ಜಬಲ್‍ಪುರ: ಐಎಎಸ್ ಪಾಸು ಮಾಡಿದ್ದ ಮಧ್ಯಪ್ರದೇಶದ ಈ ಯುವಕ ಮನಸ್ಸು ಮಾಡಿದ್ದರೆ ಅಧಿಕಾರಿಯೂ ಆಗಬಹುದಿತ್ತು, ವೈದ್ಯನೂ ಆಗಬಹುದಿತ್ತು. ಆದರೆ, ಅವರು ಆಯ್ಕೆ ಮಾಡಿಕೊಂಡದ್ದು ಮಾತ್ರ ಪಾಠ ಹೇಳುವುದನ್ನು. ರೋಮನ್ ಸೈನಿ ತಮ್ಮ 16ನೇ ವರ್ಷಕ್ಕೆ ಮೆಡಿಕಲ್ ಸಿಇಟಿ ಪಾಸು ಮಾಡಿದ್ದರು.
22ನೇ ವಯಸ್ಸಿಗೇ ಐಎಎಸ್ ಪಾಸು ಮಾಡಿದ್ದರು. ಮಧ್ಯಪ್ರದೇಶದ ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಸಹಾಯಕ ಅಯುಕ್ತರಾಗಿಯೂ ನೇಮಕವಾಗಿದ್ದರು. ಆದರೆ, ಸೈನಿ ಸೆಪ್ಟೆಂಬರ್‍ನಲ್ಲಿ ಹುದ್ದೆಗೆ ರಾಜಿನಾಮೆ ನೀಡಿದ್ದಾರೆ. ಅದು ಇನ್ನಷ್ಟೇ ಅಂಗೀಕಾರವಾಗಬೇಕಿದೆ. ಅವರು ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಗೆ ಮಾರ್ಗದರ್ಶನ ನೀಡುವ ಕೆಲಸ ಆರಂಭಿಸಿದ್ದಾರೆ. ತಮ್ಮ ಸ್ನೇಹಿತನ ಜತೆ `Unacademy` ಎಂಬ ಯ್ಯೂಟ್ಯೂಬ್ ಟ್ಯೂಷನ್ ಆರಂಭಿಸಿರುವ ಅವರು, ನಾಗರಿಕ ಸೇವಾ ಪರೀಕ್ಷೆಗೆ ಸಿದ್ಧವಾಗುತ್ತಿರುವ ವಿದ್ಯಾರ್ಥಿಗಳಿಗೆ ಉಚಿತ ಮಾರ್ಗದರ್ಶನ ನೀಡುತ್ತಿದ್ದಾರೆ.
Advertisement