ಸಂದರ್ಭದಲ್ಲಿ ಸಮುದ್ರ ತೀರದ ಬಂಡೆ ಕಲ್ಲಿನ ಮೇಲೆ ನಿಂತು ಫೋಟೋ ತೆಗೆದುಕೊಳ್ಳುವ ಮನಸ್ಸಾಯಿತು. ಮೂವರು ಕಲ್ಲಿನ ಮೇಲೆ ಹತ್ತಿ ನಿಂತು ಫೋಟೋ ತೆಗೆಯುತ್ತಿದ್ದಾಗ ಒಬ್ಬಳು ಕಾಲು ಜಾರಿ ನೀರಿಗೆ ಬಿದ್ದಳು. ಆಗ ಅವಳನ್ನು ರಕ್ಷಿಸಲೆಂದು ಉಳಿದಿಬ್ಬರು ನೀರಿಗೆ ಹಾರಿ ಸಮುದ್ರದ ಅಲೆಯ ಹೊಡೆತಕ್ಕೆ ಸಿಕ್ಕಿ ಸಾವನ್ನಪ್ಪಿದ್ದಾರೆ.
ಮೂವರು ಕಾಲೇಜು ವಿದ್ಯಾರ್ಥಿನಿಯರು ನೀರಿಗೆ ಬಿದ್ದಿದ್ದನ್ನು ನೋಡಿದ ಸ್ಥಳೀಯರು ಪೊಲೀಸರಿಗೆ ತಿಳಿಸಿದರು. ಆಗ ಒಬ್ಬ ರಮೇಶ್ ವಾಲುಂಜ್ ಎಂಬ ಯುವಕ ಅವರನ್ನು ರಕ್ಷಿಸಲು ಹೋಗಿದ್ದು, ಆತನೂ ಕಾಣೆಯಾಗಿದ್ದಾನೆ. ಅಗ್ನಿ ಶಾಮಕ ದಳದವರು, ಪೊಲೀಸರು ಸ್ಥಳಕ್ಕೆ ಧಾವಿಸಿ ಹುಡುಕಾಟದಲ್ಲಿ ನಿರತರಾಗಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ