ಅಮೆರಿಕದಿಂದ ಮತ್ತೆ 6 ಭಾರತೀಯ ವಿದ್ಯಾರ್ಥಿಗಳ ಗಡಿಪಾರು

ಅಮೆರಿಕಾದ ವಿಶ್ವವಿದ್ಯಾನಿಲಯಗಳಲ್ಲಿ ಪ್ರವೇಶ ಪಡೆಯುವ ವಿದ್ಯಾರ್ಥಿಗಳ ಸಂಕಷ್ಟ ಮುಂದುವರೆದಿದ್ದು, ಆಂಧ್ರಪ್ರದೇಶದ ಆರು ವಿದ್ಯಾರ್ಥಿಗಳನ್ನು ಅಮೆರಿಕ ಗಡಿಪಾರು ಮಾಡಿದೆ.
ವೀಸಾ (ಸಂಗ್ರಹ ಚಿತ್ರ)
ವೀಸಾ (ಸಂಗ್ರಹ ಚಿತ್ರ)

ಹೈದರಾಬಾದ್: ಅಮೆರಿಕಾದ ವಿಶ್ವವಿದ್ಯಾನಿಲಯಗಳಲ್ಲಿ ಪ್ರವೇಶ ಪಡೆಯುವ
ಭಾರತೀಯ ವಿದ್ಯಾರ್ಥಿಗಳ ಸಂಕಷ್ಟ ಮುಂದುವರೆದಿದ್ದು, ಆಂಧ್ರಪ್ರದೇಶದ ಆರು ವಿದ್ಯಾರ್ಥಿಗಳನ್ನು ಅಮೆರಿಕ ಗಡಿಪಾರು ಮಾಡಿದೆ.

ಜಾನ್ ಎಫ್ ಕೆನಡಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಿದ್ಯಾರ್ಥಿಗಳನ್ನು ಗಡಿಪಾರು ಮಾಡಲಾಗಿದೆ. ಯುಎಸ್ ವಿವಿಗಳಲ್ಲಿ ಪ್ರವೇಶ ಪಡೆದಿರುವುದು ಹಾಗೂ ಗಡಿಪಾರಾಗಿರುವ ಬಗ್ಗೆ  ಪ್ರಶ್ನಿಸಿದ ಮಾಧ್ಯಮಗಳಿಗೆ ವಿದ್ಯಾರ್ಥಿಗಳು ಸ್ಪಷ್ಟ ಮಾಹಿತಿ ನೀಡಿಲ್ಲ. ವಿದ್ಯಾರ್ಥಿಗಳ ಪೋಷಕರು ಸಹ ಈ ಬಗ್ಗೆ ಮೌನ ವಹಿಸಿದ್ದಾರೆ.

ಗಡಿಪಾರಾಗಿರುವ ವಿದ್ಯಾರ್ಥಿಗಳನ್ನು ಸತತ 24 ಗಂಟೆಗಳ ಕಾಲ ವಿಚಾರಣೆಗೊಳಪಡಿಸಿದ್ದ ಅಮೆರಿಕ ಅಧಿಕಾರಿಗಳು ಆಹಾರ ನೀರು ಸೇವಿಸುವುದಕ್ಕೂ ವಿದ್ಯಾರ್ಥಿಗಳಿಗೆ ಅವಕಾಶ ನೀಡಿಲ್ಲ ಎಂಬ ಆರೋಪ ಕೇಳಿಬಂದಿದೆ. ವಿಚಾರಣೆ ಬಳಿಕ ವೀಸಾ ರದ್ದುಗೊಳಿಸಿದ ಅಧಿಕಾರಿಗಳು ತಕ್ಷಣವೆ ಹೈದರಾಬಾದ್ ಗೆ ವಾಪಸ್ ತೆರಳುವಂತೆ ಸೂಚಿಸಿದ್ದಾರೆ. 
ಗಡಿಪಾರಾಗಿರುವ ವಿದ್ಯಾರ್ಥಿಗಳು ನಾರ್ತ್ ವೆಸ್ಟರ್ನ್ ಪಾಲಿಟೆಕ್ನಿಕ್ ವಿಶ್ವವಿದ್ಯಾಲಯ ಮತ್ತು ಸಿಲಿಕಾನ್ ವ್ಯಾಲಿ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡಲು ಅಮೆರಿಕಾಗೆ ತೆರಳುತ್ತಿದ್ದರು ಎಂದು ಹೇಳಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com