ತಮಿಳುನಾಡು ದೇವಾಲಯಗಳಲ್ಲಿ ಭಕ್ತರಿಗೆ ವಸ್ತ್ರ ಸಂಹಿತೆ: ಆದೇಶ ಮುಂದೂಡಿದ ಮದ್ರಾಸ್ ಹೈಕೋರ್ಟ್

ತಮಿಳುನಾಡಿನ ಹಿಂದೂ ದೇವಾಲಯಗಳಿಗೆ ಬರುವ ಭಕ್ತಾದಿಗಳಿಗೆ ಜನವರಿ 1 ರಿಂದ ಜಾರಿಗೆ ಬರುವಂತೆ ಆದೇಶಿಸಿದ್ದ ವಸ್ತ್ರ ಸಂಹಿತೆ ನಿಯಮವನ್ನು ಮದ್ರಾಸ್ ಹೈಕೋರ್ಟ್ ಜನವರಿ 18 ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಚೆನ್ನೈ: ತಮಿಳುನಾಡಿನ ಹಿಂದೂ ದೇವಾಲಯಗಳಿಗೆ ಬರುವ ಭಕ್ತಾದಿಗಳಿಗೆ ಜನವರಿ 1 ರಿಂದ ಜಾರಿಗೆ ಬರುವಂತೆ ಆದೇಶಿಸಿದ್ದ ವಸ್ತ್ರ ಸಂಹಿತೆ ನಿಯಮವನ್ನು ಮದ್ರಾಸ್ ಹೈಕೋರ್ಟ್ ಜನವರಿ 18ರವರೆಗೆ ಮುಂದೂಡಿದೆ.

ತಮಿಳುನಾಡಿನ ಹಿಂದೂ ಧಾರ್ಮಿಕ ಹಾಗೂ ಚಾರಿಟಬಲ್ ದತ್ತಿ ಇಲಾಖೆ (ಎಚ್ಆರ್ ಹಾಗೂ ಸಿಇ) ಅಧೀನಕ್ಕೆ ಒಳಪಡುವ ಎಲ್ಲಾ ದೇಗುಲಗಳಲ್ಲಿ ಈ ವಸ್ತ್ರ ಸಂಹಿತೆ ಜಾರಿಗೊಳಿಸಬೇಕು ಎಂದು ಮದ್ರಾಸ್ ಹೈಕೋರ್ಟ್ ನ ಮಧುರೈ ಪೀಠ ನವೆಂಬರ್ ನಲ್ಲಿ ಆದೇಶಿಸಿತ್ತು.

ಪುರುಷರಿಗೆ ಧೋತಿ ಹಾಗೂ ಪೈಜಾಮಾ, ಶರ್ಟ್ ಹಾಗೂ ಪ್ಯಾಂಟ್ ಜೊತೆಗೆ ಪ್ಯಾಂಟ್ ಧರಿಸಬಹುದು. ಮಹಿಳೆಯರು ಸೀರೆ, ಲಂಗ ದಾವಣಿ ಅಥವಾ ಚೂಡಿದಾರ್ ಧರಿಸಿ ಬರಬೇಕು. ಈ ನಿಯಮಗಳು ಮಕ್ಕಳಿಗೂ ಅನ್ವಯವಾಗುತ್ತದೆ ಎಂದು ಹೇಳಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com